- Advertisement -
ಬೆಂಗಳೂರು – ಕಿಡ್ ನ್ಯಾಪ್ ಪ್ರಕರಣವೊಂದರ ಆರೋಪಿ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರನ್ನು ಮುಂದಿನ ಏಳು ದಿನಗಳ ಕಾಲ ಅಂದರೆ ಮೇ ೧೪ ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರು ಮಹಿಳೆಯೊಬ್ಬರನ್ನು ಅಪಹರಿಸಿ ಇಟ್ಟುಕೊಂಡಿದ್ದಾರೆಂದು ಆರೋಪಿಸಿ ದೂರು ಬಂದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ ( SIT) ರೇವಣ್ಣ ಅವರನ್ನು ವಶಕ್ಕೆ ಪಡೆದಿತ್ತು.
ವಿಚಾರಣೆಯ ಸಂದರ್ಭದಲ್ಲಿ ರೇವಣ್ಣ ಅವರು ಸೂಕ್ತ ಮಾಹಿತಿ ಕೊಡದೇ ಸತಾಯಿಸಿದ್ದರಿಂದ ಇಂದು ಅವರಿಗೆ ಜಾಮೀನು ಕೊಡಬಾರದು ಎಂದು ಸಿಟ್ ವಾದಿಸಿತ್ತು. ಅದೇ ರೀತಿ ಕೋರ್ಟ್ ವಿಚಾರಣೆ ನಡೆಸಿ ಮುಂದಿನ ಏಳು ದಿನಗಳ ಕಾಲ ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಕೋರ್ಟ್ ಆದೇಶ ಬರುತ್ತಿದ್ದಂತೆಯೇ ರೇವಣ್ಣ ಕಣ್ಣೀರು ಹಾಕಿದರು. ಅವರನ್ನು ಪರಪ್ಪನ ಅಗ್ರಹಾರದ ಜೈಲಿಗೆ ಕರೆದೊಯ್ಯಲಾಯಿತು.
- Advertisement -