೫ನೆಯ ಭಕ್ತಿ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಸಾಹಿತಿ, ಸಂಶೋಧಕ ಎಂ. ಜಿ. ಈಶ್ವರಪ್ಪ ಆಯ್ಕೆ

0
325

ದಾವಣಗೆರೆ: ಅಕ್ಟೊಬರ ೩೦, ೨೦೨೨ ರಂದು ದಾವಣಗೆರೆ ನಗರದಲ್ಲಿ ಹಮ್ಮಿಕೊಂಡಿರುವ ೫ನೆಯ ಭಕ್ತಿ ಸಾಹಿತ್ಯ ಸಮ್ಮೇಳನದ ಪಂ. ಪುಟ್ಟರಾಜ ಸಾಹಿತ್ಯೋತ್ಸವದ ಸರ್ವಾಧ್ಯಕ್ಷರಾಗಿ ದಾವಣಗೆರೆಯ ಹಿರಿಯ ಸಾಹಿತಿ, ಕನ್ನಡ ಉಪನ್ಯಾಸಕ, ಸಂಶೋಧಕ, ನಿವೃತ್ತ ಪ್ರಾಚಾರ್ಯ,ಎಂ. ಜಿ. ಈಶ್ವರಪ್ಪ ಅವರನ್ನು ದಾವಣಗೆರೆಯಲ್ಲಿ ನಡೆದ ಸ್ವಾಗತ ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಅವರ ನಿವಾಸಕ್ಕೆ ತೆರಳಿ ಸಮ್ಮೇಳನಕ್ಕೆ ಅಧಿಕೃತವಾಗಿ ಆಮಂತ್ರಿಸಲಾಯಿತು. ಎಂ. ಜಿ. ಈಶ್ವರಪ್ಪ ಅವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಪೂಜ್ಯಶ್ರೀ ಚನ್ನವೀರಸ್ವಾಮೀಜಿ ಹಿರೇಮಠ (ಕಡಣಿ) ಗದಗ ಇವರು ಶಾಲು ಹೊದಿಸಿ ಸಮ್ಮಾನಿಸಿ ಗೌರವಿಸಿ ಅಧಿಕೃತ ಆಮಂತ್ರಣ ನೀಡಿದರು.

ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಸೇವಾ ಸಮಿತಿಯ ರಾಜ್ಯ ಸಂಚಾಲಕಿ ಎಂ. ಜಿ. ಶಶಿಕಲಾಮೂರ್ತಿ ಸಮ್ಮೇಳನ ನಡೆದು ಬಂದ ದಾರಿ ಮತ್ತು ಉದ್ದೇಶವನ್ನು ಕುರಿತು ಮಾತನಾಡಿದರು

ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಅತ್ಯಂತ ಪ್ರೀತಿಯಿಂದ ಒಪ್ಪಕೊಂಡ ಎಂ. ಜಿ. ಈಶ್ವರಪ್ಪನವರು ಮಾತನಾಡಿ, ಡಾ. ಪಂ. ಪುಟ್ಟರಾಜರು ಈ ನಾಡು ಕಂಡ ವಿಭೂತಿ ಪುರುಷರು. ಅವರ ಜೀವನ ಸಾಧನೆ ಸಂದೇಶ ಪ್ರಚಾರ ಸೇವೆ ಸಲ್ಲಿಸುತ್ತಿರುವ ಸೇವಾ ಸಮಿತಿಯ ಕಾರ್ಯ ಶ್ಲಾಘನೀಯ. ಪುಟ್ಟರಾಜ ಶಿವಯೋಗಿಗಳಿಗೆ ದಾವಣಗೆರೆ ಮಹಾ ನಗರ ತವರು ಮನೆಯಂತೆಯಿತ್ತು. ಅವರ ಹೆಸರಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ೫ನೆಯ ಭಕ್ತಿ ಸಾಹಿತ್ಯ ಸಮ್ಮೇಳನ ವಿದ್ಯಾಕಾಶಿಯಾಗಿರುವ ದಾವಣಗೆರೆಯಲ್ಲಿ ನಡೆಯುತ್ತಿರುವುದು ದಾವಣಗರೆಯ ಅಭಿಮಾನಿ ಭಕ್ತರ ಪುಣ್ಯ ವಿಶೇಷವಾಗಿದ್ದು, ಈ ಸಮ್ಮೇಳನ ಸರ್ವಾಧ್ಯಕ್ಷತೆ ನಮಗೆ ದೊರಕಿರುವುದು ನಮ್ಮ ಸುಕೃತವಾಗಿದೆ ಹೇಳಿದರು.

ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಸಾಹಿತಿ ಸಿದ್ಧೇಶ ಕುರ್ಕಿ ಮತ್ತು ಸೇವಾ ಡಾ. ಪಂ. ಪುಟ್ಟರಾಜ ಸಮಿತಿಯ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಶಿವಬಸಯ್ಯ ಚರಂತಿಮಠ ಮತ್ತು ಸದಸ್ಯರು ಪೂಜ್ಯ ಗುರುಗಳ ಅಭಿಮಾನಿ ಭಕ್ತರು ಇದ್ದರು. ಎಂದು ಸಮ್ಮೇಳನ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ ಜಿ ಶಶಿಕಲಾ ಮೂರ್ತಿ, ನಲ್ಕುದುರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.