ನಿವೃತ್ತ ಯೋಧನಿಗೆ ಸತ್ಕಾರ ನೆರವೇರಿಸಿದ ಈರಣ್ಣ ಕಡಾಡಿ

Must Read

ಯುವಕರು ಸೇನೆಗೆ ಸೇರಿ ಜೀವನ ರೂಪಿಸಿಕೊಳ್ಳಬೇಕುಈರಣ್ಣ ಕಡಾಡಿ

ಮೂಡಲಗಿ: ದೇಶದ ಗಡಿಕಾಯುವ ಸೈನಿಕ, ದೇಶದ ಜನರಿಗೆ ಅಣ್ಣ ನೀಡುವ ರೈತ ಇಬ್ಬರು ಎರಡು ಕಣ್ಣುಗಳಿದ್ದಾರೆ. ಅದಕ್ಕಾಗಿ ದೇಶದ ಮಾಜಿ ಪ್ರಧಾನಿ ಲಾಲಬಹದ್ದೂರ ಶಾಸ್ತ್ರೀ ಅವರು ಜೈ ಜವಾನ ಜೈ ಕಿಸಾನ ಎಂದು ಹೇಳಿದ್ದರು. ಈಗ ಜೈ ವಿಜ್ಞಾನ ಎಂದು ಹೇಳುವ ಮೂಲಕ ದೇಶಕ್ಕೆ ಮೂರನೇ ಕಣ್ಣು ಇದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ತೋರಿಸಿಕೊಟ್ಟಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು  ಹೇಳಿದರು.

ಬುಧವಾರ ನ.2 ರಂದು ಕಲ್ಲೋಳಿ ಪಟ್ಟಣದ ಯೋಧ ಬಸಪ್ಪ ನಿಂಗಪ್ಪ ಹೊನ್ನಳ್ಳಿ ಅವರ ಸೇನಾ ನಿವೃತ್ತಿಯ ಅಭಿನಂದನಾ ಸಮಾರಂಭದಲ್ಲಿ ಅವರನ್ನು ಸತ್ಕರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಅಗ್ನಿಪಥ್ ಯೋಜನೆಯ ಮೂಲಕ ದೇಶದ ಯುವಕರಿಗೆ ಮೂರೂ ಸೇನೆಗೆ ಸೇರುವ ಅವಕಾಶ ನೀಡಿದೆ. ಈ ಯೋಜನೆಯಡಿ ಆಯ್ಕೆಯಾದ ಯುವಕರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಅಗ್ನಿಪಥ್ ಯೋಜನೆಯಿಂದ ದೇಶಭಕ್ತಿ ಮತ್ತು ಸದೃಢ ವ್ಯಕ್ತಿತ್ವ ನಿರ್ಮಾಣಕ್ಕೆ ಅವಕಾಶವಿದ್ದು, 5 ವರ್ಷಗಳ ಕಾಲ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ನೀಡಲಾಗುತ್ತದೆ. ಯುವಕರು ಸೇನೆಯಲ್ಲಿ ಸೇರಿ ಉತ್ತಮ ಜೀವನ ರೂಪಿಸಿಕೊಳ್ಳುವ ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಯುವಕರಿಗೆ ಕರೆ ನೀಡಿದರು.

ನಿವೃತ್ತಿಯಾಗಿ ಬರುವ ಸೈನಿಕರು ಕೂಡಾ ಸಮಾಜದಲ್ಲಿ ತಾವು ಸೈನ್ಯದಲ್ಲಿ ಪಡೆದಿರುವ ಅನುಭವವನ್ನು ಧಾರೆ ಎರೆಯುವ ಮೂಲಕ ದೇಶ ಪ್ರೇಮ ಮತ್ತು ದೇಶ ಭಕ್ತಿಯನ್ನು ಮೂಡಿಸುತ್ತಿದ್ದಾರೆ ಅವರ ಕಾರ್ಯ ಶ್ಲಾಘನೀಯವಾಗಿದೆ. ಯೋಧ ಬಸಪ್ಪ ಹೊನ್ನಳ್ಳಿ ಅವರ ನಿವೃತ್ತಿ ಬದುಕು ಸುಂದರವಾಗಿರಲಿ ಎಂದು ಶುಭ ಹಾರೈಸಿದರು.

ಮಾಜಿ ಸೈನಿಕರಾದ ಹಣಮಂತ ಕುರಬೇಟ, ಮಲ್ಲಪ್ಪ ಕಂಕಣವಾಡಿ ಪರಪ್ಪ ರಾಚನ್ನವರ, ಬಸವರಾಜ ಅಂಗಡಿ, ಶ್ರೀಶೈಲ ಮುಗಳಿ, ರಾಜು ದಬಾಡಿ, ಕೆಂಚಪ್ಪ ಡೂಗನವರ, ರಮೇಶ ಚೌಗಲಾ, ರಾಜಶೇಖರ ಮೇತ್ರಿ, ಸಲಿಂ ನದಾಫ್, ಈರಪ್ಪ ಮುತ್ನಾಳ, ರಾಮಚಂದ್ರ ಮಾಳದವರ, ಮಾರುತಿ ಸುರನ್ನವರ, ಬಾಳಪ್ಪ ಬೆಳಕೂಡ, ಬಸಗೌಡ ಪಾಟೀಲ, ಗಿರಮಲ್ಲಪ್ಪ ಸಂಸುದ್ದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group