spot_img
spot_img

ಲೇಖಕ ಸುರೇಶ ಗುದಗನವರ ಅವರ ‘ಸುಪ್ತ ಸಾಧಕರು’ ಕೃತಿ ಬಿಡುಗಡೆ

Must Read

spot_img
- Advertisement -

ಧಾರವಾಡ – ಲೇಖಕ ಸುರೇಶ ಗುದಗನವರ ಅವರ ಸುಪ್ತ ಸಾಧಕರು ಕೃತಿಯು ಪುಸ್ತಕಗಳ ಸಾಗರಕ್ಕೆ ಇಂದು ಸೇರ್ಪಡೆಗೊಳ್ಳುತ್ತಿದೆ. ಇಂತಹ ಉತ್ಕೃಷ್ಟ ಕೃತಿಗಳು ಪುಸ್ತಕದ ಸಾಗರದ ಆಳಕ್ಕೆ ಸಿಲುಕದೆ, ಆಸಕ್ತರ ಕೈಗೆ ಸೇರಬೇಕು, ಕೆಲವೇ ಕೈಗಳಿಗೆ ಸೇರಿದರೂ ಅಲ್ಲಿ ಅಭಿಮಾನವಿರಲಿ, ಪ್ರೀತಿ ಇರಲಿ, ಅಂತಹ ಕೈಗಳಿಗೆ ಪುಸ್ತಕ ತಲುಪಿದಾಗ ಅದು ಸಾರ್ಥಕವಾಗುತ್ತದೆ ಎಂದು ಹಿರಿಯ ಸಾಹಿತಿ ಪ್ರೊ.ಮಾಲತಿ ಪಟ್ಟಣಶೆಟ್ಟಿ ಅಭಿಪ್ರಾಯ ಪಟ್ಟರು.

ಶನಿವಾರ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಹಾಗೂ ಸುಮಾ ಪ್ರಕಾಶನ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಲೇಖಕ ಸುರೇಶ ಗುದಗನವರ ಅವರ “ಸುಪ್ತ ಸಾಧಕರು” ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಪ್ರೊ.ಮಾಲತಿ ಪಟ್ಟಣಶೆಟ್ಟಿಯವರು, ಈ ಕೃತಿಯಲ್ಲಿ ೬೦ ವ್ಯಕ್ತಿ ಚಿತ್ರಣಗಳು ದಾಖಲಾಗಿವೆ.

ಅನ್ಯಾಯಕ್ಕೊಳಗಾದವರ, ಸಾಮಾನ್ಯ ಜನರ ಅಸಮಾನ್ಯ ಸಾಧನೆಯ ಚಿತ್ರಣಗಳು ಕಂಡು ಬರುತ್ತವೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ.ಕೃಷ್ಣಮೂರ್ತಿ ಬಿ.ಆರ್. ಮಾತನಾಡುತ್ತ ಇಂದು ಅಧ್ಯಾಪಕರ ಓದು ಕಡಿಮೆಯಾಗಿದೆ.

- Advertisement -

ಈ ಪ್ರಜಾಪ್ರಭುತ್ವ ರೂಪಗೊಂಡಿರುವುದೇ ಪುಸ್ತಕಗಳ ಓದಿನ, ಚಿಂತನ, ಮಂಥನ, ಚರ್ಚೆ, ವಿಮರ್ಶೆಗಳ ಮೂಲಕ. ಪುಸ್ತಕಗಳ ಓದು ನಮಗೆ ಅಧ್ಯಾತ್ಮ ವಿದ್ದಂತೆ. ಅಧ್ಯಾತ್ಮದ ಜೊತೆಗೆ ಈ ಕಾಲದ ಹೆಜ್ಜೆ ಗುರುತುಗಳು ಕಾಣಿಸುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಮಾತನಾಡುತ್ತ, ಜೀವನದಲ್ಲಿ ಅಪಘಾತ ಮತ್ತು ಆಘಾತಕ್ಕೊಳಗಾದವರು ಮನಸ್ಸು ಮಾಡಿದರೆ ಏನಾನ್ನಾದರೂ ಸಾಧಿಸಬಹುದು ಎಂಬುದು ಈ ಕೃತಿಯ ೬೦ ವ್ಯಕ್ತಿ ಚಿತ್ರಣಗಳಲ್ಲಿ ಕಾಣಸಿಗುತ್ತವೆ. ಈ ಕೃತಿಯು ಶಿಕ್ಷಕರು ಹಾಗೂ ಪಾಲಕರ ಕೈಯಲ್ಲಿದ್ದು, ಮಕ್ಕಳ ಮಾರ್ಗದರ್ಶನಕ್ಕೆ ಅತ್ಯುಪಯುಕ್ತವಾದುದು ಎಂದರು.

- Advertisement -

ಡಾ.ವೈ.ಎಂ.ಯಾಕೊಳ್ಳಿಯವರು ಕೃತಿಯ ಕುರಿತು ಮಾತನಾಡಿದರು. ಎಸ್.ತಾರಾನಾಥ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಲೇಖಕ ಸುರೇಶ ಗುದಗನವರ ದಂಪತಿಗಳನ್ನು ಸನ್ಮಾನಿಸಲಾಯಿತು.

ಕೃತಿಯ ಪ್ರಕಾಶಕ ಡಾ.ಭದ್ರಾವತಿ ರಾಮಾಚಾರಿ ಸ್ವಾಗತಿಸಿದರು. ವಿನಾಯಕ ಇನಾಮದಾರ ಪ್ರಾರ್ಥಿಸಿದರು. ಸಂಯೋಜಕ ಪ್ರಕಾಶ ಬಾಳಿಕಾಯಿ ವಂದಿಸಿದರು. ಡಾ.ಸುಜಾತಾ ಎಸ್. ನಿರೂಪಿಸಿದರು.

ಪ್ರೊ.ಆರ್.ಎಮ್.ಪಾಟೀಲ ಅತಿಥಿಗಳ ಪರಿಚಯಿಸಿದರು.
ಮಹಾಭಾರತ ಆಧಾರಿತ ನೃತ್ಯ ರೂಪಕವನ್ನು ಕುಮಾರಿ ಅನುಷ್ಕಾ ಮರೀಗೌಡರ ಮನಮೋಹಕವಾಗಿ ಪ್ರಸ್ತುತ ಪಡಿಸಿದರು.

ಕಾರ್ಯಕ್ರಮದಲ್ಲಿ ಡಾ.ಆರ್.ಬಿ.ಚಿಲುಮಿ, ಅಶೋಕ ಗೌರೋಜಿ, ರಾಮಚಂದ್ರ ಕುಲಕರ್ಣಿ ಡಾ.ನಾಗರಾಜ ಗುದಗನವರ, ಡಾ.ರಾಜಶ್ರೀ ಗುದಗನವರ, ಟಿ.ನಳಿನಿ ಭೀಮಪ್ಪ, ವಾಯ್.ಬಿ.ಕಡಕೋಳ, ರವಿ ಮರಿಗೌಡರ, ಡಾ.ಎ.ಎಲ್.ದೇಸಾಯಿ, ರಾಘವೇಂದ್ರ ಪ್ರಭು, ಈರಯ್ಯ ಕಿಲ್ಲೇದಾರ, ಪ್ರೇಮಾ ಯಾಕೊಳ್ಳಿ, ಗಣೇಶ ಮೂಲಿಮನಿ, ಶಿಲ್ಪಾ ಬಾಳಿಕಾಯಿ ಮುಂತಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group