ಎನ್.ಸಿ.ಸಿ. ಘಟಕದ ವಿದ್ಯಾರ್ಥಿಗಳಿಗೆ ಡಿಡಿಜಿ ಕಮಾಂಡೇಷನ್ ಪ್ರಶಸ್ತಿ

Must Read

ಸಿಂದಗಿ: ಜಿ. ಪಿ. ಪೋರವಾಲ ಕಲಾ, ವಾಣಿಜ್ಯ ಮತ್ತು ವಿ. ವಿ. ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದ ಎನ್.ಸಿ.ಸಿ. ಘಟಕದ ವಿದ್ಯಾರ್ಥಿಯಾದ ಸಿನಿಯರ್ ಅಂಡರ್ ಆಫೀಸರ್ ಕೃಷ್ಣಾ ಜಂಬೇನಾಳ ದೆಹಲಿಯಲ್ಲಿ ನಡೆದ 74ನೇ ಗಣರಾಜ್ಯೋತ್ಸವದ ಅಂಗವಾಗಿ ಕರ್ತವ್ಯ ಪಥದಲ್ಲಿ ಪಾಲ್ಗೊಂಡಿದ್ದಕ್ಕೆ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‍ದ, ಡೆಪ್ಯೂಟಿ ಡೈರೆಕ್ಟರೇಟ್ ಜನರಲ್‍ರಾದ ಏರ್‍ ಕಮಾಂಡರ್ ಬಿ. ಕನ್ವಾರ್ ವಿ.ಎಸ್.ಎಂ. ಅವರು ಡಿಡಿಜಿ ಕಮಾಂಡೇಷನ್ ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದಾರೆ. ಅದೇರೀತಿಯಾಗಿ ಎನ್.ಸಿ.ಸಿ. ಘಟಕದ ಇನ್ನೊರ್ವ ವಿದ್ಯಾರ್ಥಿಯಾದ ಕೆಡೆಟ್ ಬಸಲಿಂಗಯ್ಯಾ ಹಿರೇಮಠ ಚಂಡಿಗಡದಲ್ಲಿ ನಡೆದ ರಾಷ್ಟ್ರಮಟ್ಟದ ಶಾರ್ಪಶೂಟಿಂಗ್ ಚಾಂಪಿಯನ್‍ಸಿಪ್ ಕ್ಯಾಂಪ್‍ನಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‍ದ ಪ್ರತಿನಿಧಿಯಾಗಿ ಭಾಗವಹಿಸಿದಕ್ಕೆ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‍ದ ಡೆಪ್ಯೂಟಿ ಡೈರೆಕ್ಟರೇಟ್ ಜನರಲ್‍ರಾದ ಏರ್‍ ಕಮಾಂಡರ್ ಬಿ.ಕನ್ವಾರ್ ವಿ.ಎಸ್.ಎಂ. ಡಿಡಿಜಿ ಕಮಾಂಡೇಷನ್ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.

ಸಂಸ್ಥೆಯ ಚೇರಮನ್ ಪೂಜ್ಯಶ್ರೀ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು, ಆಡಳಿತ ಮಂಡಳಿಯ ನಿರ್ದೇಶಕರು,  ಶ್ರೀ. ಡಿ. ಎಮ್. ಪಾಟೀಲ ಪ್ರಾಚಾರ್ಯರು, ಎನ್.ಸಿ.ಸಿ. ಅಧಿಕಾರಿಯಾದ ಲೆಫ್ಟನೆಂಟ್ ಡಾ. ರವಿ. ಲಮಾಣಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

Latest News

ಯಶಸ್ವಿ ಹಾಸನಾಂಬ ಫಿಲಂ ಫೆಸ್ಟಿವಲ್

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮ್ಯಾಕ್ಸ್ ಕಾನ್, ಡ್ರೀಮ್ ಸ್ಟುಡಿಯೋ ಎಂಟರ್ಟೈನ್ಮೆಂಟ್, ವೆಂಚರ್ ಮೂವೀಸ್  ವತಿಯಿಂದ ಹಾಸನಾಂಬ ಚಲನಚಿತ್ರೋತ್ಸವ 2025 ಕಾರ್ಯಕ್ರಮವನ್ನು...

More Articles Like This

error: Content is protected !!
Join WhatsApp Group