- Advertisement -
ಮೇಲುಕೋಟೆಯ ಶ್ರೀ ಚೆಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ಅಂಗಮಣಿ ಉತ್ಸವ (ತವರಿನ ಉತ್ಸವ) ಇತ್ತೀಚೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜಾತ್ರೆಯು ನೆರವೇರಿತು.
ಮೊದಲನೇ ಸ್ಥಾನಿಕರು ಹಾಗೂ ಮೂರನೇ ಸ್ಥಾನಿಕ ತಿರುನಾರಾಯಣೈಂಗಾರ್ ಮನೆಯಲ್ಲಿ ಎಲ್ಲ ವಿಧವಾದ ಪೂಜಾ ವಿಧಿ ವಿಧಾನಗಳು ಸಂಪ್ರದಾಯದಂತೆ ನೆರವೇರಿದವು.
ಈ ಸಂದರ್ಭದಲ್ಲಿ ಕರಗಂ ರಾಮಪ್ರಿಯ, ಕರಗಂ ರಂಗಪ್ರಿಯ ಹಾಗೂ ಮೈಸೂರು ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಮುಖ್ಯಸ್ಥ ಕೆ.ಆರ್.ಯೋಗಾನರಸಿಂಹನ್ ಉಪಸ್ಥಿತರಿದ್ದರು.