ನಿಯಮಬದ್ಧವಲ್ಲದ ರಾಷ್ಟ್ರಧ್ವಜ ವಿತರಣೆ: ಕ್ರಮಕ್ಕೆ ಮುಖ್ಯಮಂತ್ರಿಗೆ ಮನವಿ

Must Read

ಸಿಂದಗಿ: ಸ್ವಾತಂತ್ರದ ಅಮೃತ ಮಹೋತ್ಸವ ಆಚರಣೆಗೆ ಮನೆ ಮನೆಗೆ ವಿತರಿಸುತ್ತಿರುವ ರಾಷ್ಟ್ರಧ್ವಜ ನಿಯಮಬದ್ಧವಾಗಿಲ್ಲ. ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನಿನ ಕ್ರಮ ಜರುಗಿಸುವಂತೆ ಆಗ್ರಹಿಸಿ ಸಮಾನ ಮನಸ್ಕ ಗೆಳೆಯರ ಬಳಗ ತಹಶೀಲ್ದಾರ ಕಛೇರಿ ಶಿರಸ್ತೆದಾರ ಜಿ.ಎಸ್.ರೋಡಗಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಗಮೇಶ ಡಿಗ್ಗಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಆಗಿರುವುದರ ಹಿನ್ನೆಲೆ ಸರಕಾರ ಆಚರಿಸುತ್ತಿರುವ ಅಮೃತ ಮಹೋತ್ಸವದಲ್ಲಿ ಮನೆ ಮನೆಗೂ ರಾಷ್ಟ್ರಧ್ವಜ ಹಾರಿಸುವ ಅಭಿಯಾನ ಹಮ್ಮಿಕೊಂಡಿದ್ದು, ಇದು ಉತ್ತಮ ವಿಚಾರ.

ಆದರೆ ಮನೆ ಮನೆಗೂ ವಿತರಿಸುತ್ತಿರುವ ರಾಷ್ಟ್ರಧ್ವಜ ಸಂಪೂರ್ಣ ನಿಯಮಗಳನ್ನು ಪಾಲಿಸದೇ ಬೇಕಾಬಿಟ್ಟಿಯಾಗಿ ತಯಾರಿಸಿರುವ ರಾಷ್ಟ್ರಧ್ವಜಗಳನ್ನು ವಿತರಿಸುತ್ತಿದ್ದಾರೆ. ರಾಷ್ಟ್ರಧ್ವಜದ ಅಳತೆ 243 ಇರಬೇಕು. ಅದರ ಅಂಚುಗಳನ್ನು ಹೊಲಿಗೆಯಿಂದ ಮಾಡಿರಬೇಕು.

ಆದರೆ ಸರಕಾರದ ವತಿಯಿಂದ ವಿತರಿಸುತ್ತಿರುವ ರಾಷ್ಟ್ರಧ್ವಜ ಇವು ಯಾವ ಮಾನದಂಡವನ್ನು ಒಳಗೊಂಡಿಲ್ಲ. ಹರಿದ ರಾಷ್ಟ್ರಧ್ವಜವನ್ನು ಹಾಗೂ ಕೇಸರಿ, ಬಿಳಿ, ಹಸಿರು ಇವುಗಳ ಅಳತೆ ಸಹ ಸರಿಯಾಗಿಲ್ಲ. ನಡುವೆ ಇರುವ ಅಶೋಕ ಚಕ್ರ ವೃತ್ತಾಕಾರವಿರದೆ, ಅಂಡಾಕಾರವಾಗಿ ರಚಿಸಿದ್ದಾರೆ. ಇದು ರಾಷ್ಟ್ರಧ್ವಜಕ್ಕೆ ಮಾಡುವ ಅಪಮಾನವಾಗಿದೆ.

ನಿಯಮಬದ್ಧವಲ್ಲದ ರಾಷ್ಟ್ರಧ್ವಜವನ್ನು ವಿತರಿಸುವುದು ಈ ಕೂಡಲೇ ಕೈಬಿಡಬೇಕು.ಅಲ್ಲದೆ ಹತ್ತಿ ಅಥವಾ ಖಾದಿಯ ರಾಷ್ಟ್ರಧ್ವಜದ ಜೊತೆಗೆ ಇತ್ತೀಚೆಗೆ ತಿದ್ದುಪಡಿ ಮಾಡಿ ಪಾಲಿಸ್ಟರ್ ಬಟ್ಟೆಯಲ್ಲಿ ಕೂಡ ಧ್ವಜ ತಯಾರಿಕೆಗೆ ಅನುಮತಿ ಕೊಟ್ಟಿದೆ. ಇದು ಸ್ಥಳೀಯ ಖಾದಿ ಗ್ರಾಮೋದ್ಯೋಗಕ್ಕೆ ಹೊಡೆತ ಕೊಡುತ್ತದೆ. ಅಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಜನರ ಅನ್ನವನ್ನು ಸರಕಾರ ಕಸಿದುಕೊಂಡಂತೆ ಆಗುತ್ತದೆ. ಹಾಗಾಗಿ ಸರಕಾರ ಖಾದಿ ಹಾಗೂ ಹತ್ತಿಯ ಬಟ್ಟೆಯಲ್ಲಿಯೇ ರಾಷ್ಟ್ರಧ್ವಜ ತಯಾರಿಸಬೇಕು ಎನ್ನುವ ನಿಯಮವನ್ನು ಜಾರಿಮಾಡಬೇಕು. ಈಗ ತಂದಿರುವ ತಿದ್ದುಪಡಿ ಕಾಯ್ದೆ ವಾಪಾಸ್ ಪಡೆಯಬೇಕು.

ರಾಷ್ಟ್ರಧ್ವಜ ನಿಯಮಾವಳಿ ಪ್ರಕಾರ ಇದನ್ನು ತಯಾರಿಸದೇ ಹಾಗೂ ಅದನ್ನು ಪರಿಶೀಲಿಸದೇ ವಿತರಿಸುತ್ತಿರುವ ಅಧಿಕಾರಿಗಳ ಮೇಲೆ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಆನಂದ ಕುಲಕರ್ಣಿ, ಮಹಾಂತೇಶ ವಡಗೇರಿ, ಶಿವನಗೌಡ ಪಾಟೀಲ, ವಿದ್ಯಾಧರ ಟಕ್ಕಳಕಿ ಸೇರಿದಂತೆ ಅನೇಕ ಸಮಾನ ಮನಸ್ಕರ ಬಳಗ ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group