ವಿದ್ಯುತ್ ಸಮಸ್ಯೆ ನೀಗಿಸಲು ವಿತರಣಾ ಕೇಂದ್ರಗಳ ಸ್ಥಾಪನೆ – ಸಚಿವ ಸುನೀಲಕುಮಾರ

Must Read

ಸಿಂದಗಿ: ನಿರಂತರ ವಿದ್ಯುತ್ ಸರಬರಾಜು ಮಾಡಬೇಕು ಈ ಭಾಗದ ಶಾಸಕರು ರೈತರ  ಸಮಸ್ಯೆಯನ್ನು ನೀಗಿಸಿದ್ದಲ್ಲದೆ ವಿಜಯಪುರದಲ್ಲಿ ಈ ಒಂದೂವರೆ ವರ್ಷದ ಅವಧಿಯಲ್ಲಿ  33 ಹೊಸ ಸಬ್ ಸ್ಟೇಷನ್ ಪ್ರಾರಂಭಿಸಿ ರೈತರ ಬಹುದಿನಗಳ ಬೇಡಿಕೆಯನ್ನು ವಿದ್ಯುತ್ ಇಂದನ ಸಚಿವರಾಗಿ ಈಡೇರಿಸಿದ್ದೇನೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲಕುಮಾರ ಹೇಳಿದರು.

ತಾಲೂಕಿನ ಆಹೇರಿ ಗ್ರಾಮದ ಹತ್ತಿರ ನೂತನವಾಗಿ ನಿರ್ಮಾಣವಾದ 2-100ಎಂ.ವ್ಹಿ.ಎ. 220 ಕೆವ್ಹಿ. ವಿದ್ಯುತ್ ಸ್ವೀಕರಣಾ ಕೆಂದ್ರವನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ 94 ವಿದ್ಯುತ್ ಪ್ರಸರಣಾ ಕೇಂದ್ರಗಳನ್ನು ಸ್ಥಾಪಿಸಿ ಬಹುಪಾಲು ವಿದ್ಯುತ್ ಕೊಡುಗೆ ನೀಡಿ ಸಮಸ್ಯೆಯನ್ನು ನೀಗಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಶಾಸಕ ರಮೇಶ ಭೂಸನೂರ ಮಾತನಾಡಿ, ಕಳೆದ 10 ವರ್ಷದ ಅವಧಿಯಲ್ಲಿ ಈ ಕ್ಷೇತ್ರದ ರೈತರ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯಿಂದ ಸಮರ್ಪಕ ನೀರು ಪೂರೈಸಲಾಗಿದ್ದಲ್ಲದೆ ಅದಕ್ಕೆ ಪೂರೈಕೆಗೆ ನಿರಂತರ ವಿದ್ಯುತ್ ಒದಗಿಸಬೇಕು ಎಂದು 220 ಕೆ.ವ್ಹಿ.ಸ್ಟೇಷನ್ ಶಂಕುಸ್ಥಾಪನೆ ಮಾಡಲಾಗಿತ್ತು ಅದಕ್ಕೆ ಮತ್ತೆ ಬಿಜೆಪಿ ಸರಕಾರದಿಂದಲೆ ಹಣ ತಂದು ಕಾಮಗಾರಿ ಪೂರ್ಣಗೊಳಿಸಿ ರೈತರಿಗೆ ನೀಡಿದ ಭರವಸೆಯನ್ನು ಈಡೇರಿಸಿ ನುಡಿದಂತೆ ನಡೆದುಕೊಂಡಿದ್ದೇವೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಗಬಸಾವಳಗಿ ಗ್ರಾಪಂ ಅದ್ಯಕ್ಷ ಮಲ್ಲಮ್ಮ ಬಸನಗೌಡ ಬಿರಾದಾರ, ಬೆಳಗಾವಿ ಪ್ರಾದೇಶಿಕ ಆಯುಕ್ತ ಕೆ.ಪಿ.ಮೋಹನರಾಜ್, ಹುಬ್ಬಳಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ.ಭಾರತಿ, ಬಾಗಲಕೋಟ ಪ್ರಸರಣ ವಲಯ ಮುಖ್ಯ ಇಂಜನೀಯರ ಎಸ್.ವ್ಹಿ.ಮಂಜುನಾಥ, ಪ್ರಸರಣ ವೃತ್ತದ ಆಧೀಕ್ಷಕ ಇಂಜನೀಯರ ಜಿ.ಕೆ.ಗೊಟ್ಯಾಳ, ವಿಜಯಪುರ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜನೀಯರ ಸುನಂದಾ ಜಂಬಗಿ, ವಿಜಯಪುರ ಟಿ.ಎಸ್ ಮತ್ತು ಎಸ್ ಎಂ ವಿಭಾಗದ ಕಾರ್ಯನಿರ್ವಾಹಕ ಇಂಜನೀಯರ ಸದಾನಂದ ಪಾಟೀಲ,  ಮಂಡಲ ಅಧ್ಯಕ್ಷ ಈರಣ್ಣಾ ರಾವೂರ, ಹಿಂದೂಳಿದ ವರ್ಗಗಳ ಅಧ್ಯಕ್ಷ ರವಿ ನಾಯ್ಕೋಡಿ, ಸುರೇಶ ಮಳಲಿ, ಶಂಕರ ಬಗಲಿ, ಸಿದ್ದು ಬುಳ್ಳಾ, ಸಂತೋಷ ಪಾಟೀಲ ಡಂಬಳ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group