spot_img
spot_img

ಶಿವನ ಧ್ಯಾನವು ಜೀವನದಲ್ಲಿ ಶಾಂತಿ, ನೆಮ್ಮದಿ ತರುತ್ತದೆ

Must Read

spot_img

 

ಮೂಡಲಗಿ: ಶಿವರಾತ್ರಿ ದಿನದಂದು ಮಾಡುವ ಉಪವಾಸ, ಧ್ಯಾನ ಮತ್ತು ಪ್ರಾರ್ಥನೆ ಇವುಗಳಿಂದ ದೇವರ ಅನುಗ್ರಹವಾಗುವುದು ಎಂದು ವಿಜಯಪುರದ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಬ್ರಹ್ಮಕುಮಾರಿ ಶೈಲಾ ಅಕ್ಕನವರು ಹೇಳಿದರು.

ಇಲ್ಲಿಯ ಲಕ್ಷ್ಮೀನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದದಲ್ಲಿ 87ನೇ ಶಿವರಾತ್ರಿ ಹಬ್ಬಕ್ಕೆ ಧ್ಜಜಾರೋಹಣವನ್ನು ನೇರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಶುದ್ಧ ಮನಸ್ಸು ಮತ್ತು ಸಾತ್ವಿಕ ಆಹಾರವು ಮನುಷ್ಯನಲ್ಲಿ  ಶಾಂತಿ, ನೆಮ್ಮದಿಯನ್ನು ತರುತ್ತವೆ ಎಂದರು.

ಮೂಡಲಗಿಯ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಬ್ರಹ್ಮಕುಮಾರಿ ರೇಖಾ ಅಕ್ಕನವರು ಪ್ರಾಸ್ತಾವಿಕ ಮಾತನಾಡಿ, ಶಿವರಾತ್ರಿಯ ಮಹತ್ವವನ್ನು ತಿಳಿಸಿದರು.

ಸವಿತಾ ಅಕ್ಕನವರು, ವಿಜಯಪುರದ ಬ್ರಹ್ಮಕುಮಾರ ಡಾ. ರಿಷಿಕೇಶ ಪಾಟೀಲ, ಬ್ರಹ್ಮಕುಮಾರ ಚೇತನ ಉಪಸ್ಥಿತರಿದ್ದರು. 

ಈಶ್ವರಿ ವಿಶ್ವವಿದ್ಯಾಲಯ ಕೇಂದ್ರದಿಂದ ಸಾತ್ವಿಕ ಆಹಾರವನ್ನು ವಿತರಿಸಿದರು. 

ಶಿವಪುತ್ರಯ್ಯ ಮಠಪತಿ, ವೈ.ಬಿ. ಕುಲಿಗೋಡ, ಈರಪ್ಪ ಹಂದಿಗುಂದ, ಈರಪ್ಪ ಹಂದಿಗುಂದ, ತುಂಗವ್ವ ಸೋನವಾಲಕರ, ಸುಮಿತ್ರ ಸೋನವಾಲಕರ, ಮಹಾದೇವಿ ತಾಂವಂಶಿ, ತಾರಾ ಸೋನವಾಲ್ಕರ, ರಜನಿ ಬಂದಿ, ಸರೋಜಾ ಹೊಸೂರ, ಲಕ್ಷ್ಮೀ ಮತ್ತಿತರರು ಇದ್ದರು.

- Advertisement -
- Advertisement -

Latest News

ಸೈನಿಕರಂತೆ ಸದಾ ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಸ್ತುತ್ಯರ್ಹ- ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು. ರವಿವಾರದಂದು ತಾಲೂಕಿನ ಕುಲಗೋಡ...
- Advertisement -

More Articles Like This

- Advertisement -
close
error: Content is protected !!