Homeಸುದ್ದಿಗಳುಸಿಂದಗಿ ; ಚುನಾವಣಾ ಸ್ವೀಪ್ ಸಮಿತಿ ಸಭೆ

ಸಿಂದಗಿ ; ಚುನಾವಣಾ ಸ್ವೀಪ್ ಸಮಿತಿ ಸಭೆ

ಸಿಂದಗಿ; ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪಿ ಎಸ್ ವಸ್ತ್ರದ ರಾಜ್ಯ ನೋಡಲ್ ಅಧಿಕಾರಿಗಳು ಚುನಾವಣೆ ಸ್ವೀಪ್ ಸಮಿತಿ ಇವರ ಅದ್ಯಕ್ಷತೆಯಲ್ಲಿ ಚುನಾವಣೆ ಪ್ರಕ್ರಿಯೆ ವಿಷಯವಾಗಿ  ಸಭೆ ನಡೆಸಿದರು.

ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ ಮಾತನಾಡಿ, ಸಿಂದಗಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನೂತನ ಮತದಾರ ಪಟ್ಟಿಯಲ್ಲಿ  ೧೮ ವರ್ಷ ತುಂಬಿದ ಯುವಕರು ಮತ್ತು ಯುವತಿಯರಿಗೆ ಹಲವಾರು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಅವುಗಳಲ್ಲಿ ಕಾಲೇಜು ಗಳಿಗೆ ಭೇಟಿ ನೀಡಿ ಅರಿವು ಕಾರ್ಯಕ್ರಮ, ಕ್ಯಾಂಡಲ್ ಮಾರ್ಚ್, ಪ್ರಮುಖ ರಸ್ತೆಗಳಲ್ಲಿ  ಶಾಲಾ ಮಕ್ಕಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಸ್ವೀಪ್ ಸಮಿತಿ ರಾಜ್ಯ ನೋಡಲ್ ಅಧಿಕಾರಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ ಮತದಾನ ನೋಂದಣಿ ಪ್ರಕ್ರಿಯೆ ಕುರಿತು ವಿವರವಾಗಿ ತಿಳಿಸಿದರು. ಅಂದರೆ ಮತದಾನ ಹಕ್ಕು ಪಡೆಯಲು ಅರ್ಹತೆ ಗಳ ಕುರಿತು ಚರ್ಚಿಸಿದರು ಮೊದಲನೆಯದಾಗಿ ಭಾರತೀಯ ಪ್ರಜೆಯಾಗಿರಬೇಕು, ೧೮ ವರ್ಷ ತುಂಬಿರಬೇಕು ಎಂದು ತಿಳಿಸಿದರು ಹಾಗೂ ಮತದಾನದ ಹಕ್ಕು ಸಮಾನವಾಗಿ ಎಲ್ಲರಿಗೂ ನೀಡಲಾಗಿದೆ, ವಿವಿಧತೆಯಲ್ಲಿ ಏಕತೆ, ಯಾವುದೇ ಭಾಷೆ, ಧರ್ಮ ಹೆಣ್ಣು ಗಂಡು ಎನ್ನದೆ ಸಮಾನವಾದ ಹಕ್ಕನ್ನು ಮತದಾನ ಚಲಾಯಿಸಲು ಹಕ್ಕು ಹೊಂದಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಆಲಮೇಲ ಕಾರ್ಯನಿರ್ವಾಹಕ ಅಧಿಕಾರಿ ಪರಿದ ಪಠಾಣ, ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳಾದ ಸಿಡಿಪಿಒ ಶಂಭುಲಿಂಗ ಹಿರೇಮಠ, ಸಮಾಜ ಕಲ್ಯಾಣ ಅಧಿಕಾರಿ ಭವಾನಿ ಪಾಟೀಲ್, ಶಿರಸ್ತೇದಾರ ಸುರೇಶ ಮ್ಯಾಗೇರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಬಿಎಲ್‌ಓ ರವರು ಮತ್ತು ಸಿಬ್ಬಂದಿಗಳು ಹಾಜರಿದ್ದರು

RELATED ARTICLES

Most Popular

error: Content is protected !!
Join WhatsApp Group