ಆಮ್ಲಜನಕದ ಕೊರತೆಯಿಂದ ಬೀದರ್ ನ ವೀರ ಯೋಧನ ಸಾವು; ಬೀದರನಲ್ಲಿ ಅಂತಿಮ ಗೌರವ

0
307

ಬೀದರ: ದೇಶದ ಗಡಿ ಭದ್ರತಾ ಪಡೆಯಲ್ಲಿದ್ದ (ಬಿಎಸ್‌ಎಫ್‌) ವೀರ ಯೋಧ ಬೀದರ್ ಜಿಲ್ಲೆಯ ಕಮಲನಗರ್ ತಾಲೂಕಿನ   ಬೆಡಕುಂದಾ ಗ್ರಾಮದ ಯೋಧ ರಾಮದಾಸ ಧನರಾಜ ಚಂದಾಪುರೆ (35) ಅವರು ಜಮ್ಮುಕಾಶ್ಮಿರದ ಗುರೆಜ್‌ ಕಣಿವೆಯಲ್ಲಿ ಆಮ್ಲಜನಕದ ಕೊರತೆಯಿಂದ ಭಾನುವಾರ ಮೃತಪಟ್ಟಿದ್ದಾರೆ.

ನಿನ್ನೆ ತಡ ರಾತ್ರಿ ಯೋಧನ ಪಾರ್ಥಿವ ಶರೀರ ಹುಟ್ಟೂರಿಗೆ ಆಗಮಿಸಿದ್ದು ಸಕಲ‌ ಸರಕಾರಿ ಗೌರವದೊಂದಿಗೆ ಇಂದು ಸ್ವಗ್ರಾಮದಲ್ಲಿ ಯೋಧನ‌ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

16 ವರ್ಷದಿಂದ ಭಾರತಿಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನಿಗೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅಂತಿಮ ನಮನ ಸಲ್ಲಿಸಿದರು.

ಗ್ರಾಮದ ಹೊರವಲಯದ ಅವರ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿತು. ಯೋಧನ ಹುಟ್ಟೂರಲ್ಲಿ ಗ್ರಾಮಸ್ಥರು, ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿತ್ತು.


ವರದಿ: ನಂದಕುಮಾರ ಕರಂಜೆ, ಬೀದರ