spot_img
spot_img

ಕಾಂಗ್ರೆಸ್ ಯುವರಾಜನಿಗೆ ಅಂಬಾನಿ-ಅದಾನಿಯಿಂದ ಎಷ್ಟು ಮಾಲು ಸಿಕ್ಕಿದೆ – ಮೋದಿ ಪ್ರಶ್ನೆ

Must Read

- Advertisement -

ಹೈದರಾಬಾದ್ – ಕಳೆದ ಐದು ವರ್ಷಗಳಿಂದ ಅಂಬಾನಿ-ಅದಾನಿ ಮಂತ್ರವನ್ನೇ ಜಪಿಸುತ್ತಿದ್ದ ಕಾಂಗ್ರೆಸ್ ಯುವರಾಜ ಈಗ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಯಾಕೆ ಸುಮ್ಮನಿದ್ದಾರೆ, ಇವರಿಗೆ ಎಷ್ಟು ಮಾಲು ತಲುಪಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಶ್ನೆ ಮಾಡಿದರು.

ತೆಲಂಗಾಣದಲ್ಲಿ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಕುರಿತಂತೆ ರಾಫೆಲ್ ಆರೋಪ ಯಾವಾಗ ಫೇಲ್ ಆಯಿತೋ ಆವಾಗಿನಿಂದ ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಅದಾನಿ- ಅಂಬಾನಿ ಬಿಜೆಪಿ ಸರ್ಕಾರಕ್ಕೆ ಅಷ್ಟು ಕೊಟ್ಟಿದ್ದಾರೆ, ಇಷ್ಟು ಕೊಟ್ಟಿದ್ದಾರೆ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್ ನ ಯುವರಾಜ ( ರಾಹುಲ್ ಗಾಂಧಿ) ಲೋಕಸಭಾ ಚುನಾವಣಾ ಘೋಷಣೆಯಾಗುತ್ತಿದ್ದಂತೆಯೇ ಬಾಯಿ ಮುಚ್ಚಿಕೊಂಡಿದ್ದಾರೆ ಇದರ ರಹಸ್ಯವೇನು ? ಇವರಿಗೆ ಹಣದ ಟೆಂಪೋ ಬಂದು ತಲುಪಿತೆ ಎಂದು ಕೇಳಿದರು.

ವಿಚಿತ್ರವೆಂದರೆ, ಮೊದಲು ಮೋದಿ ಸರ್ಕಾರವನ್ನು ಕೇವಲ ೨೫ ಬಂಡವಾಳಶಾಹಿಗಳು ಚಲಾಯಿಸುತ್ತಿದ್ದಾರೆ, ಅದಾನಿ-ಅಂಬಾನಿಗಳಿಂದ ಬಿಜೆಪಿಗೆ ಹಣ ಬರುತ್ತಿದೆ ಎನ್ನುತ್ತಿದ್ದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಈ ಚುನಾವಣೆಯಲ್ಲಿ ಈ ಬಗ್ಗೆ ಮಾತನಾಡಿಲ್ಲ. ಇದನ್ನೆ ಮೋದಿಯವರು ಮಾತನಾಡಿದ್ದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಇದಲ್ಲದೆ ಕಾಂಗ್ರೆಸ್ ಪಕ್ಷದ ಖಾತೆಗಳನ್ನು ಬಂದ್ ಮಾಡಿದ ಮೇಲೆ ತಮ್ಮ ರೇಲ್ವೆ ಟಿಕೆಟ್ ಖರೀದಿಸಲು ಹಣವೇ ಇಲ್ಲ ಎನ್ನುತ್ತಿದ್ದ ಕಾಂಗ್ರೆಸ್ ಮುಖಂಡರು ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆಗೆ ಅಶೋಕ ಗೆಹಲೋತ್ ಮತ್ತು ಕೆ ಸಿ ವೇಣುಗೋಪಾಲ್ ಅವರ ಜೊತೆ ಖಾಸಗಿ ವಿಮಾನದಲ್ಲಿ ಬಂದರು, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಬರ್ಟ್ ವಾದ್ರಾ ಎರಡನೆಯ ಖಾಸಗಿ ವಿಮಾನದಲ್ಲಿ ಬಂದರು ! ಮೂರನೇ ವಿಮಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಬಂದರು. ರೇಲ್ವೆ ಟಿಕೆಟ್ ಖರೀದಿಸಲಾಗದ ಕಾಂಗ್ರೆಸ್ ನಾಯಕರು ವಿಮಾನದಲ್ಲಿ ಅಡ್ಡಾಡಲು ಸಾಕಷ್ಟು ಹಣ ಹೊಂದಿದ್ದಾರೆ. ಜನರನ್ನು ಮೂರ್ಖರನ್ನಾಗಿಸಲು ಇವರು ಹೊರಟಿದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ವ್ಯಂಗ್ಯವಾಗಿ ನುಡಿಯುತ್ತಿದ್ದರು.

- Advertisement -

ಆದರೆ ಅಮೇಠಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿಲಾಲ್ ಶರ್ಮಾ ನಾಮಪತ್ರ ಸಲ್ಲಿಸುವಾಗ ಇವರು ಯಾರೂ ಅವರ ಜೊತೆಯಲ್ಲಿ ಇರಲಿಲ್ಲ !

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವಿ ಸಿದ್ಧಲಿಂಗಯ್ಯಾ ಹಿರೇಮಠ ಅವರಿಗೆ ಸನ್ಮಾನ

ಗೋಕಾಕ - ಬಸವ ಸಮಿತಿ 2024 ನೇ ಸಾಲಿನ ವಿಶ್ವಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಕವನ ಸ್ಪರ್ದೆಯಲ್ಲಿ ಭಾಗವಹಿಸಿದ ಬೆಳಗಾವಿ ಜಿಲ್ಲೆಯ ಗೋಕಾಕ...
- Advertisement -

More Articles Like This

- Advertisement -
close
error: Content is protected !!
Join WhatsApp Group