ಕೋತಿಗಳಿಗೆ ನೇಣು ಹಾಕಿದ ರಕ್ಕಸರು; ಇದೆಂಥ ವಿಕೃತಿ?

Must Read

ಬೀದರ: ಹುಣಸೇ ಮರವೊಂದರಲ್ಲಿ ನಾಲ್ಕು ಕೋತಿಗಳಿಗೆ ನೇಣು ಹಾಕಿ ವಿಕೃತಿ ಮೆರೆದ ರಾಕ್ಷಸೀ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ನೇಣು ಹಾಕಲಾಗಿದ್ದ ಕೋತಿಗಳ ಪೈಕಿ ಎರಡು ಸಾವಿಗೀಡಾಗಿದ್ದರೆ, ಇನ್ನೆರಡು ಬಚಾವಾಗಿವೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಮುರಾಳ ಗ್ರಾಮದಲ್ಲಿ ಈ ಪ್ರಕರಣ ಕಂಡುಬಂದಿದೆ. ಇಲ್ಲಿನ ಹುಣಸೆ ಮರವೊಂದಕ್ಕೆ ಯಾರೋ ನಾಲ್ಕು ಕೋತಿಗಳಿಗೆ ನೇಣು ಹಾಕಿದ್ದರು. ಮಂಗಗಳನ್ನು ಹಿಡಿದು ಹೊಡೆದು ನೇಣು ಹಾಕಲಾಗಿದ್ದು, ಆ ಪೈಕಿ ಎರಡು ಸಾವಿಗೀಡಾಗಿದ್ದರೆ, ಇನ್ನೆರಡು ತಪ್ಪಿಸಿಕೊಂಡು ಪರಾರಿಯಾಗಿವೆ.

ಗ್ರಾಮದ ಹೊಲದಲ್ಲಿ ಮಂಗಗಳನ್ನು ಹೂಡೆದು ನೇತು ಹಾಕಿದ್ದ ಕಿಡಿಗೇಡಿಗಳ ವಿರುದ್ಧ ಕಠಿಣವಾದ ಕ್ರಮ ಕೈಗೂಳ್ಳಬೇಕು ಎಂದು ಬೀದರ್ ಬಜರಂಗದಳ, ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಗ್ರಾಮದ ಯುವಕರು ಸಾವಿಗೀಡಾದ ಕೋತಿಗಳ ಅಂತ್ಯಸಂಸ್ಕಾರ ನೆರವೇರಿಸಿದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group