ಕೇಂದ್ರ ಸಚಿವ ರಾಮ್ ವಿಲಾಸ ಪಾಸ್ವಾನ್ ನಿಧನ

Must Read

ಹೊಸದಿಲ್ಲಿ – ಕೇಂದ್ರ ಸಚಿವ, ದಲಿತ ನಾಯಕ ರಾಮ್​ ವಿಲಾಸ್​ ಪಾಸ್ವಾನ್​ ಇಂದು ನಿಧನರಾಗಿದ್ದಾರೆ. ಲೋಕ ಜನಶಕ್ತಿ ಪಾರ್ಟಿಯ ಸಂಸ್ಥಾಪಕರಾದ ರಾಮ್ ವಿಲಾಸ್​ ಪಾಸ್ವಾನ್​, 8 ಬಾರಿ ಸಂಸದರಾಗಿದ್ದ ಅವರು ಕೆಲ ದಿನಗಳ ಹಿಂದಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಪಾಸ್ವಾನ್ ನಿಧನದ ಬಗ್ಗೆ ಅವರ ಪುತ್ರ ಚಿರಾಗ್​ ಪಾಸ್ವಾನ್​ ಟ್ವೀಟ್ ಮಾಡಿದ್ದಾರೆ.

” ಪಪ್ಪ ಇನ್ನು ಈ ಜಗತ್ತಿನಲ್ಲಿ ಇಲ್ಲ. ಎಂದು ಹೇಳಿ, ಪಪ್ಪ ನೀವು ಎಲ್ಲಿದ್ದರೂ ನನ್ನ ಜೊತೆ ಇರುತ್ತೀರಿ” ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದಲೂ ರಾಮ್​ ವಿಲಾಸ್ ಪಾಸ್ವಾನ್​ ದೆಹಲಿಯ ಪೋರ್ಟೀಸ್​ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು.

ಪ್ರಧಾನಿ ನರೇಂದ್ರ ಮೋದಿ ಯವರು ಪಾಸ್ವಾನ್ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿ, ನಾನು ಒಬ್ಬ ಉತ್ತಮ ಸ್ನೇಹಿತನನ್ನು ಕಳೆದುಕೊಂಡೆ ಎಂದಿದ್ದಾರೆ.

ಸಚಿವೆ ಸ್ಮೃತಿ ಇರಾಣಿಯವರು, ಪಾಸ್ವಾನ್ ಅವರ ನಿಧನ ದುಃಖಕರ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ, ಪಾಸ್ವಾನ್ ಜಿ ಅವರ ನಿಧನ ದುಃಖದಾಯಕ ಎಂದಿದ್ದಾರೆ.

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ ಯಾದವ ಅವರು , ಪಾಸ್ವಾನ್ ಇಲ್ಲದ ಬಿಹಾರವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group