Homeಸುದ್ದಿಗಳುಪರಿಸರವನ್ನು ದೇವರಂತೆ ನೋಡಬೇಕು - ಸಾಲು ಮರದ ತಿಮ್ಮಕ್ಕ

ಪರಿಸರವನ್ನು ದೇವರಂತೆ ನೋಡಬೇಕು – ಸಾಲು ಮರದ ತಿಮ್ಮಕ್ಕ

ಬೆಳಗಾವಿ: ಪ್ರಕೃತಿಯು ನಮ್ಮ ದೇವರು ನಾವು ಧರ್ಮದ ಆಚರಣೆಗಳನ್ನು ಹೇಗೆ ಸಂಭ್ರಮಗಳಿಂದ ಭಕ್ತಿ ಭಾವನೆಗಳಿಂದ ನಡೆದುಕೊಳ್ಳುತ್ತೇವೆ ಅದರಂತೆ ಪರಿಸರವನ್ನು ನೋಡಬೇಕು, ಬಸವಣ್ಣನವರು ಹೇಳಿದ ವಚನದ ವಾಣಿ ಸಕಲ ಜೀವಾತ್ಮರಿಗೆ ಲೇಸನ್ನು ಬಯಸು ಎಂಬ ಮಾತು ನನ್ನ ಬದುಕಿಗೆ ಸ್ಪೂರ್ತಿ ಯಾಗಿ ನಾನು ಪ್ರಕೃತಿಯ ಸೇವೆಯನ್ನು ಮಾಡುತ್ತಿದ್ದೇನೆ, ಮರಗಳೇ ನನ್ನ ದೇವರು ಸಸಿಗಳೇ ನನ್ನ ಮಕ್ಕಳು ಎಂದು ಭಾವಿಸಿಕೊಂಡು ಬದುಕುತ್ತಿದ್ದೇನೆ ಎಂದು ಸಾಲುಮರದ ತಿಮ್ಮಕ್ಕ ಬೆಳಗಾವಿಯ ಮಾಂತೇಶ್ ನಗರದ ಪ.ಭು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ಏರ್ಪಡಿಸಿದ ವಾರದ ಪ್ರಾರ್ಥನೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನೆನಪಿಗಾಗಿ ಭವನದ ಎದುರಿಗೆ ಮಾವಿನ ಸಸಿಗಳನ್ನು ನೆಟ್ಟು ಮಾತನಾಡಿದರು.

ವಾರದ ಪ್ರಾರ್ಥನೆಯ ಅಧ್ಯಕ್ಷರಾದ ಈರಣ್ಣ ದಯಣ್ಣವರ ರಾಷ್ಟ್ರೀಯ ಬಸವ ಸೇನೆಯ ಅಧ್ಯಕ್ಷರಾದ ಶಂಕರ ಗುಡಸ, ವಿ .ಕೆ ಪಾಟೀಲ್, ಸದಾಶಿವ ದೇವರ ಮನೆ, ರಾಜು ಪದ್ಮಣ್ಣವರ್ ಭಾಗವಹಿಸಿದ್ದರು . ಸಂಗಮೇಶ ಅರಳಿ ಸ್ವಾಗತಿಸಿದರು ಡಾ.ಅಡಿವೆಪ್ಪ ಇಟಗಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು ಮಹಾದೇವಿ ಅರಳಿ ಪ್ರಾರ್ಥನೆ ಸಲ್ಲಿಸಿದರು. ಸಂಗಮೇಶ್ ನರಗುಂದ ನಿರೂಪಿಸಿದರು ವಚನ ಮಂಗಳದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

RELATED ARTICLES

Most Popular

error: Content is protected !!
Join WhatsApp Group