- Advertisement -
ಬೀದರ – ರಾಜ್ಯದಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಗ ಪ್ರಥಮವಾಗಿ ಬಿಜೆಪಿಯ ಟಿಕೆಟ್ ಘೋಷಣೆಯಾಗಿದೆ.
ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿಕೆಟ್ ಘೋಷಣೆಯನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾಡಿದ್ದು ಮೊದಲಿನಿಂದಲೂ ಆಕಾಂಕ್ಷಿಯಾಗಿದ್ದ ಡಾ. ಶೈಲೇಂದ್ರ ಬೆಲ್ದಾಳೆಯವರಿಗೆ ಟಿಕೆಟ್ ನೀಡುವುದಾಗಿ ನಿರ್ಧಾರ ಮಾಡಲಾಗಿದೆ.
- Advertisement -
ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಸಮಾವೇಶ ಉದ್ಘಾಟನಾ ಮಾಡಿದ ನಂತರ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಆಕಾಂಕ್ಷಿ ಅಭ್ಯರ್ಥಿ ಡಾ ಶೈಲೇಂದ್ರ ಬೆಲ್ದಾಳೆ ಅವರು ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು.
ವೇದಿಕೆ ಮುಂಭಾಗದಲ್ಲಿದ್ದ ಜನರಿಂದ ಮೋದಿ ಮೋದಿ ಮೋದಿ ಎಂಬ ಕೂಗು ಮುಗಿಲು ಮಟ್ಟಿತ್ತು. ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಹಾಗು ಬಿಜೆಪಿ ಸ್ಥಳಿಯ ನಾಯಕರು ಅರುಣ ಸಿಂಗ್ ಅವರಿಗೆ ಸಾಥ್ ನೀಡಿದರು.
ವರದಿ: ನಂದಕುಮಾರ ಕರಂಜೆ, ಬೀದರ