ಹುನಗುಂದ – ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಹುನಗುಂದ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಲೆ ಇರುವುದರಿಂದ ಅಭ್ಯರ್ಥಿ ಪಿ ಸಿ ಗದ್ದಿಗೌಡರ ಅವರ ಗೆಲುವು ನಿಶ್ಚಿತವಾಗಿದೆ ಎಂದು ಹುನಗುಂದ ಕ್ಷೇತ್ರದ ಬಿಜೆಪಿ ಪ್ರಭಾರಿ ಮನೋಹರ ಶಿರೋಳ ಹೇಳಿದರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಗೃಹದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ ಐದನೇ ಬಾರಿಗೆ ಪಿ ಸಿ ಗದ್ದಿಗೌಡರ ಅವರನ್ನು ಮತದಾರರು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಬಾಗಲಕೋಟ ಜಿಲ್ಲಾ ನೇಕಾರ ಒಕ್ಕೂಟದ ಅಧ್ಯಕ್ಷ ಡಾ.ಎಮ್ ಎಸ್ ದಡ್ಡಿನವರ ಮಾತನಾಡಿ, ನೇಕಾರ ಸಮುದಾಯಕ್ಕೆ ಬಿಜೆಪಿ ಸರ್ಕಾರ ವಿಶೇಷ ಯೋಜನೆಗಳನ್ನು ಹಾಕಿಕೊಂಡಿದೆ ಅವು ಸಾಕಾರವಾಗಬೇಕಾದರೆ ಈ ಸಲ ಗದ್ದಿಗೌಡರ ಅವರನ್ನು ಚುನಾಯಿಸಬೇಕು ಎಂದು ಕರೆಕೊಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಹಂಡಿ, ಪಿ ಜೆ ಮೂಲಿಮನಿ, ಜಿ ಎಸ್ ಗೊಂಬಿ, ಅಶೋಕ ಶ್ಯಾವಿ, ಸುದರ್ಶನ ಸುಣಧೋಳಿ ಹಾಗೂ ಇಳಕಲ್ಲ ಪುರಸಭೆಯ ಮಾಜಿ ಅಧ್ಯಕ್ಷ ಲಕ್ಷ್ಮಣ ಗುರವ್ ಹಾಗೂ ಕಪಿಲ ಪವಾರ ಇದ್ದರು