spot_img
spot_img

ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡಿಸಿದ ಹದಿನೈದು ಮೇಲ್ವಿಚಾರಕರ ಅಮಾನತು

Must Read

- Advertisement -

ಬೀದರ: ಬೇಲಿಯೇ ಎದ್ದು ಹೊಲ ಮೇಯ್ದಂತೆ  ಆಯಿತು.ತಾಯಿ ಮೊದಲನೇ ಗುರು ಆದರೆ ಶಾಲೆಯಲ್ಲಿ ವಿದ್ಯೆ ನೀಡುವ ಶಿಕ್ಷಕ ಗುರುವಿಗೆ ಎರಡನೇ ಸ್ಥಾನ ನೀಡಿದ್ದಾರೆ. ಆದರ ವಿದ್ಯೆ ಕಲಿಸುವ ಗುರುಗಳೇ ತಪ್ಪು ದಾರಿ ತೋರಿಸಿ ಕೊಟ್ಟರೆ ಶಿಷ್ಯರು ಕೂಡ ತಪ್ಪು ದಾರಿ ಹಿಡಿಯುವುದು ಸಹಜ.

ಪರೀಕ್ಷೆಯಲ್ಲಿ ನಕಲು ಮಾಡಬೇಡಿ ಎಂದು ಹೇಳಬೇಕಾದ ಗುರುಗಳೇ ನಕಲು ಮಾಡಲು ಪ್ರೋತ್ಸಾಹಿಸಿದ ಘಟನೆಯೊಂದು ವರದಿಯಾಗಿದ್ದು ಸುಮಾರು ೧೫ ಶಿಕ್ಷಕರನ್ನು ಈ ಸಂಬಂಧ ಅಮಾನತ್ತು ಮಾಡಲಾಗಿದೆ.

ಬೀದರ್ ಜಿಲ್ಲೆ ಭಾಲ್ಕಿ ಪಟ್ಟಣದಲ್ಲಿ ಇರುವ ಖಾಸಗಿ ಸಂಸ್ಥೆ  ಶಿವಾಜಿ ಪ್ರೌಢಶಾಲೆಯ ಮೇಲೆ ಬೀದರ ಜಿಲ್ಲಾ ಅಧಿಕಾರಿ ಹಾಗು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಚನ್ನಬಸವ ಲಂಗೋಟಿ ದಿಢೀರನೆ ದಾಳಿ ಮಾಡಿ ಶಾಲೆ ಎಲ್ಲಾ ಕೊಠಡಿ ಪರಿಶೀಲನೆ ನಡೆಸಿದರು.

- Advertisement -

ಮೇಲ್ನೋಟಕ್ಕೆ ಅಲ್ಲಿ ಕಂಡು ಬಂದಿದ್ದು ಪರೀಕ್ಷಾ ಮೇಲ್ವಿಚಾರಕರೇ ಪರೀಕ್ಷೆ ಬರೆದು ವಿದ್ಯಾರ್ಥಿಗಳಿಗೆ ಕೊಡುತ್ತಿರುವುದನ್ನು ಕಂಡು ಹಿಡಿದು ಹದಿನೈದು ಮೇಲ್ವಿಚಾರಕ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ನೀಡಿದರು.

ಭಾಲ್ಕಿ ಪಟ್ಟಣದ ಶಿವಾಜಿ ಪ್ರೌಢ ಶಾಲೆಯಲ್ಲಿನ ಪರೀಕ್ಷೆ ಕೇಂದ್ರದಲ್ಲಿ ಗುರುವಾರ ನಡೆದ ಪರೀಕ್ಷೆ ವೇಳೆ ಸಾಮೂಹಿಕ ನಕಲು ಕಾರಣ ಅಮಾನತಿಗೊಳಗಾದ 15 ಜನ ಶಿಕ್ಷಕರು.

ಪ್ರಶ್ನೆ ಪತ್ರಿಕೆ ಅಭಿರಕ್ಷಕ ಬಾಲಾಜಿ ಕಾಂಬ್ಳೆ (ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ, ದಾಡಗಿ), ಕೊಠಡಿ ಮೇಲ್ವಿಚಾರಕರಾದ ಶೇಷಪ್ಪ (ಮೇಹಕರ್ ಪ್ರೌಢ ಶಾಲೆ), ಸಂಪತ್ (ಸರ್ಕಾರಿ ಪ್ರೌಢ ಶಾಲೆ ಲಾಧಾ), ಗೋವಿಂದ (ಸರ್ಕಾರಿ ಪ್ರೌಢ ಶಾಲೆ ಲಾಧಾ), ಕುಪೇಂದ್ರ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲವಾಡಿ), ಶಿವಾಜಿ (ಸ.ಹಿ.ಪ್ರಾಥಮಿಕ ಶಾಲೆ ನಾವದಗಿ), ಮಾರುತಿ ರಾಠೋಡ್ (ಸ.ಪ್ರೌ.ಶಾಲೆ ಕಾಕನಾಳ), ಶಿವಕುಮಾರ ಬಿರಾದಾರ್ (ಸ.ಪ್ರೌ.ಶಾ. ಮಾಸಿಮಾಡ), ಭೀಮರಾವ್ (ಸ.ಪ್ರೌ.ಶಾ.ಎ ಸಾಯಗಾಂವ್) ಸೇರಿದಂತೆ ಒಟ್ಟು ವಿವಿಧ ಶಾಲೆಗಳ 15 ಜನ ಶಿಕ್ಷಕರನ್ನು ಅಮಾನತುಗೊಳಿಸಿ ಡಿಡಿಪಿಐ ಸಲೀಂ ಪಾಶಾ ಆದೇಶ ಹೊರಡಿಸಿದ್ದಾರೆ. 

- Advertisement -

ಶಿವಾಜಿ ಪ್ರೌಢ ಶಾಲೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಗೋವಿಂದರಡ್ಡಿ, ಎಸ್ಪಿ ಚನ್ನಬಸವಣ್ಣ ಲಂಗೋಟಿ ಭೇಟಿ ನೀಡಿದ್ದ ವೇಳೆ ಕೊಠಡಿ ಮೇಲ್ವಿಚಾರಕರು ಪರೀಕ್ಷೆ ಪ್ರಶ್ನೆ ಪತ್ರಿಕೆಯ ಉತ್ತರಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವುದನ್ನು ಕಂಡು ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಮೊದಲಿನಿಂದಲೂ ಈ ರೀತಿಯಾಗಿ ನಡೆಯುತ್ತದೆ ಎಂದು ತಿಳಿದುಬಂದಿದೆ. ಹೀಗಾಗಿ ಪರೀಕ್ಷಾ ಕೊಠಡಿಯಲ್ಲಿನ ಎಲ್ಲ ಕರ್ತವ್ಯ ನಿರತ ಅಧಿಕಾರಿಗಳು, ಸಿಬ್ಬಂದಿಯನ್ನು ಅಮಾನತುಗೊಳಿಸಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ

ರಾಜ್ಯ ಸರ್ಕಾರ ಈ ಖಾಸಗಿ ಶಾಲೆ ಮೇಲೆ ಯಾವ ರೀತಿ ಕ್ರಮವನ್ನು ತೆಗೆದು ಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group