spot_img
spot_img

ಸಂಪಾದಕೀಯ

Must Read

- Advertisement -

ಕಳೆದ ಮೂರ್ನಾಲ್ಕು ದಿನಗಳಿಂದ ನಮ್ಮ Times of ಕರ್ನಾಟಕ ಪ್ರಕಟವಾಗಿಲ್ಲ ಎಂಬುದನ್ನು ತಾವು ಗಮನಸಿರಬೆಕು. ಹಲವಾರು ಓದುಗರು ಫೋನ್ ಮಾಡಿ ವಿಚಾರಿಸಿದರು.

ತಾಂತ್ರಿಕ ಕಾರಣಗಳಿಂದ ನಮ್ಮ ವೆಬ್ ಸೈಟ್ ತೆರೆದುಕೊಳ್ಳುತ್ತಿರಲಿಲ್ಲ. ಇದರಿಂದ ಸುದ್ದಿ, ಬರಹಗಳನ್ನು ಪ್ರಕಟಿಸಲು ಆಗಲಿಲ್ಲ. ಕೆಲವು ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು ಎಂದು ಹೊರಟ ನಮ್ಮ ಪ್ರಯತ್ನಗಳಿಗೆ ತಣ್ಣೀರು ಬಿತ್ತು.

ಟೈಮ್ಸ್… ಬಂದ್ ಆದಾಗ ನಾನು ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದೆ. ಉಡುಪಿಯ ಮರವಂತೆ, ಮಲ್ಪೆ ಸಮುದ್ರ ತಟ, ಸೇಂಟ್ ಮೇರಿಯ ದ್ವೀಪಗಳು ತಮ್ಮ ವೈಭವವನ್ನು ಬಿಚ್ಚಿಟ್ಟುಕೊಂಡಾಗ ಅವುಗಳ ವರ್ಣನೆಯನ್ನು ಟೈಮ್ಸ್ ನಲ್ಲಿ ವಿವರಿಸಬೇಕೆಂದರೆ ವೆಬ್ ಸೈಟ್ ಸ್ತಬ್ದವಾಗಿತ್ತು.

- Advertisement -

ನಮಗೆ ಕೊರೋನಾ ವೈರಸ್ ಇದ್ದಂತೆ ಇದಕ್ಕೆ ಯಾವ ವೈರಸ್ ಹತ್ತಿಕೊಂಡಿತೋ ಎಂದು ತನಿಖೆ ಮಾಡಿ ಅದನ್ನು ಫಿಕ್ಸ್ ಮಾಡುವಷ್ಟರಲ್ಲಿ ನಾಲ್ಕು ದಿನ ಕಳೆದಿತ್ತು. ಈಗ ಸರಿಯಾಗಿದೆ.

ನಮ್ಮ ಆತ್ಮೀಯ ಓದುಗರು ಮೇಲಿಂದ ಮೇಲೆ ಕಾಲ್ ಮಾಡಿ Times of ಕರ್ನಾಟಕದ ಆರೋಗ್ಯದ ಬಗ್ಗೆ ವಿಚಾರಿಸುತ್ತಲೇ ಇದ್ದರು ತಮ್ಮ ಊರಿನ ಸುದ್ದಿಗಳು ಯಾಕೋ ಪ್ರಕಟವಾಗುತ್ತಿಲ್ಲ ಎಂಬ ದುಗುಡ ಎಲ್ಲರಿಗೂ ಸಹಜವೆ ಆದರೆ ಪರಿಸ್ಥಿತಿಯನ್ನು ವಿವರಿಸಿದಾಗ ನಮ್ಮ ವರದಿಗಾರರು ವೆಬ್ ಸೈಟ್ ಓಪನ್ ಆಗುವುದನ್ನೇ ಕಾಯುತ್ತಿದ್ದರು. ಈಗ ಕಾಯುವಿಕೆ ಮುಗಿದಿದೆ.

ತಂತ್ರಜ್ಞಾನ ವೆಂದ ಮೇಲೆ ತಾಂತ್ರಿಕ ತೊಂದರೆ ಇದ್ದೇ ಇರುತ್ತದೆ ರಿಪೇರಿ ಮಾಡುತ್ತ ಮುಂದುವರೆಯಬೇಕು. ಅನಾರೋಗ್ಯವಾದಾಗ ಕೆಲವು ಕಾಲ ಮನಸ್ಸು ಉದಾಸವಾದಂತೆ ವೆಬ್ ಸೈಟ್ ನ ಮನಸ್ಸೂ ಉದಾಸವಾಗಿತ್ತು.

- Advertisement -

ಈಗ ಪ್ರಫುಲ್ಲವಾಗಿದೆ. ನಮ್ಮ, ನಿಮ್ಮ ಊರಿನ ಸಭೆ ಸಮಾರಂಭಗಳು, ಹದಗೆಟ್ಟ ರಸ್ತೆಗಳು, ತುಂಬಿಕೊಂಡಿರುವ ಗಟಾರುಗಳು… ಇವೇ ಮುಂತಾದ ಜ್ವಲಂತ ಸಮಸ್ಯೆಗಳ ಬಗ್ಗೆ ನಮ್ಮ ಪತ್ರಿಕೆಯ ಮೂಲಕ ತಾವು ಬೆಳಕು ಚೆಲ್ಲಬಹುದು.

ತಮ್ಮ ಬರಹಗಳು, ಕವನಗಳು, ಕಥೆಗಳಿಗೆ ಸ್ವಾಗತ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಉರಿಲಿಂಗ ಪೆದ್ದಿ ಇವನ ಹೆಸರಿನಲ್ಲಿ ೩೬೬ ವಚನಗಳು‌ ದೊರೆತಿವೆ. ಇವನ ತಂದೆ- ತಾಯಿ ಇವನಿಗೆ ಇಟ್ಟ ಹೆಸರು ಪೆದ್ದಣ್ಣ. ಇವನು ಗೋದಾವರಿ ತೀರದ ಹಳ್ಳಿಯೊಂದರಲ್ಲಿ ವಾಸವಾಗಿದ್ದನು.ಉರಿಲಿಂಗಪೆದ್ದಿ ಮೂಲತಃ...
- Advertisement -

More Articles Like This

- Advertisement -
close
error: Content is protected !!
Join WhatsApp Group