ಮೂಡಲಗಿ: ತಾಲೂಕಿನ ಹೊಸಯರಗುದ್ರಿ ಗ್ರಾಮದ ಶ್ರೀ ಈರಾಲಿಂಗೇಶ್ವರ ಮಠದಲ್ಲಿ ಬ್ರಹ್ಮೈಕ್ಯ ಅವಧೂತ ಶ್ರೀ ಸದ್ಗುರು ಈರಾಲಿಂಗೇಶ್ವರ ಶಿವಯೋಗಿಗಳ 38ನೇ ಪುಣ್ಯಸ್ಮರಣೋತ್ಸವ ಹಾಗೂ ಶ್ರೀ ಶ್ರೀನಿವಾಸ ಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತವಾಗಿ ಜ.11 ರಿಂದ 13ವರಿಗೆ ಸತ್ಸಂಗ ಸಮ್ಮೇಳನ ಮತ್ತು ಮಹಾರಥೋತ್ಸವ ಹಾಗೂ ವಿಶ್ವಶಾಂತಿಗಾಗಿ ಮಹಾಚಂಡಿ ಹೋಮ ಕಾರ್ಯಕ್ರಮ ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ಧಪ್ರಭು ಶಿವಾಚಾರ್ಯ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಜರುಗಲಿದೆ.
ಜ.11ರಂದು ಸಾಯಂಕಾಲ 5ಕ್ಕೆ ಮಹಾರಥೋತ್ಸವ ಜರುಗುವುದು, ಜ.11 ರಿಂದ 13 ವರೆಗೆ ಪ್ರತಿದಿನ ಮುಂಜಾನೆ 10 ಗಂಟೆಗೆ ಮತ್ತು ಜ.11 ಮತ್ತು 12 ಸಾಯಂಕಾಲ 7 ಗಂಟೆಗೆ ವಿವಿಧ ಮಠಾಧೀಶರಿಂದ ಪ್ರವಚನ ಕಾರ್ಯಕ್ರಮ ಜರುಗಲಿದೆ.
ಜ.12 ರಂದು ರಾತ್ರಿ ವಿವಿಧ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ಜರುಗುವುದು, ಜ.13 ರಂದು ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ಧಪ್ರಭು ಶಿವಾಚಾರ್ಯ ಮಹಾಸ್ವಾಮೀಜಿಗಳ ಪಾದಪೂಜೆ ಹಾಗೂ ಕಿರೀಟ ಪೂಜೆಯೊಂದಿಗೆ ಪ್ರವಚನ ಮಂಗಳಗೊಳ್ಳುವುದು.
ಅಂದು ಮುಂಜಾನೆ 9ಕ್ಕೆ ಗ್ರಾಮದ ಸದ್ಭಕ್ತರು ಮತ್ತು ತಾಯಂದಿರಿಂದ ಗ್ರಾಮದ ಪ್ರಮುಖ ಬೀದಿಯಲ್ಲಿ ಶ್ರೀ ಈರಾಲಿಂಗೇಶ್ವರ ಉತ್ಸವದ ಮೆರವಣಿಗೆ ಸಾಗಿ ಶ್ರೀಮಠಕ್ಕೆ ಬಂದ ನಂತರ ಧರ್ಮಸಭೆ ಕಾರ್ಯಕ್ರಮ ಹಾಗೂ ಮಹಾಪ್ರಸಾದದೊಂದಿಗೆ ಮಂಗಳಗೊಳ್ಳುತ್ತದೆ.