spot_img
spot_img

ಬಂಡಿಗಣಿ ದಾನೇಶ್ವರ ಮಹಾರಾಜರ ಕಾರ್ಯ ಪ್ರಶಂಸನೀಯ – ಶಾಸಕ ಬಾಲಚಂದ್ರ ಜಾರಕಿಹೊಳಿ

Must Read

- Advertisement -

ಕಲ್ಲೋಳಿಯಲ್ಲಿ ಬಂಡಿಗಣಿ ಮಠದ ಸದ್ಬಕ್ತರ ಸತ್ಕಾರ ಸ್ವೀಕರಿಸಿದ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಕರ್ನಾಟಕವಲ್ಲದೇ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತಮಿಳುನಾಡು ರಾಜ್ಯಗಳಲ್ಲಿ ಅಸಂಖ್ಯೆ ಭಕ್ತರಿಗೆ ಅನ್ನಪ್ರಸಾದ ಮಾಡುತ್ತಿರುವ ಬಂಡಿಗಣಿಯ ದಾಸೋಹ ಚಕ್ರವರ್ತಿ ದಾನೇಶ್ವರ ಮಹಾರಾಜರ ಕಾರ್ಯ ಶ್ಲಾಘನೀಯವಾದದ್ದು ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು.

ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಮಂಗಳವಾರ ಸಂಜೆ ಬಂಡಿಗಣಿ ಮಹಾರಾಜರ ಭಕ್ತರು ಹಮ್ಮಿಕೊಂಡ ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದ ಅವರು, ಧಾರ್ಮಿಕ-ಶೈಕ್ಷಣಿಕ ಕ್ಷೇತ್ರಗಳಲ್ಲಿ ಕೈಗೊಳ್ಳುತ್ತಿರುವ ಶ್ರೀಗಳ ಕಾರ್ಯಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

- Advertisement -

ಕಳೆದ ಹಲವಾರು ವರ್ಷಗಳಿಂದ ಪ್ರಸಿದ್ಧಿ ಹೊಂದಿರುವ ದೇವಸ್ಥಾನಗಳಲ್ಲಿ ಬಂಡಿಗಣಿ ದಾನೇಶ್ವರ ಮಹಾರಾಜರು ಭಕ್ತರಿಗಾಗಿ ದಾಸೋಹವನ್ನು ಮಾಡುತ್ತಿರುತ್ತಾರೆ. ಜೊತೆಗೆ ಅಸಂಖ್ಯೆ ಭಕ್ತ ಸಮುದಾಯವನ್ನು ಹೊಂದಿದ್ದಾರೆ. ಬಂಡಿಗಣಿ ಮಹಾರಾಜರು ಯಾವುದೋ ಒಂದು ಕಾರ್ಯಕ್ರಮಕ್ಕೆ ಬರುತ್ತಾರೆಂದರೆ ಅಲ್ಲಿ ಭಕ್ತರು ಸ್ವಯಂ ಪ್ರೇರಿತರಾಗಿ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಾರೆ ಎಂದು ತಿಳಿಸಿದರು.

ಬಂಡಿಗಣಿ ಮಹಾರಾಜರು ನಡೆಸುತ್ತಿರುವ ಮಠ ಹಾಗೂ ಶಾಲೆಗಳಿಗೆ ಮಹಾರಾಜರು ಬಯಸಿದರೆ ಅದಕ್ಕೆ ಎಲ್ಲ ಸಹಾಯ, ಸಹಕಾರವನ್ನು ನೀಡಲು ಸಿದ್ಧನಿದ್ದೇನೆ. ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಹಾರಾಜರಿಗೆ ನನಗೆ ಒಂದು ಸೇವೆ ಸಲ್ಲಿಸುವ ಅವಕಾಶ ನೀಡಿದರೆ ಖಂಡಿತವಾಗಿಯೂ ಮಠಗಳ ಅಭಿವೃದ್ಧಿ ಅಥವಾ ಶಾಲೆಗಳ ಸುಧಾರಣೆಗಾಗಿ ಅಗತ್ಯವಿರುವ ನೆರವನ್ನು ನೀಡುತ್ತೇನೆ. ಬಂಡಿಗಣಿ ಮಠದ ಭಕ್ತರ ಪ್ರೀತಿ ಮತ್ತು ವಿಶ್ವಾಸಕ್ಕೆ ಸದಾ ಚಿರಋಣಿ ಆಗಿರುವೆ ಎಂದು ಅವರು ಹೇಳಿದರು.

- Advertisement -

ಕಲ್ಲೋಳಿಯಿಂದಲೇ ಪ್ರಚಾರ ಕಾರ್ಯ ಆರಂಭ, ಕಲ್ಲೋಳಿಯಲ್ಲಿಯೇ ಗೆಲುವಿನ ವಿಜಯೋತ್ಸವ: ಬಾಲಚಂದ್ರ ಜಾರಕಿಹೊಳಿ

ಅರಭಾವಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಕಲ್ಲೋಳಿಯಿಂದಲೇ ತಮ್ಮ ಪ್ರಚಾರ ಕಾರ್ಯವನ್ನು ಆರಂಭಿಸುತ್ತೇನೆ. 2023 ರ ಎಪ್ರೀಲ್-ಮೇ ತಿಂಗಳಲ್ಲಿ ಕಲ್ಲೋಳಿ ಪಟ್ಟಣದಲ್ಲಿ ಭಾರೀ ಪ್ರಮಾಣದಲ್ಲಿ ವಿಜಯೋತ್ಸವ ಆಚರಿಸುತ್ತೇವೆ ಎಂದು ಅವರು ತಿಳಿಸಿದರು.

ವೇದಿಕೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಗುತ್ತಿಗೆದಾರ ಬಸವಂತ ದಾಸನವರ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ.ಎಂ. ಪಾಟೀಲ, ಸುಭಾಸ ಕುರಬೇಟ, ಮಹಾಂತೇಶ ಕಪ್ಪಲಗುದ್ದಿ, ವಸಂತ ತಹಶೀಲ್ದಾರ, ಪರಪ್ಪ ಕಡಾಡಿ, ಮಲ್ಲಪ್ಪ ಖಾನಾಪೂರ, ಮಲ್ಲಪ್ಪ ಹೆಬ್ಬಾಳ, ಅಲ್ಲಪ್ಪ ಗಣೇಶವಾಡಿ, ಅಶೋಕ ಮಕ್ಕಳಗೇರಿ, ಅರ್ಜುನ ಬಾಗೇವಾಡಿ, ಭೀಮಶಿ ಬಂಗಾರಿ, ಮಲ್ಲಪ್ಪ ಕೊಂಗಾಲಿ, ಮಹಾನಿಂಗ ಮಾಡಲಗಿ, ಶಿವಪ್ಪ ಮದಿಹಳ್ಳಿ, ಬಾಳಪ್ಪ ಹುಲಗನ್ನವರ, ಬಸಪ್ಪ ಮಹಾಲಿಂಗಪೂರ, ಲಕ್ಷ್ಮಣ ನಾಯ್ಕ, ಸದಾಶಿವ ಪೂಜೇರಿ, ವಿಠ್ಠಲ ಒಬ್ಬಟಗಿ, ದೊಡ್ಡಪ್ಪ ಬೆಳವಿ, ಬಸು ಸೊಂಟನವರ, ಕಲ್ಲೋಳಿ ಪಟ್ಟಣ ಪಂಚಾಯತ ಸದಸ್ಯರು, ಮುಖಂಡರು ಮತ್ತು ಬಂಡಿಗಣಿ ಮಠದ ಭಕ್ತರು ಉಪಸ್ಥಿತರಿದ್ದರು.

ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಬಂಡಿಗಣಿ ಮಠದ ಭಕ್ತರು ಸತ್ಕರಿಸಿದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group