ಬೀದರ – ಬರುವ ಚುನಾವಣೆಯಲ್ಲಿ ಜನರು ಆಶೀರ್ವಾದ ಮಾಡಿ ಅಧಿಕಾರಕ್ಕೆ ತಂದರೆ ನಿಮ್ಮ ಬದುಕು ಸರಿಪಡಿಸುತ್ತೇನೆ ಇಲ್ಲವಾದರೆ ಪಕ್ಷವನ್ನು ಸಂಪೂರ್ಣವಾಗಿ ಉಚ್ಛಾಟಿಸುತ್ತೇನೆ ಮತ್ತೆ ಮತ ಕೇಳಲು ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಬೀದರನಲ್ಲಿ ಪಂಚರತ್ನ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ದಕ್ಷಿಣ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ ನಿರಂತರವಾಗಿ ಪಂಚರತ್ನ ಯಾತ್ರೆ ಮಾಡಿದ್ದೇವೆ. ಆ ಭಾಗದಲ್ಲಿ ತಂದೆ – ತಾಯಿಗಳು ಆಶೀರ್ವಾದ ಮಾಡಿದ್ದಾರೆ. ಈ ಕಲ್ಯಾಣ ಕರ್ನಾಟಕ ಭಾಗದಲ್ಲೂ ಜನರ ಆರ್ಶೀವಾದ ಬೇಕು ಎಂದರು.
ಕಲ್ಯಾಣ ಕರ್ನಾಟಕದಲ್ಲೆ ಮೊದಲ ಬಾರಿಗೆ ಎರಡನೇ ಹಂತವಾಗಿ ಬೀದರ್ ನಿಂದ ಪಂಚರತ್ನ ಯಾತ್ರೆ ಪ್ರಾರಂಭ ಮಾಡಿದ್ದೇನೆ. ರಾಜ್ಯದ 6 ಕೋಟಿಗೂ ಅಧಿಕ ಜನರ ಬದುಕು ಸರಿಪಡಿಸಬೇಕಿದೆ. ಸರಿಪಡಿಸಲು ಒಂದು ಬಾರಿ ಜನತಾ ಸರ್ಕಾರವನ್ನು ಸಂಪೂರ್ಣವಾಗಿ ಬಹುಮತದೊಂದಿಗೆ ಅಧಿಕಾರಕ್ಕೆ ತನ್ನಿ.ವ್ಯಾಮೋಹ ಬಿಟ್ಟು ನೀವು ಆಶೀರ್ವಾದ ಮಾಡಿದರೆ ನಿಮ್ಮ ಬದುಕು ಸರಿಪಡಿಸುತ್ತೇನೆ ಇಲ್ಲವಾದ್ರೆ ಈ ಪಕ್ಷವನ್ನು ಸಂಪೂರ್ಣವಾಗಿ ಉಚ್ಚಾಟನೆ ಮಾಡುತ್ತೇನೆ ಮತ್ತೆ ಮತವನ್ನೆ ಕೇಳಲು ಬರುವುದಿಲ್ಲ ಎನ್ನುವ ಶಪಥ ಮಾಡಿದ್ದೇನೆ ಎಂದರು.
ಈ ಬಾರಿ ಪಂಚರತ್ನ ಯಾತ್ರೆ ಯಾಕೆ ಮಾಡಿದ್ದನೆ ಎಂದರೆ ಎರಡು ವರ್ಷಗಳ ಕೊವೀಡ್ ನಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಜನರ ಹತ್ತಾರು ಸಮಸ್ಯೆಗಳನ್ನು ನೋಡಿ ಈ ಯಾತ್ರೆ ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ವರದಿ: ನಂದಕುಮಾರ ಕರಂಜೆ, ಬೀದರ