ಮೂಡಲಗಿ: ಛತ್ರಪತಿ ಶಿವಾಜಿ ಮಹಾರಾಜರ ವೃತ್ತ ಉದ್ಘಾಟನೆ

Must Read

ಮೂಡಲಗಿ: ಪಟ್ಟಣದ ನಾಗಲಿಂಗ ನಗರದ ಹತ್ತಿರ ಗುರ್ಲಾಪೂರ ರಸ್ತೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದ ಉದ್ಘಾಟನಾ ಸಮಾರಂಭ ರವಿವಾರದಂದು ಜರುಗಿತು.

ಛತ್ರಪತಿ ಶಿವಾಜಿ ಮಹಾರಾಜರ  ವೃತ್ತದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಪೂಜೆಸಲ್ಲಿಸಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ನಾಡು ಕಂಡ ಅಪ್ರತಿಮ ಅರಸ. ಹಿಂದೂ ಸ್ವರಾಜ ನಿರ್ಮಾಣದ ಕನಸಾಗಿತ್ತು. ಶಿವಾಜಿ ಮಹಾರಾಜರ ಧೈರ್ಯ ಇಂದಿನ ಯುವಕರಿಗೆ ಆದರ್ಶವಾಗಲಿ ಎಂದರು.

ಸಮಾರಂಭದಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಆರ್.ಪಿ.ಸೋನವಾಲ್ಕರ, ಸದಸ್ಯರಾದ ಆನಂದ ಟಪಾಲದಾರ, ಶಿವು ಸಣ್ಣಕ್ಕಿ, ಈರಪ್ಪ ಮುನ್ಯಾಳ, ಪಾಂಡು ಮಹೇಂದ್ರಕರ ಮತ್ತು ಅನ್ವರ ನದಾಫ್, ಬಸು ಝಂಡೇಕುರಬರ, ಭೀಮಶಿ ಬಡಗನ್ನವರ, ಮರಾಠಾ ಸಮಾಜದ ಮುಖಂಡರಾದ ಭೀಮಶಿ ಮಾಲೋಜಿ, ಬಾಬುರಾವ್ ಚೌವ್ಹಾನ್, ರವಿ ಜಾಧವ, ಶಿವಬಸು ಮಾಲೋಜಿ, ಬಾಬು ಮೊರೆ, ಬಾಳು ಇಂಗಳೆ, ವಿಠ್ಠಲ ಜಾಧವ, ವಿಷ್ಣು ಮಾಲೋಜ, ಕುಮಾರ ಬಿರಡಿ, ಆನಂದ ಮಾಲೋಜಿ, ರಾಜು ಮಾಲೋಜಿ, ಸಚೀನ ಮಾಲೋಜಿ, ಸಿದ್ದು ಮಾಲೋಜಿ, ಮಾರುತಿ ಶಿಂಧೆ, ಈರಪ್ಪ ಮಾಲೋಜಿ, ಸಂಜು ಜಾಧವ, ಕಲ್ಲಪ್ಪ ಮಾಲೋಜಿ, ಪ್ರಕಾಶ ಮಾಲೋಜಿ, ವೆಂಕಪ್ಪ ಮಾಲೋಜಿ, ಕೇದಾರಿ ಮಾನೆ ಮತ್ತಿತರರು ಉಪಸ್ಥಿತರಿದ್ದರು.

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group