spot_img
spot_img

ಸಿಂದಗಿ: ದರೋಡೆಕೊರರ ಬಂಧನ, ಅಪಾರ ಪ್ರಮಾಣದ ಸಲಕರಣೆ ವಶ

Must Read

- Advertisement -

ಸಿಂದಗಿ: ಪಟ್ಟಣದ ಶಾಂತೇಶ್ವರ ಮಠದ ಹತ್ತಿರ ಇರುವ ನಾಗರಾಜ ತಂದೆ ಈರಣ್ಣ ಪತ್ತಾರ ಅವರ ಜ್ಯುವೆಲರ್ಸ ಅಂಗಡಿಯಲ್ಲಿ ಫೆ. 13 ರಂದು ನಾಲ್ಕು ಜನ ಅಪರಿಚಿತರು ಮುಖಕ್ಕೆ ಕಪ್ಪು ಮಾಸ್ಕ ಹಾಕಿಕೊಂಡು ಕೈಯಲ್ಲಿ ಕಂಟ್ರಿ ಪಿಸ್ತೂಲ್, ಮಚ್ಚುಗಳನ್ನು ಹಿಡಿದುಕೊಂಡು ಸುಲಿಗೆ ಮಾಡುವ ಉದ್ದೇಶದಿಂದ ಫಿರ್ಯಾದಿಯ ಅಂಗಡಿಯ ಒಳಗೆ ಬಂದು ಪಿಸ್ತೂಲ್ ತೋರಿಸಿ ಹೆದರಿಸಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸುಲಿಗೆ ಮಾಡಲು ಪ್ರಯತ್ನಿಸಿ ಓಡಿ ಹೋಗಿದ್ದರು ಅವರನ್ನು ಹಿಡಿಯುವಲ್ಲಿ ಸಿಂದಗಿ ಪೊಲೀಸ ಠಾಣೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ವಿಜಯಪೂರ ಮತ್ತು ಹೆಚ್ಚುವರಿ ವಿಜಯಪುರ ಎಸ್ ಪಿ ರವರ ಅವರ ಮಾರ್ಗದರ್ಶನದಲ್ಲಿ ಚಂದ್ರಕಾಂತ ನಂದರಡ್ಡಿ ಡಿ.ಎಸ್.ಪಿ. ಇಂಡಿ ಉಪವಿಭಾಗ ರವರ ನೇತೃತ್ವದಲ್ಲಿ ಸಿಪಿಐ ಹುಲುಗಪ್ಪ, ಪಿಎಸ್‍ಐ ಶಿವರಾಜ ನಾಯಕವಾಡಿ ಸಿಬ್ಬಂದಿಯಾದ ಎಮ್.ಜಿ. ಬಿರಾದಾರ ಎ.ಎಸ್.ಐ, ಚಿ.ಎಲ್. ಪಟೇದ, ಎಸ್.ಕೆ. ಯಳಸಂಗಿ, ಚಿ.ಜೆ. ಮುಳಸಾವಳಗಿ,  ಎಸ್.ಎಸ್. ನಾಟೀಕಾರ,  ಆರ್.ಎಲ್.ಕಟ್ಟಿಮನಿ,  ಪಿ.ಕೆ. ನಾಗರಾಳ,  ಎಸ್.ಎಸ್. ಕೊಂಡಿ, ಎಸ್.ಡಿ.ದೊಡಮನಿ ಅವರು ಫೆ. 21 ರಂದು ಬೆಳಗಿನ ಜಾವ 5 ಜನರನ್ನು ಬಂಧಿಸಿ ಒಟ್ಟು ರೂ.106000 ಮೌಲ್ಯದ ಪಿಸ್ತೂಲ ಸೇರಿದಂತೆ ಮಚ್ಚುಗಳನ್ನು ವಶಪಡಿಸಿಕೊಂಡಿದ್ದಾರೆ.  

ಆರೋಪಿತರಾದ ಆಲಮೇಲ ಗ್ರಾಮದ ರಾಜಾ ತಂದೆ ನರದ್ದಿನಸಾಬ ಸೌದಾಗಾರ, ಮುದಕಪ್ಪ ತಂದೆ ಅಂಬಣ್ಣ ಕಟ್ಟಿಮನಿ,  ಪೂನಾ ಸಾ.ಲೋಣಿ ಕಾಳಬೂರ ಪ್ರದೀಪ ತಂ.ಸೂರ್ಯಕಾಂತ ಕಾಳಬುರ, ಸಿಂಹಗಡದ ರಾಹುಲ ತಂದೆ ಮೋಹನ ಬಾಗುಲ, ಸಾಂಗ್ಲಿ ಜಿಲ್ಲೆಯ ಕವಲಾಪೂರ ಗ್ರಾಮದ ಅರ್ಜುಣಗಿ ಕೆ.ಡಿ. ಗ್ರಾಮದ ಬಜರಂಗಿ ತಂದೆ ರಾಮರಾವ ಪಾಟೀಲ ಆರೋಪಿತರನ್ನು  ಮೋರಟಗಿ ಬೈ ಪಾಸ್ ಹತ್ತಿರ ವಶಕ್ಕೆ ಪಡೆದುಕೊಂಡು ಆರೋಪಿತರಿಂದ ಆಟೋ, 30,000 ಮೌಲ್ಯದ ಎರಡು ಕಂಟ್ರಿ ಪಿಸ್ತೂಲ್, ರೂ. 16,000 ಎಂಟು ಜೀವಂತ ಗುಂಡುಗಳು,  ಕಬ್ಬಿಣದ ಮಚ್ಚುಗಳು ಎರಡು, ರೂ. 60,000 ಮೌಲ್ಯದ ಮೊಟಾರ ಸೈಕಲಗಳು ಎರಡು ವಶ ಪಡಿಸಿಕೊಂಡು  ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ  ಕಳಿಸಲಾಗಿದೆ ಎಂದು ಪೊಲೀಸ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group