ಉತ್ತರ ಪ್ರದೇಶದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಮನವಿ

Must Read

ಮೂಡಲಗಿ: ಉತ್ತರ ಪ್ರದೇಶ ಲಖೀಂಪೂರ ಜಿಲ್ಲೆಯಲ್ಲಿ ದಲಿತ ಬಾಲಕಿಯರನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ  ಗಲ್ಲಿಗೇರಿಸುವಂತೆ  ಆಗ್ರಹಿಸಿ ರಾಜ್ಯಪಾಲರಿಗೆ ಮತ್ತು ಮುಡಲಗಿ-ಗೋಕಾಕ ತಾಲೂಕಿನಲ್ಲಿ ಅಕ್ರಮ ಸಾರಾಯಿ ಮಾರಾಟವನ್ನು ಬಂದ ಮಾಡಿಸಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಯಶವಂತ ಮಂಟೂರ ಅವರ ನೇತೃತ್ವದಲ್ಲಿ ಪ್ರತಿಭಟಿಸಿ ತಹಶೀಲ್ದಾರ ಮೂಲಕ ಮನವಿಸಿ ಸಲ್ಲಿಸಿದರು.

ಪ್ರಕಾಶ ಮಾದರ ಮಾತನಾಡಿ, ಉತ್ತರ ಪ್ರದೇಶಲ್ಲಿ  ದಲಿತ ಬಾಲಕಿಯನ್ನುಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಸಂಗತಿ ಅತ್ಯಂತ ಹೇಯಕರ ಸಂಗತಿಯಾಗಿದ್ದು,  ಇಡೀ ಮಾನವ  ಕುಲಕ್ಕೆ ಕಳಂಕದಾಯಕ ಘಟನೆಯಾಗಿರುತ್ತೆ, ಈ ಘಟನೆಯಲ್ಲಿ ಭಾಗಿಯಾದ ಐದು ಜನ ಕೆಟ್ಟ ಕ್ರಿಮಿಗಳಂತೆ ವರ್ತಿಸಿರುವ ಆರೋಪಿಗಳನ್ನು  ತಕ್ಷಣ ಬಂಧಿಸಿ , ಎನ್ ಕೌಂಟರ ಮೂಲಕ ಅವರ ಜೀವ ತೆಗೆಯಬೇಕು ಇಲ್ಲವೇ ಗಲ್ಲಿಗೆ ಏರಿಸಬೇಕು ಎಂದು  ಆಗ್ರಹಿಸಿದರು.

ಈ ಸಂದರ್ಭದಲ್ಲಿ ಯಶವಂತ ಮಂಟೂರ, ಜಗದೀಶ ತೇಲಿ, ಕಲ್ಮೇಶ ಗೋಕಾಕ, ಪ್ರಶಾಂತ ದಳವಾಯಿ, ಮಾನಿಂಗ ಮಾದರ, ಅಶೋಕ ಜಗಿನ್ಯಾಥ, ನಾಗಪ್ಪ ಕರಬನ್ನವರ, ಚಿದಾನಂದ ಹರಿಜನ, ಲಕ್ಕವ್ವ ಮಂಟೂರ, ತಾಯವ್ವ ಕುಬಸನವರ, ಕಮಲವ್ವ ಕೆಸರಗೋಪ್ಪ, ದುರಗಪ್ಪ ಮಾಂಗ, ಪರಶುರಾಮ ಮಾದರ, ಶಿವನಂದ ಹುಣಸಿಗಿಡದ, ಹನಮಂತ ಹಕ್ಕೆನವರ ಮತ್ತಿತರು ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group