spot_img
spot_img

ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಣದ ಮೂಲ ಆಶಯ ಆಗಬೇಕು

Must Read

- Advertisement -

ಬೆಂಗಳೂರು – ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಣದ ಮೂಲ ಆಶಯ ಆಗಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ ಭಾ.ಆ.ಸೇ(ನಿ) ಅಭಿಪ್ರಾಯಪಟ್ಟರು.

ಅವರು ದಿನಾಂಕ-1 ರಂದು ಶೇಷಾದ್ರಿಪುರಂ ಸಂಜೆ ಕಾಲೇಜು, ಪ್ರೇರಣಾ (ಆಂತರಿಕ ಗುಣಮಟ್ಟ ಭರವಸಾ ಸಮಿತಿ) ಮತ್ತು ಸಮರ್ಪಣ (ಶೇಷಾದ್ರಿಪುರಂ ಸಂಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ) ಆಯೋಜಿಸಿದ್ದ ‘ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಸಾಧನಾ ಪುರಸ್ಕಾರ ಪ್ರದಾನ’  ಮತ್ತು ವಿದ್ಯಾಲಯದ ಹೆಸರು ಮರುನಾಮಕರಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಶಿಕ್ಷಣ ನಮ್ಮನ್ನು ವಿವೇಕವಂತರನ್ನಾಗಿಸಬೇಕು ವಿವೇಕವಂತರಾದ ವಿದ್ಯಾರ್ಥಿಗಳಿಗೆ ಸಂಕಲ್ಪಶಕ್ತಿ ಒಡಮೂಡುತ್ತದೆ. ಸಂಕಲ್ಪಶಕ್ತಿ ಇದ್ದಾಗ ಸಾಧನೆ ಸುಲಭವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಬುದ್ದಿಶಕ್ತಿ ಹಾಗೂ ಆತ್ಮಶಕ್ತಿಯನ್ನು ವರ್ಧಿಸಿಕೊಳ್ಳಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೇಷಾದ್ರಿಪುರಂ ಶಿಕ್ಷಣದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿಗಳಾದ ನಾಡೋಜ ಡಾ.ವೂಡೇ ಪಿ ಕೃಷ್ಣ ಅವರು ಮಾತನಾಡಿ, ವಿದ್ಯಾರ್ಥಿಯ ಬದುಕಿಗೆ ದೂರದರ್ಶಿತ್ವ ಇರಬೇಕು ದೂರದರ್ಶಿತ್ವದ ಗುಣದೊಂದಿಗೆ ಪಡೆದ ಶಿಕ್ಷಣವು ಫಲಕೊಡುತ್ತದೆ, ಯಶಸ್ಸಿಗಾಗಿ ದುಡಿಯುವವರು ಅನೇಕರಿದ್ದಾರೆ ಆದರೆ ಮೌಲ್ಯಗಳಿಗಾಗಿ ದುಡಿಯುವವರು ವಿರಳವಾಗಿರುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಅಂಕಗಳ ಗಳಿಕೆಯೊಂದಿಗೆ ಮೌಲ್ಯಗಳಿಗಾಗಿ ದುಡಿಯಬೇಕು ಎಂದರು ಕಾರ್ಯಕ್ರಮದಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ 95% ಗಿಂತಲೂ ಅತ್ಯಧಿಕ ಅಂಕಗಳಿಸಿದ 74 ಜನ ಹಾಗೂ 90% ಗಿಂತಲೂ ಹೆಚ್ಚು ಅಂಕ ಗಳಿಸಿದ 72 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ವಿವಿಧ ವಿಷಯಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ಒಟ್ಟು 204 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಉಪಾಧ್ಯಕ್ಷರಾದ ಟಿ.ಎಸ್.ಹೆಂಜಾರಪ್ಪ, ಸಹಾಯಕ ಕಾರ್ಯದರ್ಶಿಗಳಾದ ಎಂ.ಎಸ್.ನಟರಾಜ್, ಧರ್ಮದರ್ಶಿಗಳಾದ  ಡಬ್ಲ್ಯು.ಡಿ ಅಶೋಕ್,  ಕೃಷ್ಣಸ್ವಾಮಿ.ಕೆ, ಪರಮಶಿವಯ್ಯ ಹಾಗೂ ಶೇಷಾದ್ರಿಪುರಂ ಸಂಜೆ ಕಾಲೇಜಿನ ಆಡಳಿತ ಸಲಹಾ ಮಂಡಳಿಯ ಅಧ್ಯಕ್ಷರಾದ ಪಿ.ಸಿ.ನಾರಾಯಣ, ಪ್ರಾಂಶುಪಾಲರಾದ ಪ್ರೊ.ಎನ್.ಎಸ್.ಸತೀಶ್, ಸಮರ್ಪಣ ಅಧ್ಯಕ್ಷರಾದ  ಜಿ.ಯೋಗೇಶ್, ಪ್ರೇರಣಾ ಸಂಯೋಜಕರಾದ ನಾಗಸುಧಾ.ಆರ್ ಹಾಗೂ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group