ಸಿಂದಗಿ: ತಾಲೂಕಿನ ಗಬಸಾವಳಗಿ ಮತ್ತು ಮೋರಟಗಿ ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಮತದಾರರ ಪರಿಷ್ಕರಣೆ ಕುರಿತು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಅವರು ಪರಿಶೀಲನೆ ಮಾಡಿದರು.
ಮೋರಟಗಿ ಗ್ರಾಮದ ವಾರ್ಡ್ ನಂಬರ್ 1, 2, 4 ರಲ್ಲಿ ಮತ್ತು ಗಬಸಾವಳಗಿ ಗ್ರಾಮದ 1,2 3 ವಾರ್ಡ ಗಳಲ್ಲಿ ಕೂಡಾ ಮತದಾರರ ಗುರುತಿನ ಚೀಟಿ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು 18 ವರ್ಷ ಪೂರ್ಣಗೊಂಡವರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡು ಓಟರ ಐಡಿ ನೀಡಲು ಪ್ರಾರಂಭವಾಗಿದೆ ನೋಂದಣಿ ಮಾಡಿಸಿಕೊಳ್ಳಿ ಅಲ್ಲದೆ ಒಂದು ಗ್ರಾಮದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಮತದಾರರ ಪಟ್ಟಿಯಲ್ಲಿ ಡಿಲೀಟ್ ಆಗದೆ ಹಾಗೆ ಉಳಿದಿದೆ ಅದನ್ನು ಕೂಡಲೇ ಡಿಲೀಟ್ ಮಾಡಲು ಸ್ಥಳದಲ್ಲಿ ಇದ್ದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಲಮೇಲ ತಹಸೀಲ್ದಾರ್ ಸುರೇಶ ಚಾವಲರ್, ಸಿಂದಗಿ ತಹಸೀಲ್ದಾರ್ ನಿಂಗಣ್ಣ ಬಿರಾದಾರ, ಕಂದಾಯ ನಿರೀಕ್ಷಕ ಎ.ಎಂ. ಅತ್ತಾರ, ಗ್ರಾಮ ಲೆಕ್ಕಾಧಿಕಾರಿ ಮಾರುತಿ ಸಾಳುಂಕಿ, ಗ್ರಾಪಂ ಅಧ್ಯಕ್ಷ ಅಮೋಗಿ ಒಡೆಯರ, ಗ್ರಾಮ ಸಹಾಯಕ ವಿಶ್ವನಾಥ್ ವಾಲಿಕಾರ, ಸೇರಿದಂತೆ ತಾಲೂಕ ಆಲ್ಮೆಲ್ ಹಾಗೂ ಸಿಂದಗಿ ತಾಲೂಕ ಅಧಿಕಾರಿಗಳು ಇದ್ದರು.