ಮೂಡಲಗಿ: ಸಮಾಜದಲ್ಲಿ ಅಂಗವಿಕಲರು ಬೆಳೆಯಬೇಕಾದರೆ ಅವರು ಮನೆಯ ಬಿಟ್ಟು ಹೊರಗಡೆ ಬಂದು ಧೈರ್ಯದಿಂದ ಮುನ್ನಡೆದರೆ ಮಾತ್ರ ಸ್ವಾವಲಂಬಿ ಜೀವನ ನಡೆಸಲು ಸಾಧ್ಯ ಎಂದು ರಾಷ್ಟ್ರೀಯ ವ್ಹೀಲ್ ಚೇರ್ ಕ್ರಿಕೆಟ್ ಆಟಗಾರ ಹಣಮಂತ ಹಾವಣ್ಣವರ ಹೇಳಿದರು.
ಅವರು ಇತ್ತೀಚೆಗೆ ಮೂಡಲಗಿ ಶ್ರೀನಿವಾಸ ಕಂಪ್ಯೂಟರ್ ಕಾರ್ಯಾಲಯದಲ್ಲಿ ನೆಹರು ಯುವ ಕೆಂದ್ರ ಬೆಳಗಾವಿ ಹಾಗೂ ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘ ಮೂಡಲಗಿ ಜೈ ಕರ್ನಾಟಕ ಅಂಗವಿಕಲರ ಗ್ರಾಮಿಣ ಅಬಿವೃದ್ದಿ ಸಂಘದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ಹಳ್ಳೂರ ಗ್ರಾಮದ ಸಮಾಜ ಸೇವಕರು ಹಾಗೂ ಸಂಘಟನಾ ಚತುರ ಸಿದ್ದಣ್ಣ ದುರದುಂಡಿ ಅವರ ಯುವ ಸಂಘಟನೆ ಮತ್ತು ನಿಸ್ವಾರ್ಥ ಸೇವೆ ಮಾಡುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಅಧ್ಯಕ್ಷ ಸುಭಾಸ ಗೊಡ್ಯಾಗೋಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ ಪ್ರತಿಯೊಬ್ಬ ಅಂಗವಿಕಲರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ದುರದುಂಡಿ ಮಾತನಾಡಿ ಯುವ ಸಂಘಟನೆ, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮನುಷ್ಯನಿಗೆ ಪ್ರತಿಫಲ ಇಂದಲ್ಲ ನಾಳೆ ಬಂದೆ ಬರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೈ ಕರ್ನಾಟಕ ಅಂಗವಿಕಲರ ಗ್ರಾಮಿಣ ಅಭಿವೃದ್ದಿ ಸಂಘದ ಕಾರ್ಯದರ್ಶಿ ಹಾಲಪ್ಪ ಗಡ್ಡೆಕಾರ, ಪೂರ್ಣಿಮಾ ಗೊಡ್ಯಾಗೋಳ, ರಮೇಶ ಉಪ್ಪಾರ, ಗೀತಾ ಅಟಮಟ್ಟಿ, ಮಂಜುನಾಥ ರೇಳೆಕರ ಹಾಗೂ ಸಂಘಟಕರು ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.