ಮೂಡಲಗಿ: ತಾಲೂಕಿನ ಯಾದವಾಡದಲ್ಲಿ ಕನ್ನಡ ಸೇನೆ ಕರ್ನಾಟಕ ಯಾದವಾಡ ಘಟಕದ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತವಾಗಿ ಶನಿವಾರ ನ.೨೬ ರಂದು ಸಂಜೆ ೫ಗಂಟೆಗೆ ಯಾದವಾಡ ಶ್ರೀ ಘಟ್ಟಗಿ ಬಸವೇಶ್ವರ ದೇವಸ್ಥಾನ ಆವರಣ, ಭಾರತೀಯ ಸೇನೆಯ ಎನ್.ಎಸ್.ಜಿ ಬ್ಲ್ಯಾಕ್ ಕಮಾಂಡರ ಹುತಾತ್ಮ ಯೋಧ ಚಂದ್ರು ದಲಾಲ ವೇದಿಕೆಯಲ್ಲಿ ಕರುನಾಡು ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕನ್ನಡ ಸೇನೆಯ ಘಟಕದ ಅಧ್ಯಕ್ಷ ಗುರು ಬಳಿಗಾರ ತಿಳಿಸಿದ್ದಾರೆ.
ಸಮಾರಂಭದ ಸಾನ್ನಿಧ್ಯವನ್ನು ಭಾಗೋಜಿಕೊಪ್ಪದ ಡಾ.ಶಿವಲಿಂಗಮುರುಘರಾಜೇಂದ್ರ ಶಿವಾಚಾರ್ಯ ಶ್ರೀಗಳು, ಯಾದವಾಡ ಚೌಕಿಮಠದ ಶ್ರೀ ಶಿವಯೋಗಿ ದೇವರು ವಹಿಸುವರು. ಅಧ್ಯಕ್ಷತೆಯನ್ನು ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ವಹಿಸುವರು, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಉದ್ಘಾಟಿಸುವರು, ಸಂಸದೆ ಮಂಗಲಾ ಅಂಗಡಿ ಮತ್ತು ಸುಧೀರ ಉದಪುಡಿ ಜ್ಯೋತಿ ಬೆಳಗಿಸುವರು ಹಾಗೂ ಅತಿಥಿಗಳಾಗಿ ಯಾದವಾಡ, ಕಾಮನಕಟ್ಟಿ ಗ್ರಾ.ಪಂ ಅಧ್ಯಕ್ಷರು, ಸದಸ್ಯರು ವಿವಿಧ ಸಂಘ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಮುಖಂಡರು ಭಾಗವಹಿಸುವರು.
ಜೀ ಕನ್ನಡ ವಾಹಿನಿಯ ಸ.ರಿ.ಗ.ಮ.ಪ ಗಾಯಕ-ಗಾಯಕಿಯರು ಹಾಗೂ ಕಾಮಿಡಿ ಕಿಲಾಡಿಗಳಿಂದ ಸಂಸ್ಕೃತಿ ಕಾರ್ಯಕ್ರಮ ಜರುಗಲಿದೆ.