ಬೀದರ ಭಾರೀ ಮಳೆ; ಜಿಲ್ಲಾ ಉಸ್ತುವಾರಿ ಸಚಿವರು ಕಾಣೆ

Must Read

ಮಳೆಯಲ್ಲಿ ಮನೆ ಕಳೆದು ಕೊಂಡರ ಮನೆಗೆ ಕಾಂಗ್ರೆಸ್ ಶಾಸಕರ ಭೇಟಿ…

ಬೀದರ – ಗಡಿ ಜಿಲ್ಲೆಯ ಬೀದರ್ ನಲ್ಲಿ ಸತತವಾಗಿ ಮೂರು ದಿನಗಳಿಂದ ಎಡೆಬಿಡದೆ ಮಳೆ ಬೀಳುತ್ತಿದೆ.. ಹಲವು ರೈತರ ಹೊಲಕ್ಕೆ ನೀರು ಹೊಕ್ಕು ಬೆಳೆದ ಬೇಳೆ ಸಂಪೂರ್ಣ ನಾಶ ಆಗಿದೆ. ಆದರೆ ಜಿಲ್ಲಾಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ.

ಇಡೀ ಜಿಲ್ಲೆಯಾದ್ಯಂತ ಮಳೆಯ ಅವಾಂತರ ಸೃಷ್ಟಿಯಾದರೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ ಪಾಟೀಲ ಮುನೇನಕೊಪ್ಪ ಅವರು ಯಾರ ಕಣ್ಣಿಗೂ ಬೀಳುತ್ತಿಲ್ಲ. ಸಂತ್ರಸ್ತರಿಗೆ ಪರಿಹಾರ ನೀಡುವುದಿರಲಿ ಕಡೆಗೆ ಒಂದು ಸಾಂತ್ವನದ ಭೇಟಿ ಕೂಡ ಜಿಲ್ಲಾ ಉಸ್ತುವಾರಿ ಸಚಿವರು ನೀಡಿಲ್ಲ.

ಸರ್ಕಾರದ ಈ ನಿರ್ಲಕ್ಷ್ಯ ಒಂದು ಕಡೆಯಾದರ ಇನ್ನೊಂದು ಕಡೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕ್ಷೇತ್ರದ ಭಾಲ್ಕಿ ತಾಲೂಕಿನಲ್ಲಿ ರೈತರ ಹೊಲಕ್ಕೆ ಶಂಕು ಹುಳು ವಿನ ದಾಳಿಯಾಗಿದೆ. ರೈತರು ಬೆಳೆದ ಬೇಳೆ ತಿಂದು ಸಂಪೂರ್ಣ ಹೊಲ ಖಾಲಿ ಮಾಡುವ ಶಂಕು ಹುಳುವಿನ ಕಾಟಕ್ಕೆ ರೈತರು ಕಣ್ಣೀರು ಹಾಕುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ ಪಾಟೀಲ ಮುನೇನಕೊಪ್ಪ ಮಾತ್ರ ಹುಬ್ಬಳ್ಳಿ ಬೆಂಗಳೂರಿನಲ್ಲಿ ಬಿಜಿಯಾಗಿದ್ದಾರೆ.

ಬೀದರ್ ರೈತರ ಕಷ್ಟವಾದರೂ ಈ ಉಸ್ತುವಾರಿ ಸಚಿವರಿಗೆ ಕಾಣುತ್ತಿಲ್ಲವೇ ಎಂದು ಬೀದರ್ ಜಿಲ್ಲೆಯ ಸಾರ್ವಜನಿಕರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು ತಮ್ಮ ಕಷ್ಟಗಳಿಗೆ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಇನ್ನೊಂದು ಕಡೆ ಕಾಂಗ್ರೆಸ್ ಪಕ್ಷದ ನಾಯಕರು ಬೆಳೆ ಹಾನಿಯಾದ ರೈತರ ಹೊಲಕ್ಕೆ ಭೇಟಿ ನೀಡಿದರು. ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಶಾಸಕರು ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

3 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭಾಲ್ಕಿ ಪಟ್ಟಣದ ವಾರ್ಡ್- 6 ರಲ್ಲಿ ಗೋದಾವರಿ ಉದಯಕುಮಾರ್ ದೇಶಮುಖ ಅವರ ಮನೆ ಛಾವಣಿ ಕುಸಿದು ಹಾನಿಗೊಳಗಾದ ಸ್ಥಳಕ್ಕೆ ಭಾಲ್ಕಿ ಶಾಸಕ ಕೆಪಿಸಿಸಿ ಕಾರ್ಯಧ್ಯಕ್ಷರಾದ ಈಶ್ವರ ಬಿ. ಖಂಡ್ರೆ ಅವರು ಭೇಟಿ ನೀಡಿ ಪರಿಶೀಲಿಸಿದರು.

ಮನೆಯ ಛಾವಣಿ ಕುಸಿದು ಸಂಕಷ್ಟದಲ್ಲಿರುವ ಕುಟುಂಬಸ್ಥರಿಗೆ ತುರ್ತು ಪರಿಹಾರಕ್ಕಾಗಿ ವೈಯಕ್ತಿಕವಾಗಿ ಮತ್ತು ಸಿ.ಆರ್.ಎಫ್ ಯೋಜನೆಯಡಿ ಸರ್ಕಾರದ ಕಡೆಯಿಂದ ಧನ ಸಹಾಯದ ಚೆಕ್ ಅನ್ನು ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಮಳೆಯಿಂದಾಗಿ ಮನೆ ಕಳೆದುಕೊಂಡವರಿಗೆ ತುರ್ತು ಪರಿಹಾರ ಕಲ್ಪಿಸಿದ ಶಾಸಕ ರಹೀಂಖಾನ್

ಬೀದರ ತಾಲೂಕಿನಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚಿಮಕೊಡ್ ಗ್ರಾಮದಲ್ಲಿ ಲಕ್ಷ್ಮೀ ಸುಭಾಷ ಅವರ ಮನೆ ಕುಸಿದಿದ್ದು ಮಾಜಿ ಸಚಿವ, ಉತ್ತರ ಕ್ಷೇತ್ರದ ಶಾಸಕರಾದ ರಹೀಂಖಾನ್ ಅವರು ಧಿಡೀರನೇ ಸ್ಥಳಕ್ಕೆ ಭೇಟಿ ನೀಡಿ 10 ಸಾವಿರ ರೂ.ಚೆಕ್ ನೀಡುವ ಮೂಲಕ ತುರ್ತು ಪರಿಹಾರ ಕಲ್ಪಿಸುವುದರ ಜೊತೆಗೆ ಕುಸಿದಿರುವ ಮನೆಯನ್ನು ಶೀಘ್ರದಲ್ಲಿಯೇ ಹೊಸದಾಗಿ ನಿರ್ಮಿಸಿ ಕೊಡುವದಾಗಿ ಭರವಸೆ ನೀಡಿದರು.

ಗ್ರಾಮದಲ್ಲಿ ಶಂಕರ ಶಿವಲಿಂಗಪ್ಪ ಮತ್ತು 3-4 ಮನೆಗಳು ಕುಸಿದಿದ್ದು ಶೀಘ್ರದಲ್ಲಿಯೇ ಪರಿಹಾರ ಕಲ್ಪಿಸುವುದಾಗಿ ಆಶ್ವಾಸನೆ ನೀಡಿದರು.


ವರದಿ: ನಂದಕುಮಾರ ಕರಂಜೆ,ಬೀದರ

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group