ಬಿಜೆಪಿಯವರು ಕಾರ್ಯಕರ್ತರನ್ನು ಗುಲಾಮರೆಂದು ತಿಳಿದುಕೊಂಡಿದ್ದಾರೆ – ಎಚ್ ಡಿ ಕೆ ಆಕ್ರೋಶ

Must Read

ಬೀದರ – ಹಿಂದೂಗಳ ಹತ್ಯೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರ ರಾಜೀನಾಮೆಗೆ ಕೆಎಸ್ ಈಶ್ವರಪ್ಪ ಹಗುರವಾಗಿ ಮಾತನಾಡಿದ್ದು ಬಿಜೆಪಿಯವರು ಕಾರ್ಯಕರ್ತರನ್ನು ಗುಲಾಮರೆಂದು ತಿಳಿದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಹಿಂದುತ್ವ ಹೆಸರಿನಲ್ಲಿ ನಿಮ್ಮನ್ನು ಗುಲಾಮರನ್ನಾಗಿ ಮಾಡಲು ಹೊರಟಿದ್ದಾರೆ. ಕಾರ್ಯಕರ್ತರೆ ನೀವು ಬಲಿಯಾಗಬೇಡಿ. ಈಶ್ವರಪ್ಪ ಹೇಳುತ್ತಾರೆ ತ್ಯಾಗ ಮಾಡಿ ಪಕ್ಷ ಕಟ್ಟಿದ್ದೇವೆ ನಾವು.ಕಾರ್ಯಕರ್ತರಿಗೆ ಪ್ರಬುದ್ಧತೆ ಇಲ್ಲ ಅಂತ. ಕಾರ್ಯಕರ್ತರ ದುಡಿಮೆ ಅವರಿಗೆ ಲೆಕ್ಕಕ್ಕಿಲ್ಲ. ಈಶ್ವರಪ್ಪ ಉಡಾಫೆ ಮಾತಿನಲ್ಲೆ ಗೊತ್ತಾಗುತ್ತದೆ ಅವರು ನಿಮ್ಮನ್ನ ಗುಲಾಮಗಿರಿಗೆ ತಳ್ಳುತ್ತಾರೆ ಎಂದರು.

ಹಂತಕರನ್ನು ಎನ್ ಕೌಂಟರ್ ಮಾಡುತ್ತೇವೆ ಎಂಬ ಸಚಿವ ಅಶ್ವಥ್ ನಾರಾಯಣ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಕುಮಾರಸ್ವಾಮಿ, ಮೊದಲು ನಿಮ್ಮ ಕರ್ಮ ಕಾಂಡಗಳನ್ನು ಮುಚ್ಚಿಕೊಳ್ಳಿ. ನೀವು ಹೇಳಿದ್ರೆ ಯಾವ ಪೊಲೀಸರೂ ಎನ್ ಕೌಂಟರ್ ಮಾಡುವ ಸ್ಥಿತಿಯಲ್ಲಿ ಇಲ್ಲ ಯಾಕೆಂದರೆ ನೀವು ಪೊಲೀಸ್ ಇಲಾಖೆಯನ್ನು ಆ ರೀತಿ ಇಟ್ಟುಕೊಂಡಿದ್ದೀರಿ ಎಂದರು.

ಡಿಸೆಂಬರ್ ಒಳಗೆ ಚುನಾವಣಾ ‌ಬರಬಹುದು ಎಂಬ ಮಾಹಿತಿ ಇದೆ. ಬಿಜೆಪಿಯ ಪರಿಸ್ಥಿತಿ ನೋಡಿದಾಗ ಇವರು ಏಪ್ರಿಲ್ ವರೆಗೆ ಸರ್ಕಾರ ನಡೆಸಲು ದುಃಸಾಹಸ ಮಾಡಬೇಕಾಗುತ್ತದೆ ಎಂದು ಲೇವಡಿ ಮಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಇದೆ ಎನ್ನುವ ಭಾವನೆಗಳೇ ನಶಿಸಿ ಹೋಗುತ್ತಿವೆ ಎಂದರು.

ಪ್ರವೀಣ್ ಹತ್ಯೆ ಪ್ರಕರಣವನ್ನು ಎನ್ಐಎ ತನಿಖೆಗೆ ವರ್ಗಾವಣೆ ವಿಚಾರ ಮಾತನಾಡಿದ ಅವರು, ಎನ್ಐಎ ವರ್ಗಾವಣೆ ಬಗ್ಗೆ ಏಕಾಏಕಿ ನಿರ್ಧಾರ ಮಾಡಿದ್ರಿ ಈ ಪ್ರಕರಣದಲ್ಲಿ ನಿಮ್ಮ ಸರ್ಕಾರದ ಎನು ಮಾಡುತ್ತದೆ. ನಿಮ್ಮ ತಿರ್ಮಾನ ಏನು..? ನೀವು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಎನ್ಐಎಗೆ ಕೇಸು ವರ್ಗಾವಣೆ ಮಾಡಿದ್ದೀರಿ ಎಂದು ಆರೋಪ ಮಾಡಿದರು.

ರಾಜ್ಯದ ಹಲವಾರು ಕೇಸ್ ಗಳು ಎನ್ಐಎಗೆ ವರ್ಗಾವಣೆಗೊಂಡಿವೆ.ಪ್ರಾಮಾಣಿಕ ಪೋಲೀಸ್ ಅಧಿಕಾರಿಗಳು ನಮ್ಮಲೂ ಇದ್ದಾರೆ. ಪ್ರವೀಣ್ ಕೇಸ್ ತನಿಖೆಗೆ ಅಂಥವರಿಗೆ ಅವಕಾಶ ಕೊಡಿ 4 – 5. ವರ್ಷಗಳಾದ್ರು ಹಿಂದಿನ ಕೇಸ್ ಗಳು ಏನಾಗಿದೆ ಎಂದು ಇನ್ನೂ ಗೊತ್ತಿಲ್ಲ.ರಾಜ್ಯ ಸರ್ಕಾರಕ್ಕೂ ಮಾಹಿತಿ ‌ಇಲ್ಲ. ಪ್ರವೀಣ್ ಕೇಸ್ ನಲ್ಲೂ ಯಶಸ್ಸು ಸಿಗುತ್ತೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ನುಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group