ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Must Read

ಸವದತ್ತಿ: ಶಿಕ್ಷಕರು/ಶಿಕ್ಷಕಿಯರಿಗೆ ಅನುಭವ ಮತ್ತು ಬೋಧನೆಗಳೊಂದಿಗೆ ಹೊಸ ಹೊಸ ಅವಿಷ್ಕಾರಗಳು ಸಾಹಿತ್ಯ ಪಾಂಡಿತ್ಯಕ್ಕೆ ಮಾರ್ಗ ಮಾಡಿಕೊಡುತ್ತದೆ. ಶಾಲಾ ಮಕ್ಕಳಿಗೆ ಸಾಂಸ್ಕ್ರತಿಕ ಕಾರ್ಯ ಕ್ರಮಗಳಿಗೆ ಸಿದ್ದಗೊಳಿಸುತ್ತಲೇ ತಾವೂ ಸಹಪಠ್ಯ ಚಟುವಟಿಕೆಯಲ್ಲಿ ಶಿಕ್ಷಕರು ಪ್ರತಿಭೆ ಗಳಿಸುತ್ತಾರೆ.

ಅಲ್ಲದೆ ಪ್ರತಿ ವರ್ಷ ತಮ್ಮ ಬೋಧನೆಯಲ್ಲಿ ಹೊಸ ಆವಿಷ್ಕಾರವನ್ನು ಅಳವಡಿಸಿಕೊಂಡು ಪರಿಣಾಮಕಾರಿ ಬೋಧನೆ ಮಾಡುವುದರಿಂದ ಪ್ರತಿಭೆ ಅರಿವಿಲ್ಲದಂತೆ ಬಂದಿರುತ್ತದೆ. ಇಂತಹ ಸ್ಪರ್ಧಾ ಕಾರ್ಯಕ್ರಮದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆ ಯಲ್ಲಿ ಶಿಕ್ಷಕರು ಭಾಗವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ.ಚ. ಕರೀಕಟ್ಟಿ ಹೇಳಿದರು.

ಅವರು ನಗರದ ಗುರ್ಲಹೊಸೂರಿನ ಶಾಸಕರ ಮಾದರಿ ಶಾಲೆಯಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಲಾಯಿತು.

“ಶಿಕ್ಷಕರಲ್ಲಿರುವ ಸಹಪಠ್ಯ ಚಟುವಟಿಕೆಗಳಲ್ಲಿನ ಪ್ರತಿಭೆಯುಳ್ಳವರನ್ನು ಗುರುತಿಸಿ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟಕ್ಕೆ ಕಳಿ ಸುವುದಾಗಿದೆ. ಪಠ್ಯಗಳಿಗೆ ಸಂಬಂಧಿಸಿದಂತೆ ಕಲಿಕೋಪಕರಣಗಳನ್ನು ತಯಾರಿಸಬೇಕು. ಚಿತ್ರಕಲೆ ಕೂಡ ವಿಷಯಾಧಾರಿತವಿರಲಿ. ಎಂದರು.

ವೇದಿಕೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಬಿ. ಎನ್. ಬ್ಯಾಳಿ.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾದ ಹೆಚ್. ಆರ್. ಪೆಟ್ಲೂರ. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುಧೀರ್ ವಾಘೇರಿ. ಶಿಕ್ಷಣ ಸಂಯೋಜಕ ಎಂ. ಡಿ. ಹುದ್ದಾರ. ಶಾಸಕರ ಮಾದರಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ. ಬಿ. ಕಮ್ಮಾರ ಉಪಸ್ಥಿತರಿದ್ದರು. 

ಈ ಕಾರ್ಯ ಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಳಾದ ವ್ಹಿ.ಸಿ.ಹಿರೇಮಠ. ರತ್ನಾ ಸೇತಸನದಿ. ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಸಿ. ವ್ಹಿ. ಬಾರ್ಕಿ, ವೈ.ಬಿ.ಕಡಕೋಳ. ಎಸ್.ಬಿ.ಬೆಟ್ಟದ.ಸಂಪನ್ಮೂಲ ವ್ಯಕ್ತಿಗಳಾದ ಆರ್. ಪಿ. ನಲವಡೆ. ಎಂ. ಜಿ. ಬಾಳೇಕುಂದರಗಿ. ರಾಮಚಂದ್ರಪ್ಪ.ದೈಹಿಕ ಶಿಕ್ಷಕರಾದ ಎಂ. ಬಿ. ಕೊಪ್ಪದ.ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲಾ ಮಕ್ಕಳಿಂದ ಸ್ವಾಗತ ಗೀತೆ ಜರುಗಿತು. ಕುಶಾಲ. ಮುದ್ದಾಪುರ ನಿರೂಪಿಸಿದರು. ವೈ. ಬಿ. ಕಡಕೋಳ ಸ್ವಾಗತಿಸಿದರು. ಬಾಳೇಕುಂದರಗಿ ವಂದಿಸಿದರು.

Latest News

ರಾಮಾಯಣ ಮಹಾಭಾರತಕ್ಕಿಂತ ಹಳೆಯ ಭಾಷೆ ಕನ್ನಡ – ಬಾಗೇಶ ಮುರಡಿ

ಸಿಂದಗಿ; ಪ್ರಪಂಚದಲ್ಲಿ ೬ ಸಾವಿರ ಭಾಷೆಗಳಿಗೆ ಅದರಲ್ಲಿ ೪ ಸಾವಿರ ಭಾಷೆಗಳಿಗೆ ಲಿಪಿಯಿಲ್ಲ. ಲಿಪಿ ಇರುವ ೨ ಸಾವಿರ ಭಾಷೆಗಳಲ್ಲಿ ಇತಿಹಾಸವನ್ನು ಹೊಂದಿದ ಹಾಗೂ ಮಹಾಭಾರತ,...

More Articles Like This

error: Content is protected !!
Join WhatsApp Group