spot_img
spot_img

ನಾನೂ ಅರಭಾವಿ ಮತಕ್ಷೇತ್ರದ ಬಿಜೆಪಿ ಆಕಾಂಕ್ಷಿ : ನಿಂಗಪ್ಪ ಫಿರೋಜಿ

Must Read

- Advertisement -

ಮೂಡಲಗಿ: ಸದ್ಯದ ಚುನಾವಣೆಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಸ್ಥಳಿಯರಿಗೂ ಅವಕಾಶ ನೀಡಬೇಕು ಹೀಗಾಗಿ ನಾನೂ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ನನಗೂ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಬಿಜೆಪಿ ಮುಖಂಡ ನಿಂಗಪ್ಪ ಫಿರೋಜಿ ಹೇಳಿದರು.

ಬೆಳಗಾವಿಯಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, 20 ವರ್ಷಗಳಿಂದ ಬಿಜೆಪಿಯಲ್ಲಿ  ಅರಭಾವಿ ಬ್ಲಾಕ್ ಅಧ್ಯಕ್ಷನಾಗಿ ಮತ್ತು ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಅರಭಾವಿಯಲ್ಲಿ ಆರ್.ಎಮ್.ಪಾಟೀಲ ಅವರನ್ನು ಬಿಟ್ಟು ಎಲ್ಲ ಹೊರಗಿನವರೆ ಶಾಸಕರು ಆಗಿದ್ದಾರೆ.

ಅರಭಾವಿಯಲ್ಲಿ ಈ ಸಲ ಸ್ಥಳೀಯರಿಗೆ ಅವಕಾಶ ಕೊಡಿ ಎಂದು ರಾಜ್ಯ ಮತ್ತು ರಾಷ್ಟ್ರ ನಾಯಕರನ್ನು ಕೇಳುತ್ತೇನೆ.

- Advertisement -

ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ದೊಡ್ಡ ದೊಡ್ಡ ಜವಾಬ್ದಾರಿ/ ಹುದ್ದೆ ನೀಡಿದ ಉದಾಹರಣೆ ಇದೆ.ಎಲ್ಲ ಸಮಾಜದವರ ಸಹಕಾರ ನನಗಿದೆ. ಈ ಸಲ 2023 ರ ಅರಭಾವಿ ಮತಕ್ಷೇತ್ರದ ಪ್ರಬಲ ಆಕಾಂಕ್ಷಿ ಅಭ್ಯರ್ಥಿ ನಾನಾಗಲು ಬಯಸಿದ್ದೇನೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದ್ದಾಗಿಯೂ ಫಿರೋಜಿ ಹೇಳಿದರು.

- Advertisement -
- Advertisement -

Latest News

ಸಿಂದಗಿ ಮಂಡಲ ವತಿಯಿಂದ ರಸ್ತಾರೋಖೋ ಪ್ರತಿಭಟನೆ

ಸಿಂದಗಿ - ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿದ್ದು, ರಾಜ್ಯದಲ್ಲಿನ ಕಾನೂನ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಹಾಗೂ ವಾಲ್ಮೀಕಿ ನಿಗಮದ ಹಗರಣದ...
- Advertisement -

More Articles Like This

- Advertisement -
close
error: Content is protected !!
Join WhatsApp Group