ಯೋಗದಿಂದ ಸಕಲವೂ ಸಶಕ್ತ
(ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು)
ಮನವ ಕೇಂದ್ರೀಕರಿಸಿ ಚಿಂತನೆಯಲ್ಲಿ ತೊಡಗಿಸಿ ಧ್ಯಾನವೆಂಬಸ್ತ್ರದಿ ತನುಮನ ಪವಿತ್ರಸ್ನಾನ ಗೈಯುತಲಿ
ಚಿತ್ತವೃತ್ತಿಯ ನಾಶಗೊಳಿಸಿ ಸುಪ್ತಶಕ್ತಿಗಳ ಜಾಗೃತಗೊಳಿಸಿ
ಆತ್ಮಪರಮಾತ್ಮನೊಳು ಲೀನಗೊಳಿಸಿ ಜೀವನ್ಮುಕ್ತಿಯೆಡೆಗೊಯ್ವುದೀ ಯೋಗ//
ದೇಹ ಮನಸ್ಸುಗಳ ಸಾಮರಸ್ಯವನ್ನೇರ್ಪಡಿಸಿ
ಚಂಚಲಮನ ನಿಯಂತ್ರಿಸಿ ವ್ಯಕ್ತಿತ್ವ ಉನ್ನತೀಕರಣಗೊಳಿಸಿ
ಸಕಾರಾತ್ಮಕ ವ್ಯಕ್ತಿತ್ವ ಬಲಪಡಿಸಿ
ದೈಹಿಕಮಾನಸಿಕ ಆಧ್ಯಾತ್ಮಿಕ ಶಿಸ್ತಿನ ಸಾಂಗತ್ಯವನ್ನೇಏರ್ಪಡಿಸುವುದೀ ಯೋಗ//
ಆರೋಗ್ಯಭಾಗ್ಯವಿದು ಲಭಿಸುವುದು ದುರ್ಲಭವು
ಯೋಗಶಕ್ತಿಯಿಂದಲೇ ರೋಗಕ್ಕೆ ಮುಕ್ತಿಯು
ಪತಂಜಲಿ ಅಷ್ಟಾಂಗಯೋಗವೇ ಜ್ಞಾನದೀವಿಗೆಯು
ವಿಶ್ವಯೋಗಕ್ಕಿಂದು ಹಿರಿಮೆಗರಿಮೆ ಪ್ರಧಾನಿ ಮೋದಿಯು//
ಪತಂಜಲಿ ಯೋಗಮುನಿಗಳಿಂದಾರಂಭವೀ ಯೋಗ
ಅಂತರ್ದೇಹ ಸ್ವಾಸ್ಥ್ಯಕ್ಕೆ ಮಜ್ಜನವೀ ಯೋಗ
ಬ್ರಾಹ್ಮಿಮುಹೂರ್ತದಿ ಮಾಡು ನೀ ಸೂರ್ಯನಮಸ್ಕಾರ
ನಿತ್ಯದಲಿ ಮಾಡಲು ಸರ್ವಾಂಗಸುಂದರ ಯೋಗ
ಸಶಕ್ತನಾಗಿ ಸರ್ವಕಾರ್ಯದೊಳು ಸಫಲತೆಯ ಹೊಂದು//
ಕಲಿಕಾಲದಲ್ಲಿಹುದು ನೂರಾರು ರೋಗದ ಬೀಡು
ಯೋಗಪ್ರಾಣಾಯಾಮಗಳ ರೂಢಿಸು ದಿನಚರಿಯೊಳು
ದೇಹವೆಂಬ ಹಂದರವ ರೋಗದಿಂದ ಮುಕ್ತಗೊಳಿಸು
ಕುಟುಂಬ, ಸಮಾಜ, ರಾಷ್ಟ್ರದುನ್ನತಿಯ ಬೆಳೆಸು//
ಶ್ರೀಮತಿ ಗಿರಿಜಾ ಹಿರೇಮಠ