ಮೂಲ ಸೌಕರ್ಯ ಪಡೆಯುವುದು ಜನತೆಯ ಹಕ್ಕು – ಸಿಸ್ಟರ್ ವಲೀವಾ

0
309

ಸಿಂದಗಿ: ಮೂಲ ಸೌಕರ್ಯಗಳನ್ನು ಪಡೆದುಕೊಳ್ಳುವುದು ಸಾರ್ವಜನಿಕರ ಹಕ್ಕು. ಜನ ಪ್ರತಿನಿಧಿಗಳು ಅವುಗಳನ್ನು ನೆರವೇರಿಸಿ ಕೊಡಬೇಕು. ಗ್ರಾಮ ಪಂಚಾಯತಿಯಲ್ಲಿ ಸಾಕಷ್ಟು ಸೌಲಭ್ಯಗಳಿದ್ದರೂ ಅವುಗಳನ್ನು ಜನರಿಗೆ ಸರಿಯಾಗಿ ನೀಡುತ್ತಿಲ್ಲ  ಅಧಿಕಾರಿಗಳು ಜನರಿಗೆ ಸಿಗದೇ ಇರುವಂತಹ ಸೌಲಭ್ಯಗಳು ಜನರಿಗೆ ಸಿಗುವ ಹಾಗೆ ಮಾಡಬೇಕು ಎಂದು ನಿರ್ಮಾಲಾಲಯ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ವಲೀವಾ ಹೇಳಿದರು.

ತಾಲೂಕಿನ ಹಿಕ್ಕನಗುತ್ತಿ  ಗ್ರಾಮದಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ, ನಿರ್ಮಲಾಲಯ ಸಂಸ್ಥೆ ಅಲಮೇಲ್  ಹಾಗೂ  ಗ್ರಾಮ ಪಂಚಯತ್ ಹಿಕ್ಕನಗುತ್ತಿ  ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿ, ಗ್ರಾಮ ಅಭಿವೃದ್ಧಿ ಸಮಿತಿ ಸದಸ್ಯರು, ಮನ್‍ರೇಗ ಅನುಷ್ಠಾನ ಅಭಿಯಾನ ಗುಂಪಿನ ಸದಸ್ಯರು ಹಾಗೂ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು  ಸಮಸ್ಯೆಗಳನ್ನು  ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮುಂದಿಟ್ಟರು. ಚರಂಡಿ ವ್ಯವಸ್ಥೆ,  ಸಿ.ಸಿ ರಸ್ತೆ, ಉದ್ಯೋಗ ಖಾತ್ರಿ ಅಡಿಯಲ್ಲಿ 100 ದಿನ ಮಾನವ ಕೂಲಿ ಕೆಲಸ ಕೊಡುವುದು. ಬೀದಿ ದೀಪಗಳು, ಕುಡಿಯುವ ನೀರಿನ ವ್ಯವಸ್ಥೆ, ಅಂಗನವಾಡಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಕಲಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡಕ್ಕೆ ಸರಕಾರಿ ಜಾಗ, ಕಲಹಳ್ಳಿ ಮತ್ತು ಬಬಲೇಶ್ವರ ಗ್ರಾಮಗಳಲ್ಲಿ ಇಂಗು ಗುಂಡಿಗಳು ಕಟ್ಟಿ 2 ವರ್ಷ ಕಳೆದರು ಪಲಾನುಭವಿಗಳ ಖಾತೆಗೆ ಇನ್ನು ಹಣ ಜಮಾ ಮಾಡದಿರುವುದು, ಕಲಹಳ್ಳಿ ಮತ್ತು ಬಬಲೇಶ್ವರ ಗ್ರಾಮಗಳಲ್ಲಿ ಶೌಚಾಲಯದ ವ್ಯವಸ್ಥೆ, ಎರಡು ಗ್ರಾಮಗಳಲ್ಲಿ ಅಂಗನವಾಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಗ್ರಾಮ ಪಂಚಾಯತಿ ಅಧಿಕಾರಿಗಳು ಇದರ ಕಡೆ ಗಮನ ಹರಿಸಬೇಕು, ಉದ್ಯೋಗ ಖಾತ್ರಿಯಡಿಯಲ್ಲಿ ಕೆಲಸ ಮಾಡಿ 4 ತಿಂಗಳಾದರೂ 2 ಎನ್.ಎಂ.ಆರ್‍ನ ಕೂಲಿ ಪಾವತಿ ಮಾಡದಿರುವುದು, ಪ್ರತಿ ಮನೆಗೆ ಒಂದು ಕುಡಿಯುವ ನೀರಿನ ನಳದ ವ್ಯವಸ್ಥೆ ಮಾಡಿ ಕೊಡಬೇಕು ಎಂದು ಮಹಿಳೆಯರು ಸಮಸ್ಯೆಗಳ ಪಟ್ಟಿಯನ್ನು ಗ್ರಾಮ ಅಭಿವೃದ್ಧಿ ಅಧಿಕಾರಿಗಳ ಮುಂದಿಟ್ಟರು.

ಗ್ರಾಮ ಪಂಚಾಯತಿಯ ಅಬಿವೃದ್ದಿ ಅಧಿಕಾರಿ ದೀಪಾ ಬೇನಕೊಟಗಿ  ಹಾಗೂ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮಹಾನಂದಾ ಪರಶುರಾಮ ಮಾದರ ಇವರ ಅನುಪಸ್ಥಿತಿಯಲ್ಲಿ ಅವರ ಪತಿಯಾದ ಪರಶುರಾಮ ಮಾದರ   ಜನ ಸಂಪರ್ಕ  ಸಭೆಯನ್ನು ಉದ್ದೇಶಿಸಿ ಮಾತನಾಡಿ, ನಿಮ್ಮ ಹಳ್ಳಿಗಳಲ್ಲಿ ಇದ್ದ  ಸಾಕಷ್ಟು ಸಮಸ್ಯೆಗಳನ್ನು  ಪರಿಶೀಲಿಸಿ ಇದಕ್ಕೆ ನಾನು ಆದಷ್ಟು ಬೇಗ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ಮಾಡಿದ್ದು ತಾಂತ್ರಿಕ ಸಮಸ್ಯೆಗಳಿಂದ 4 ತಿಂಗಳಿನಿಂದ ಪಾವತಿ ಆಗದೇ ಇದ್ದಂತಹ ಕೂಲಿಯನ್ನು ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಕೂಲಿ ಪಾವತಿ ಮಾಡಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಸಂಗಮ ಸಂಸ್ಥೆಯ ಸಹ ನಿರ್ದೆಶಕಿ ಸಿಸ್ಟರ್ ಸಿಂತೀಯಾ ಡಿ ಮೆಲ್ಲೊ, ಬ್ರದರ್ ನೋಯಲ್, ತಾಲೂಕು ಪಂಚಾಯತಿಯ ಸಂಯೋಜಕ ಬೀಮರಾಯ ಚೌದರಿ,  ಬಬಲೇಶ್ವರ ಮತ್ತು ಕಲಹಳ್ಳಿ ಗ್ರಾಮದ ಗ್ರಾಮ ಅಭಿವೃದ್ಧಿ ಸಮಿತಿಯ ಸದಸ್ಯರು, ಮ.ಅ.ಅ ಗುಂಪಿನ ಸದಸ್ಯರು ಹಾಗೂ ಸ್ವ-ಸಹಾಯ ಸಂಘದ ಸದಸ್ಯರು ಹಾಜರಿದರು.

ಸಂಗಮ ಸಂಸ್ಥೆಯ  ಕಾರ್ಯಕರ್ತರಾದ ಮಲಕಪ್ಪ ಎಸ್ ಹಲಗಿ ನಿರೂಪಿಸಿದರು, ಆನಂದ ಕುಮಸಗಿ ಸ್ವಾಗತಿಸಿದರು. ಶ್ರೀಧರ ಕಡಕೂಳ  ವಂದಿಸಿದರು.