spot_img
spot_img

ವಸ್ತ್ರಧೋತಿ ಯೋಗದಲ್ಲಿ ವಿಶ್ವದಾಖಲೆಯ ಯೋಗಪಟು ಕಾರ್ತಿಕ ಬೆಲ್ಲದ

Must Read

spot_img
- Advertisement -

ಇತ್ತೀಚಿಗೆ ಕಾರ್ತಿಕ ನನಗೆ ಪೋನ್ ಮಾಡಿ ನನಗೆ ಯೋಗ ವಿಷಯದಲ್ಲಿ ಪಿ.ಎಚ್,ಡಿ ಸೀಟು ಸಿಕ್ಕಿತು ಸರ್ ಎಂದನು. ತುಂಬಾ ಸಂತೋಷದಿಂದ ಅಭಿನಂದನೆಗಳು ಕಾರ್ತಿಕ ನಿನ್ನ ಸಾಧನೆಗೆ ಮತ್ತೊಂದು ಮುನ್ನುಡಿ ಮುಂದುವರೆದು ಯಶಸ್ಸನ್ನು ಗಳಿಸು ಎಂದು ಅಭಿನಂದಿಸಿದೆ. ತನ್ನ ಬದುಕಿನ ದಿನನಿತ್ಯದ ಘಟನೆಗಳ ಕ್ಷಣಗಳ ಜೊತೆಗೆ ಯೋಗದ ಹುಚ್ಚು ಹಿಡಿಸಿಕೊಂಡು ಈಗ ಯೋಗದ ಮೂಲಕ ಜನರಿಗೆ ಚಿಕಿತ್ಸೆ ನೀಡುವ ಮೂಲಕ ವಿಭಿನ್ನ ಸಾಧನೆಯಲ್ಲಿ ತೊಡಗಿರುವ ನಮ್ಮ ಊರಿನ ಹೆಮ್ಮೆಯ ಪ್ರತಿಭೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಚಿಕ್ಕ ವಯಸ್ಸಿನಲ್ಲಿ ಹಿರಿಯ ಸಾಧನೆಯತ್ತ ಹೆಜ್ಜೆ ಇಡುತ್ತಿರುವ ಕಾರ್ತಿಕ ಬೆಳೆದು ಬಂದ ಹಾದಿ ಹಾಗೂ ಯೋಗವನ್ನು ಅವನು ನೋಡುತ್ತಿರುವ ರೀತಿ ಅನನ್ಯ ಈ ದಿಸೆಯಲ್ಲಿ ಕಾರ್ತಿಕ ಬೆಳೆದು ಬಂದ ಹಾದಿಯ ಕುರಿತು ವಿಹಂಗಮ ನೋಟ.

ಪ್ರತಿ ವಷ್ ಜೂನ್ ೨೧ ನ್ನು ಯೋಗ ದಿನಾಚರಣೆ ಅಂತಾ ಆಚರಿಸುತ್ತಿರುವುದು ನಮಗೆಲ್ಲ ಗೊತ್ತಿರುವ ಸಂಗತಿ ಈ ದಿನದಂದು ಜಗತ್ತಿನ ಎಲ್ಲ ರಾಷ್ಟ್ರಗಳು ಯೋಗಕ್ಕೆ ಸಂಬಂಧಿಸಿದ ಸಂಗತಿಗಳನ್ನು ಯೋಗದ ಮಹತ್ವ ಸಾರುವ ಸಂದೇಶಗಳನ್ನು ಹಾಕುವ ಜೊತೆಗೆ ಯೋಗಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ಮಾಡುತ್ತಿರುವುದನ್ನು ಗಮನಿಸಿರಬಹುದು. ಆದರೆ ಯೋಗದ ಮಹತ್ವವನ್ನು ಅರಿತು ಅದನ್ನು ತನ್ನಲ್ಲಿ ರೂಢಿಸಿಕೊಂಡು ಯೋಗ ವಿಷಯವನ್ನು ತೆಗೆದುಕೊಂಡು ಸ್ನಾತಕೋತ್ತರ ಪದವಿ ಪೂರೈಸಿ ಸದ್ಯ ಕೋರೋನಾ ಸಂದರ್ಭದಲ್ಲಿ ಯೋಗ ಚಿಕಿತ್ಸಕನಾಗಿ ಜೀವನ ರೂಪಿಸಿಕೊಳ್ಳುತ್ತಿರುವ ಗ್ರಾಮೀಣ ಪ್ರದೇಶದ ಯುವಕನ ಬಗ್ಗೆ ನಮಗೆಷ್ಟು ಗೊತ್ತು.?

- Advertisement -

ನಮ್ಮ ನಡುವೆ ಅಪರೂಪದ ಸಾಧಕರೂ ಇದ್ದಾರೆ ಎನ್ನುವುದಕ್ಕೆ ಮುನವಳ್ಳಿಯ ಕಾರ್ತಿಕ ಬೆಲ್ಲದ ಎಲೆ ಮರೆಯ ಕಾಯಿಯಂತೆ ಯೋಗದಲ್ಲಿ ಸಾಧನೆಗೈಯುತ್ತಿರುವ ಪ್ರತಿಭೆ.ನವೆಂಬರ್ ೨೪ ೨೦೨೦. ಅಂತರ್ಜಾಲದಲ್ಲಿ ಕರ್ನಾಟಕ ಯುನಿಯನ್ ಆಫ್ ವರ್ಕಿಂಗ್ ಜರ್ನಾಲಿಸ್ಟ ಬೆಂಬಲದೊಂದಿಗೆ ಜರುಗಿದ ವಸ್ತ್ರಧೋತಿ ಯೋಗದಲ್ಲಿ ೧೮ ಸೆಕೆಂಡುಗಳಲ್ಲಿ ವಸ್ತ್ರಧೋತಿಯನ್ನು ಎಂಟು ಮೀಟರ್ ಬಟ್ಟೆ ಮೂರು ಇಂಚು ಅಗಲ. ಬಳಸಿ ವಿಶ್ವದಾಖಲೆ ಮಾಡಿದರು. ಈ ಹಿಂದಿನ ದಾಖಲೆ ರಾಜಸ್ಥಾನದ ಕೋಟದಲ್ಲಿ ೨೦೧೮ ರ ಜೂನ್ ೨೦ ರಂದು ರಾಮದಾಸ್ ಚೌಧರಿ ಎಂಬುವರು ೭ ಮೀಟರ್ ಉದ್ದ ಮೂರು ಇಂಚ ಅಗಲ ಬಟ್ಟೆ ಬಳಸಿ ಎರಡು ನಿಮಿಷ ಇಪ್ಪತ್ತೇಳು ಸೆಕೆಂಡುಗಳಲ್ಲಿ ಬಟ್ಟೆಯನ್ನು ನುಂಗಿ ಹೊರತಗೆಯುವ ಮೂಲಕ ವಿಶ್ವದಾಖಲೆ ಮಾಡಿದ್ದು ಇದುವರೆಗಿನ ದಾಖಲೆಯಾಗಿದ್ದು. ಆದರೆ ಕಾರ್ತಿಕ ಬೆಲ್ಲದ ಕೇವಲ ೧೮ ಸೆಕೆಂಡುಗಳಲ್ಲಿ ಎಂಟು ಮೀಟರ್ ಉದ್ದ ಮೂರು ಮೀಟರ್ ಅಗಲ ಬಟ್ಟೆ ಬಳಸಿ ನುಂಗುವ ಮತ್ತು ಹೊರತೆಗೆಯುವ ಮೂಲಕ ಹಿಂದಿನ ದಾಖಲೆಯನ್ನು ಅಳಿಸಿ ಹೊಸ ದಾಖಲೆ ಬರೆದದ್ದು ಈಗ ಇತಿಹಾಸ. ಇದು ಸಾಮಾನ್ಯ ಸಂಗತಿಯೇನಲ್ಲ. ಮುನವಳ್ಳಿಯಂತಹ ಪಟ್ಟಣ ಪ್ರದೇಶದಲ್ಲಿ ಇದ್ದು ಮಂಗಳೂರು ವಿಶ್ವವಿದ್ಯಾಲಯದವರೆಗೂ ವ್ಯಾಸಂಗಕ್ಕೆ ಹೋಗಿ ಎಂ.ಎಸ್ಸಿ ಯೋಗಿಕ್ ಸೈನ್ಸ ವಿಭಾಗದಲ್ಲಿ ಐದನೆಯ ರ‍್ಯಾಂಕ್‌ನೊಂದಿಗೆ ಉತ್ತೀರ್ಣರಾಗಿದ್ದು ನಾಡಿನ ಜನತೆ ಯೋಗದಲ್ಲಿ ಈ ಪ್ರತಿಭೆಯನ್ನು ಗೌರವಿಸುವಂತಾಗಿದ್ದು ಅಭಿನಂದನಾರ್ಹ ಸಂಗತಿ.

ಅಷ್ಟೇ ಅಲ್ಲ ೨೦೧೮ ಜೂನ್ ೧೮ ರಿಂದ ೨೧ ರ ವರೆಗೆ ರಾಜಸ್ಥಾನದ ಕೋಟದಲ್ಲಿ ಸಂಘಟಿಸಿದ ಪತಂಜಲಿ ಸಂಸ್ಥೆಯವರು ನಡೆಸಿದ ಯೋಗ ಪ್ರದರ್ಶನದಲ್ಲಿ ದೇಶದ ಉದ್ದಗಲಕ್ಕೂ ವಿವಿಧ ಯೋಗಪಟುಗಳು ಭಾಗವಹಿಸಿದ್ದ “ಗೋಲ್ಡನ್ ಬುಕ್ ಆಪ್ ವರ್ಲ್ಡ ರೆಕಾರ್ಡ” ದಲ್ಲಿ ಮುನವಳ್ಳಿಯ ಯೋಗಪಟು ಕಾರ್ತಿಕ್ ಮಹಾಂತೇಶ ಬೆಲ್ಲದ ಬಾಲಕ ಅಭಿಷೇಕ್ ಜೊತೆಗೂಡಿ ಸರ್ವಾಂಗಾಸನದಲ್ಲಿ ಗಂಡಬೇರುಂಡಾಸನವನ್ನು ೮ ನಿಮಿಷ ೪ ಸೆಕೆಂಡುಗಳಲ್ಲಿ ಪ್ರದರ್ಶಿಸುವ ಮೂಲಕ ದಾಖಲೆಯನ್ನು ಮಾಡಿದ್ದು.ಯೋಗ ದಿನದಂದು ಈ ದಾಖಲೆಗೆ ಪುರಸ್ಕಾರ ದೊರಕಿದ್ದು ಗ್ರಾಮೀಣ ಪ್ರತಿಭೆಯ ಸಾಧನೆಗೆ ಮುನ್ನುಡಿ ಕಾರ್ತಿಕ್ ಈಗಾಗಲೇ ದೇಶದಾದ್ಯಂತ ಜರುಗಿದ ಯೋಗ ಸ್ಪರ್ಧೆಯಲ್ಲಿ ಅನೇಕ ಬಹುಮಾನಗಳನ್ನು ಪಡೆದಿದ್ದು. ಯೋಗ ಭಾಸ್ಕರ. ಯೋಗ ಪ್ರವೀಣ ಪುರಸ್ಕಾರಗಳನ್ನು ಕೂಡ ಪಡೆದಿರುವನು.

- Advertisement -

ಯೋಗ ಎಂದರೆ (ಸಂಸ್ಕೃತ,ಪಾಲಿ) ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಮತ್ತು ಮಾನಸಿಕ ಆಚರಣೆಗಳ ಬೋಧನಶಾಖೆ. ಹಿಂದೂ,ಭೌದ್ಧ,ಜೈನ ಧರ್ಮಗಳಲ್ಲಿ ಈ ಪದವನ್ನು ಧ್ಯಾನದ ಆಚರಣೆಗಳೊಂದಿಗೆ ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ ರಾಜಯೋಗ,ಕರ್ಮಯೋಗ,ಜ್ಞಾನ ಯೋಗ,ಭಕ್ತಿಯೋಗ,ಹಠಯೋಗ, ಎಂಬ ಶಾಖೆಗಳುಂಟು.ತನ್ನ ಆಚರಣೆಗಳಿಂದ ತಲುಪಲು ಬಯಸುವ ಗುರಿಯವರೆಗೂ ಈ ಪದವನ್ನು ಅನ್ವಯಿಸಿಕೊಂಡಿರುವರು.

ಧ್ಯಾನದ ಮೂಲಕ ಪ್ರಜ್ಞೆಯ ಉನ್ನತ ಹಂತಗಳನ್ನು ಅನುಭವಿಸುವುದರ ತಂತ್ರಗಳನ್ನು ಯೋಗದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ಜೊತೆಗೆ ಶಾರೀರಿಕ ಸ್ವಾಸ್ತ್ಯವನ್ನು ಕಾಯ್ದುಕೊಳ್ಳುವ ಪ್ರಕ್ರಿಯೆಯನ್ನು ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧವರೆಗೂ ಆಕರ್ಷಿತರಾಗುತ್ತ ಯೋಗ ಮಾಡುವ ಮೂಲಕ ಬದುಕನ್ನು ರೂಪಿಸಿಕೊಳ್ಳುತ್ತಿರುವರು.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ಕಾರ್ತಿಕ ಮಹಾಂತೇಶ ಬೆಲ್ಲದ. ತನ್ನ ಕಿರಿಯ ವಯಸ್ಸಿನಲ್ಲಿ ರಾಷ್ಟ್ರಮಟ್ಟದಲ್ಲಿ ಯೋಗದಲ್ಲಿ ಮಿಂಚುತ್ತಿರುವ ಇವನ ಯೋಗದ ಆಸಕ್ತಿ ಎಷ್ಟಿದೆ ಎಂಬುದನ್ನು ನೋಡಿದರೆ ಆಶ್ಚರ್ಯ ಮತ್ತು ಅಭಿಮಾನ ಎನಿಸುತ್ತದೆ. ನಾಲ್ಕನೆಯ ತರಗತಿಯಿಂದಲೇ ಯೋಗ ಅಭ್ಯಾಸ ರೂಢಿಸಿಕೊಂಡ ಕಾರ್ತಿಕನಿಗೆ ತಾಯಿ ಸುಮಾ ತಂದೆ ಮಹಾಂತೇಶ ಬೆಲ್ಲದ ಇವರ ಪ್ರೋತ್ಸಾಹ ಯೋಗ ಕಲೆಯ ಮೂಲಕ ಏನನ್ನಾದರೂ ಸಾಧಿಸಬೇಕು ಎಂಬ ಮನೋಭಾವನೆ ಮೂಡುವಂತಾಯಿತು.

ಅದರ ಪ್ರತಿಫಲವೇ ಶಾಲಾ ಹಂತದ ಪ್ರತಿಭಾ ಕಾರಂಜಿಯಲ್ಲಿ ಬಹುಮಾನ ಗಿಟ್ಟಿಸಿದಾಗ ಮತ್ತಷ್ಟು ಆತ್ಮವಿಶ್ವಾಸ ಇಮ್ಮಡಿಯಾಯಿತು.ಮುನವಳ್ಳಿಯ ಅಜ್ಜಪ್ಪ ಗಡಮಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾದ ಪ್ರೋ.ಆರ್.ಎಚ್.ಪಾಟೀಲರ ಹಾಗೂ ಅಶೋಕ ಸಂಕಣ್ಣವರ ಇವರ ಪ್ರೋತ್ಸಾಹ ಇವರನ್ನು ತಾಲೂಕ,ಜಿಲ್ಲೆ,ರಾಜ್ಯ ಮಟ್ಟದವರೆಗೂ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡಿತು. ಒಂದರಿಂದ ಮೂರನೆ ತರಗತಿ ಮುನವಳ್ಳಿಯ ಎಂ.ಎಲ್.ಇ.ಎಸ್ ಶಾಲೆಯಲ್ಲಿ ಓದಿ, ಧಾರವಾಡ ಜಿಲ್ಲೆಯ ಹೆಬಸೂರಿನಲ್ಲಿ ೪ ಮತ್ತು ೫ ನೇ ತರಗತಿ ವ್ಯಾಸಾಂಗ ಮಾಡಿದ ಕಾರ್ತಿಕ ೬ ರಿಂದ ೭ ನೇ ತರಗತಿಯನ್ನು ಬೈಲಹೊಂಗಲದ ಕೆ.ಆರ್.ಸಿ.ಎಸ್. ಶಾಲೆಯಲ್ಲಿ ಓದಿದನು.೮ ರಿಂದ ೧೦ ರ ವರೆಗೆ ಕುಮಾರೇಶ್ವರ ಪ್ರೌಢಶಾಲೆ ಸವದತ್ತಿಯಲ್ಲಿ ಆಂಗ್ಲ ಮಾಧ್ಯಮದಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿ.ಯು.ಸಿ ಮುಗಿಸಿ ಸವದತ್ತಿಯ ಕೆ.ಎಲ್.ಇ ಸಂಸ್ಥೆಯ ಎಸ್.ವಿ.ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ.ಕಾಂ ಓದಿ ಕಾರ್ತಿಕ ಈ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ನೋಡಿದರೆ ಎಂಥವರೂ ಬೆರಗಾಗುವುದರಲ್ಲಿ ಸಂದೇಹವಿಲ್ಲ. ೨೦೦೯ ರಲ್ಲಿ ಮುನವಳ್ಳಿಯಲ್ಲಿ ಜರುಗಿದ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ ಕಾರ್ತಿಕ ಅದೇ ವರ್ಷ ಕರ್ನಾಟಕ ರಾಜ್ಯ ಯೋಗ ಚಾಂಪಿಯನ್ ಶಿಪ್ ದಲ್ಲಿ ಕೂಡ ಭಾಗವಹಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ.

೨೦೧೦ ರಲ್ಲಿ ಮುನವಳ್ಳಿಯಲ್ಲಿ ಜರುಗಿದ ಕರ್ನಾಟಕ ರಾಜ್ಯ ಯೋಗ ಚಾಂಪಿಯನ್ ಶಿಪ್ ದಲ್ಲಿ ದ್ವಿತೀಯ ಸ್ಥಾನಕ್ಕೇರಿದ.೨೦೧೧ ರಲ್ಲಿ ಪಾಂಡಿಚೇರಿಯ ಪ್ರವಾಸೋದ್ಯಮ ಇಲಾಖೆಯವರು ಜರುಗಿಸಿದ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.ಛಲ ಬಿಡದ ತ್ರಿವಿಕ್ರಮನಂತೆ ಸತತ ಯೋಗಾಭ್ಯಾಸವನ್ನು ಮುಂದುವರಿಸಿದ ಕಾರ್ತಿಕ ಬೆಂಗಳೂರಿನಲ್ಲಿ ೨೦೧೪ ರಲ್ಲಿ ಉತ್ತರ ಭಾರತ ಯೋಗಾಸನ ಶಾಲೆ ಹಾಗೂ ಎಸ್.ಜಿ.ಎಸ ಅಂತರಾಷ್ಟ್ರೀಯ ಯೋಗಾ ಸಂಸ್ಥೆಯವರು ಜಂಟೀಯಾಗಿ ನಡೆಸಿದ ಯೋಗ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದನು. ಬೀದರದಲ್ಲಿ ಜರುಗಿದ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ಯೋಗಾ ತಂಡದೊಳಗೆ ಆಯ್ಕೆಯಾಗುವ ಮೂಲಕ ಪಿ.ಯು.ಸಿ ವಿದ್ಯಾರ್ಥಿಗಳ ಯೋಗಾ ತಂಡದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡನು.

ರಾಷ್ಟ್ರೀಯ ಪತಂಜಲಿ ಯೋಗಾ ಕಪ್ ೨೦೧೪-೧೫ ರಲ್ಲಿ ಹರಿಯಾಣದಲ್ಲಿ ನಡೆಸಿದ ಅಖಿಲ ಭಾರತೀಯ ಯೋಗ ಚಾಂಪಿಯನ್ ಶಿಪ್ ಸ್ಪರ್ದೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ.

ಮತ್ತೊಮ್ಮೆ ೨೦೧೫ರಲ್ಲಿ ಪಾಂಡಿಚೇರಿಯ ಪ್ರವಾಸೋದ್ಯಮ ಇಲಾಖೆಯವರು ಜರುಗಿಸಿದ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ೨೦೧೧ ರಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ಕಾರ್ತಿಕ ಈ ಸಲ ಪ್ರಥಮ ಸ್ಥಾನ ಗಳಿಸಿದ.ಈ ಅವಧಿ ಅವನಿಗೆ ಯೋಗ ವಿಷಯ ಕುರಿತಂತೆ ನಾಗಾ ಸಾಧುಗಳ ಒಡನಾಟ ಬೆಳೆಯಿತು. “ಕರ್ನಾಟಕದಲ್ಲಿ ಇರುವ ಚಿಕ್ಕೊಪ್ಪ ಶಿವಾನಂದ ಸ್ವಾಮಿಗಳು,ಬೆಳ್ಳಿಕಟ್ಟಿಯ ಸತ್ಯ ದೇವದಾಸ್ ಇವರ ನಿಕಟ ಪರಿಚಯ.ಯೋಗ ಪ್ರತಿನಿಧಿ ನಿರಂಜನ ಮೂರ್ತಿ(ಬೆಂಗಳೂರು) ಹಾಗೂ ವಿದೇಶದಲ್ಲಿ ನೆಲೆಸಿರುವ ಗೌರವ ಶರ್ಮಾ (ಜಾಗತಿಕ ಯೋಗ ಚಾಂಪಿಯನ್.ವಿಯೆಟ್ನಾಂ) ಇವರ ಒಡನಾಟ ಯೋಗ ಸಾಧನೆಗೆ ಪ್ರೇರಕ ಎಂದು ಹೆಮ್ಮೆಯಿಂದ ನುಡಿಯುವ ಕಾರ್ತಿಕ ದೂರದಲ್ಲಿರುವ ಗುರುಗಳನ್ನು ಪೋನ್ ಮೂಲಕ ಸಂಪರ್ಕಿಸಿ ಸಲಹೆ ಪಡೆಯುವೆ” ಎಂದು ಹೇಳುವನು.

೨೦೧೫ ರಲ್ಲಿ ರಾಮನಗರದಲ್ಲಿ ಜರುಗಿದ ಉತ್ತರ ಭಾರತ ಯೋಗ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,ಚನ್ನೈನಲ್ಲಿ ಜರುಗಿದ ರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್‌ಲ್ಲಿ ಪ್ರಥಮ ಸ್ಥಾನ, ಅದೇ ವರ್ಷ ಕಂಚಿಪುರಂದಲ್ಲಿ ಜರುಗಿದ ೧೬ನೇ ರಾಷ್ಟ್ರೀಯ ಯೋಗ ಚಾಂಪಯನ್ ಶಿಪ್‌ಲ್ಲೂ ಕೂಡ ಪ್ರಥಮ ಸ್ಥಾನ. ನಂತರ ಬೆಂಗಳೂರಿನಲ್ಲಿ ೧೩ನೇ ಉತ್ತರ ಭಾರತೀಯ ಯೋಗ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ೨೦೧೫ ನನ್ನ ಪಾಲಿಗೆ ಅದೃಷ್ಟ ತಂದ ವರ್ಷ ಸತತ ನಾಲ್ಕು ಸ್ಪರ್ದೆಗಳನ್ನುಎದುರಿಸಿ ಪ್ರಥಮ ಸ್ಥಾನ ಗಳಿಸುವಂತಾಯಿತು.

ಇದು ನನ್ನ ತಂದೆ-ತಾಯಿ ಗುರುಗಳಿಗೆ ಯೋಗ ಕುರಿತು ಮಾರ್ಗದರ್ಶನ ನೀಡುವ ಹಿರಿಯರಿಗೆ ಸಲ್ಲುತ್ತದೆ ಎಂದು ಅಭಿಮಾನದಿಂದ ನುಡಿಯುತ್ತಾನೆ. ಈ ಎಲ್ಲ ಸಾಧನೆ ಗಮನಿಸಿ ಅಮೇರಿಕದ ಪ್ಲೋರಿಡಾ ವೈ.ಎಸ್.ಎ.ಎಂ ಸಂಸ್ಥೆ ಹಾಗೂ ಎಸ್.ಜಿ.ಎಸ್ ಇಂಟರನ್ಯಾಶನಲ್ ಯೋಗ ಪೆಡರೇಷನ್ ಇಂಡಿಯ ಇವರು ಜಂಟಿಯಾಗಿ ಕೊಡಮಾಡುವ ಪ್ರಶಸ್ತಿ “ಯೋಗ ಪ್ರವೀಣ” ೨೦೧೫ ಪ್ರಶಸ್ತಿ ಕಾರ್ತಿಕನ ಮುಕುಟವೇರಿತು. ಅಷ್ಟೇ ಅಲ್ಲ ಪ್ರತಿವರ್ಷ ಪಾಂಡಿಚೇರಿಯ ಯೋಗಾ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ,ದ್ವಿತೀಯ,ತೃತೀಯ ಸ್ಥಾನ ಗಳಿಸುತ್ತ ಬಂದಿದ್ದ ಕಾರ್ತಿಕನ ಪ್ರತಿಭೆ ಮೆಚ್ಚಿ ೨೦೧೬ ಜನೇವರಿ ೪ ರಿಂದ ೭ ರ ವರೆಗೆ ಪಾಂಡಿಚೇರಿಯಲ್ಲಿ ಜರುಗಿದ ಜಾಗತಿಕ ಯೋಗ ಸ್ಪರ್ಧೆಯಲ್ಲಿ ಕಾರ್ತಿಕನಿಗೆ “ಅತ್ಯತ್ತಮ ಮೌಲ್ಯವುಳ್ಳ ಯೋಗ ಸಾಧಕ” (MOST VALUABLE YOGA PLAYER IN THE WORLD) ಪ್ರಶಸ್ತಿ ನೀಡಿ ಗೌರವಿಸಿದರು.

ಕಾರ್ತಿಕ ಪ್ರಶಸ್ತಿಗಳ ಮೇಲೆ ಪ್ರಶಸ್ತಿ ಪಡೆಯುತ್ತ ಮುನವಳ್ಳಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಯೋಗ ಕಲಿಸುವಂತೆ ಯಾರಾದರೂ ಆಮಂತ್ರಣ ನೀಡಿದರೆ ಅಲ್ಲಿಗೆ ಹೋಗಿ ತನ್ನ ವಿದ್ಯಾರ್ಥಿ ಜೀವನದ ನಡುವೆ ಯೋಗಾಭ್ಯಾಸ ಕಲಿಸುವ ಮೂಲಕ ಹತ್ತಾರು ಸಹೃದಯರ ಮನಗೆದ್ದ. ಇಷ್ಟಾದರೂ ಇವನ ಸಾಧನೆಯ ಹಸಿವು ಇನ್ನೂ ತೀರಿಲ್ಲ. ಪೆಬ್ರುವರಿ ೧೨ ಮತ್ತು ೨ ೨೦೧೬ ರಾಯಭಾಗದಲ್ಲಿ ಜರುಗಿದ ಇಂಟರ್ ಕಾಲೇಜ ಸಿಂಗಲ್ ಜೋನ್ ಯೋಗ ಚಾಂಪಿಯನ್ ಶಿಪ್‌ಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಜೊತೆಗೆ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಜರುಗುವ ಯೋಗ ಚಾಂಪಿಯನ್ ಶಿಪ್ ವಿಶ್ವವಿದ್ಯಾಲಯಗಳ ಪ್ರಶಸ್ತಿಯ ತಂಡದಲ್ಲಿ ೨೧ ಮತ್ತು ೨೩ ಮಾರ್ಚ ತಿಂಗಳಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ತಂಡದಲ್ಲಿ ಭಾಗವಹಿಸಿದ್ದು ಈ ತಂಡದ ಸಾಧನೆ ವಿಶ್ವವಿದ್ಯಾಲಯಕ್ಕೆ ೧೦ ನೇ ಸ್ಥಾನ ದೇಶೀಯ ಮಟ್ಟದಲ್ಲಿ ದೊರೆಯುವಂತಾಗಲು ನಮ್ಮ ತಂಡದ ಸದಸ್ಯರ ಸಾಂಘಿಕ ಪ್ರಯತ್ನ ಎಂದು ಹೆಮ್ಮೆಯಿಂದ ನುಡಿಯುವ ಕಾರ್ತಿಕ ಬಿ.ಕಾಂ ಪದವಿ ಪೂರೈಸಿದರು.ಹಾಗೆಯೇ ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಪದವಿ ಮುಗಿಸಿ ಸದ್ಯ ಪಿ. ಎಚ್. ಡಿ ಸಂಶೋಧನೆ ಯಲ್ಲಿ ನಿರತನಾಗಿರುವನು.

ಯೋಗ ಸಂಸ್ಕೃತ ವಿಶ್ವವಿದ್ಯಾಲಯ ಪ್ಲೋರಿಡಾ,ತಮಿಳುನಾಡಿನ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಶ್ವವಿದ್ಯಾಲಯ ಇವರ ಸಹಯೋಗದಲ್ಲಿ ಜರುಗಿದ ಯೋಗ ಪ್ರದರ್ಶನ ಮತ್ತು ಸ್ಪರ್ಧೆ ಕಾರ್ಯಕ್ರಮದಲ್ಲಿ ಕಾರ್ತಿಕನಿಗೆ “ಯೋಗ ಭಾಸ್ಕರ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೋವಿಡ್ ಸಂದರ್ಭದಲ್ಲಿ ಮನೆಯಲ್ಲಿಯೇ ಇದ್ದುಕೊಂಡು ಯೋಗಚಿಕಿತ್ಸೆಯನ್ನು ಕೂಡ ರೋಗಿಗಳ ಸ್ಥಿತಿಯನ್ನು ಅರಿತು ಅಂತರ್ಜಾಲದ ಮೂಲಕ ಅವರಿಗೆ ಮಾರ್ಗದರ್ಶನ ಮಾಡುವ ಯೋಗ ಚಿಕಿತ್ಸಕನಾಗಿ ಕಾರ್ಯ ಮಾಡಿದ ಕಾರ್ತಿಕ ಅದರಲ್ಲೂ ಹಲವು ರೋಗಿಗಳನ್ನು ಕೌನ್ಸಿಲಿಂಗ್ ನಡೆಸುತ್ತ ಅವರಿಗೆ ಯೋಗ ಥೆರಫಿಯನ್ನು ನೀಡುತ್ತ ಯೋಗ ಚಿಕಿತ್ಸಕನಾಗುತ್ತ ಅವರಲ್ಲಿ ಚೇತರಿಕೆ ಕಂಡು ಬರುತ್ತಿದ್ದು ಅಂತವರ ಮಾಹಿತಿಯನ್ನು ನನಗೆ ನೀಡಿದನು.

ಈ ಒಂದು ಸೇವಾಮನೋಭಾವ ಕಾರ್ತಿಕನ ಜಂಗಮವಾಣಿ ೯೭೪೨೪೭೧೦೭೧ ಅಥವ ೮೬೧೮೭೬೯೭೬೧ ಕರೆ ಮಾಡಿ


ವೈ.ಬಿ.ಕಡಕೋಳ(ಶಿಕ್ಷಕರು)
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್ ಮುನವಳ್ಳಿ
೯೪೪೯೫೧೮೪೦೦ ೮೯೭೧೧೧೭೪೪೨

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group