- Advertisement -
ಬೀದರ – ಬಿಸ್ಕಿಟ್ ಕದ್ದು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿ 88920 ರೂಪಾಯಿ ಮೌಲ್ಯದ ಬಿಸ್ಕಿಟ್ ಜಪ್ತಿ ಮಾಡಿಕೊಂಡಿದ್ದಾರೆ.
ಹೈದ್ರಾಬಾದ್ ನಿಂದ ಬೀದರ್ ಗೆ ಬಿಸ್ಕಿಟ್ ಡೆಲಿವರಿ ಮಾಡಲು ಬಂದಾಗ ಭಂಗೂರು ಬಳಿ ಗಾಡಿ ನಿಲ್ಲಿಸಿ ಊಟಕ್ಕೆ ಕುಳಿತಾಗ 114 ಬಿಸ್ಕೇಟ್ ಬಾಕ್ಸ್ ಕದ್ದು ಪರಾರಿಯಾಗಿದ್ದ ಖದೀಮರು.
ಬೀದರ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9 ರ ಭಂಗೂರು ಬಳಿ ಘಟನೆ ನಡರದಿದ್ದು ಈ ಕುರಿತು ಮನ್ನಾಏಖೇಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
- Advertisement -
ಇದರ ಬೆನ್ನು ಬಿದ್ದ ಮನ್ನಾಏಖೇಳಿ ಪೊಲೀಸರು ಮೂರು ದಿನಗಳಲ್ಲೇ ಬಿಸ್ಕಿಟ್ ಕಳ್ಳರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ