ಪ್ರಧಾನ ಮಂತ್ರಿ ಮೋದಿ ಅವರ ಮಾತೋಶ್ರಿ ಹೀರಾ ಬೆನ್ ನಿಧನ – ಸಂಸದ ಈರಣ್ಣ ಕಡಾಡಿ ಸಂತಾಪ

Must Read

ಮೂಡಲಗಿ: ವಿಶ್ವವೇ ನಿಬ್ಬೆರಗಾಗುವಂತೆ ಪ್ರಧಾನಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಹೆಮ್ಮಯ ಸುಪುತ್ರನಿಗೆ ಜನ್ಮನೀಡಿದ ಶತಾಯುಷಿ ಶ್ರೀಮತಿ ಹೀರಾ ಬೆನ್ ಅವರ ನಿಧನದಿಂದ ಮನಸ್ಸಿಗೆ ತೀವ್ರ ನೋವುಂಟಾಗಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅವರು ಸಂತಾಪ ವ್ಯಕ್ತಪಡಿಸಿದರು.

ಈ ದುಃಖದ ಸಮಯದಲ್ಲೂ ದೇಶದ ಯಾವುದೇ ಕೆಲಸಗಳು ನಿಲ್ಲದಂತೆ ಸೂಚನೆ ನೀಡಿ ತಮ್ಮ ತಾಯಿಯ ಅಂತಿಮ ವಿಧಿ ವಿಧಾನಗಳನ್ನು ನೇರವೇರಿಸುವ ಮೂಲಕ ಅವರ ಪುತ್ರ ಧರ್ಮವನ್ನು ನಿಭಾಯಿಸಿದರು ಮತ್ತು ತಕ್ಷಣ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ತಮ್ಮ ರಾಜಧರ್ಮವನ್ನೂ ಕೂಡಾ ಪಾಲಿಸಿದರು ಪ್ರಧಾನಿ ಮೋದಿ.

ಆದರೂ ಕೂಡಾ ಅವರ ಮನಸ್ಸಿನಲ್ಲಿ ಇರುವ ದುಃಖ ದುಃಮಾನಗಳಲ್ಲಿ ಈ ದೇಶದ ಜನ ಭಾಗಿಯಾಗಿದ್ದಾರೆ. ಅವರ ತಾಯಿಯ ಅಗಲುವಿಕೆಯ ನೋವನ್ನು ನಿಭಾಯಿಸುವ ಶಕ್ತಿಯನ್ನು ಭಗವಂತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆಂದು ಸಂಸದ ಈರಣ್ಣ ಕಡಾಡಿ ಹೇಳಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group