ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲು ಪಠ್ಯೇತರ ಚಟುವಟಿಕೆಗಳು ಅಗತ್ಯ

Must Read

ಸಿಂದಗಿ– ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ದೇಶಾಭಿಮಾನ ಮತ್ತು ಸಮಾನತೆಯ ತತ್ವಗಳ ಕುರಿತಾದ ಅರಿವು ಮೂಡಿಸುತ್ತದೆಂದು ಅಂಕಣಕಾರ ಮಂಜುನಾಥ ಜುನಗೊಂಡ ಹೇಳಿದರು.

ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿರುವ 2022-23 ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಶಿಕ್ಷಣದ ಜೊತೆಗೆ ಬದುಕಿನ ಶಿಕ್ಷಣವನ್ನು ಮತ್ತು ನೈತಿಕ ಶಿಕ್ಷಣವನ್ನು ನೀಡುವಲ್ಲಿ ಶಾಲಾ ಕಾಲೇಜುಗಳ ಪಠ್ಯೇತರ ಚಟುವಟಿಕೆಗಳು ಮಹತ್ತರ ಕಾರ್ಯ ನಿರ್ವಹಿಸುತ್ತವೆ. ಕಾರ್ಗಿಲ್ ವಿಜಯೋತ್ಸವದ ದಿನದ ಕುರಿತು ಉಲ್ಲೇಖಿಸಿ ಪ್ರತಿಯೊಬ್ಬ ವಿದ್ಯಾರ್ಥಿಯು ಸೈನಿಕರನ್ನು ಅಭಿಮಾನಿಸುವ ಜೊತೆಗೆ ದೇಶದ ಸೇನೆಗೆ ಸೇರಲು ಸಿದ್ದರಾಗಬೇಕು. ಅಧ್ಯಯನವನ್ನು ಆಳವಾಗಿ ಅಧ್ಯಯನ ಮಾಡುವವನು ಮಾತ್ರ ಈ ದೇಶವನ್ನು ಆಳುವ ಶಕ್ತಿ ಬರುತ್ತದೆ. ವಿದ್ಯಾರ್ಥಿಗಳು ನಿರಂತರ ಕ್ರೀಯಾಶೀಲರಾಗಿ ವಿದ್ಯಾವಂತರಾಗಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ಒಂದೆ ಮುಖ್ಯವಲ್ಲ ಅದೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆಗಳು ಮತ್ತು ಸಾಮಾಜಿಕ ಜ್ಞಾನವು ಅತಿ ಮುಖ್ಯವಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೆ ಅನೇಕ ಅನುಭವಗಳನ್ನು ಪಡೆದು ಬದುಕನ್ನು ಸಾರ್ಥಕ ರೀತಿಯಲ್ಲಿ ಸಾಗಿಸಬೇಕು. ಇಂದು ಜಗತ್ತು ಅತ್ಯಂತ ಎಲ್ಲ ಕ್ಷೇತ್ರಗಳಲ್ಲಿ ವೇಗವಾಗಿ ಸಾಗುತ್ತಿದೆ ನಾವು ಅದರೊಂದಿಗೆ ಹೆಜ್ಜೆ ಹಾಕುವಂತವರಾಗಬೇಕು ಎಂದು.

ಈ ಸಂಧರ್ಭದಲ್ಲಿ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನುಭವಗಳೇ ನಮ್ಮ ಬದುಕಿಗೆ ಅನೇಕ ಮಾರ್ಗಗಳನ್ನು ನೀಡುತ್ತವೆ. ಶಿಕ್ಷಣ ಒಂದು ದೊಡ್ಡ ಅಸ್ತ್ರ ಅದನ್ನು ನಿಷ್ಠೆಯಿಂದ ಪಡೆದುಕೊಳ್ಳಬೇಕು. ಸಾಧನೆಯ ಅನೇಕ ಕನಸುಗಳು ನಮ್ಮ ಗುರಿಗಳಿಗೆ ಸಹಕಾರ ನೀಡುತ್ತವೆ ಉತ್ತಮ ಕನಸು, ಉತ್ತಮ ಜ್ಞಾನ, ಉತ್ತಮ ನಡತೆ ಮತ್ತು ಸಂಸ್ಕಾರಗಳು ಬದುಕನ್ನು ಪವಿತ್ರಗೊಳಿಸುತ್ತವೆ ಎಂದರು.

ಇದೇ ಸಂಧರ್ಭದಲ್ಲಿ ವಿದ್ಯಾರ್ಥಿ ಸಂಘದ ಪ್ರತಿನಿ„ಗಳಿಗೆ ಉಪನ್ಯಾಸಕ ಆರ್.ಸಿ.ಕಕ್ಕಳಮೇಲಿ ಪ್ರಮಾಣ ವಚನ ಬೋಧಿಸಿದರು. ವೇದಿಕೆ ಮೇಲೆ ಸಂಸ್ಥೆಯ ನಿರ್ದೇಶಕ ಶಂಕರಗೌಡ ಪಾಟೀಲ ಯಂಕಂಚಿ, ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಎಸ್.ಎ.ಪಾಟೀಲ, ಪ್ರಧಾನ ಕಾರ್ಯದರ್ಶಿ ಭಾಗ್ಯಶ್ರೀ ಹೂಗಾರ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.

ಉಪನ್ಯಾಸಕ ಎಸ್.ಎ.ಪಾಟೀಲ ಸ್ವಾಗತಿಸಿದರು, ಸ್ಕೌಡ್ಸ್ ಮತ್ತು ಗೈಡ್ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ನಿರೂಪಿಸಿದರು, ಭಾಗ್ಯಶ್ರೀ ಹೂಗಾರ ವಂದಿಸಿದರು.

Latest News

ಕವನ : ದೀಪಾವಳಿ

ದೀಪಾವಳಿ ಸಾಲು ಸಾಲು ದೀಪಗಳು ಕಣ್ಣುಗಳು ಕೋರೈಸಲು ಒಳಗಣ್ಣು ತೆರೆದು ನೋಡಲು ಜೀವನದ ಮರ್ಮ ಕರ್ಮ ಧರ್ಮಗಳನು ಅರಿಯಲು ಸಾಲು ಸಾಲು ದೀಪಗಳು ಮೌಢ್ಯವ ಅಳಿಸಲು ಜ್ಞಾನವ ಉಳಿಸಿ ಬೆಳೆಸಲು ಸಾಲು ಸಾಲು ದೀಪಗಳು ಮನೆಯನು ಬೆಳಗಲು ಮನವನು ತೊಳೆಯಲು ಸಾಲು ಸಾಲು ದೀಪಗಳು ನಮ್ಮ ನಿಮ್ಮ ಎಲ್ಲರ ಮನೆ ಹಾಗೂ ಮನವನು ಬೆಳಗಲಿ ಮಾನವೀಯತೆಯ ಜ್ಯೋತಿ ಎಲ್ಲೆಡೆ ಪಸರಿಸಲಿ ಶುಭ ದೀಪಾವಳಿ 🌹ಡಾ....

More Articles Like This

error: Content is protected !!
Join WhatsApp Group