ಸಿಂದಗಿ: ದ್ವಿಚಕ್ರ ವಾಹನ, ಆಟೋ ರಿಕ್ಷಾ, ಕಾರು, ಜೀಪುಗಳು ಸೇರಿದಂತೆ ಸರ್ಕಾರಿ ಬಸ್ಸುಗಳ ಮೇಲು ಕೂಡಾ ಹದ್ದಿನ ಕಣ್ಣೀರಬೇಕು ಎಂದು ಚುನಾವಣಾಧಿಕಾರಿ ಸಿದ್ರಾಮ ಮಾರಿಹಾಳ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಮೋರಟಗಿ ಚೆಕ್ ಪೋಸ್ಟಗೆ ಭೇಟಿ ನೀಡಿ ವಾಹನಗಳನ್ನು ಪರಿಶೀಲಿಸಿ ಅವರು ಮಾತನಾಡಿ, ಸ್ಥಳೀಯ ದ್ವಿಚಕ್ರ ವಾಹನ ಅಥವಾ ಕಾರು ಮೋಟಾರುಗಳ ಚಾಲಕರು ಪರಿಚಿತರಂತೆ ವರ್ತಿಸಿ ಪಾರಾಗುತ್ತಾರೆ ಅಂಥವರ ವಾಹನಗಳನ್ನು ಯಾವುದೇ ಮುಲಾಜಿಲ್ಲದೆ ಪರಿಶೀಲಿಸಿ ಎಂದು ಹೇಳಿದ ಅವರು ಸುಮಾರು 6 ಘಂಟೆಗಳ ಕಾಲ ಚೆಕ್ ಪೋಸ್ಟನಲ್ಲೆ ಹಾಜರಿದ್ದು ವಾಹನ ಪರಿಶೀಲಿಸಿದರು. ಪರಿಶೀಲನೆಯಲ್ಲಿ ಒಂದು ವಾಹನದಲ್ಲಿ ಒಬ್ಬ ರೈತನ ಹತ್ತಿರ ಎರಡು ಲಕ್ಷ ನಗದು ಹಣ ಸಿಕ್ಕಿದ್ದು ಅದು ಹತ್ತಿ ಮಾರಾಟ ಮಾಡಿದ ಅಧಿಕೃತ ಪಾವತಿ ಇರುವುದರಿಂದ ಮರಳಿ ಹಣ ನೀಡುವಂತೆ ನಿರ್ದೇಶನ ನೀಡಿದರು.
ವಾಹನ ಪರಿಶೀಲನೆ ಸಂದರ್ಭದಲ್ಲಿ ತಹಶೀಲ್ದಾರ ಸುರೇಶ ಚಾವಲಾರ, ಎಇಇ ರಾಜಪ್ಪ ಎಸ್, ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಚಕ್ರವರ್ತಿ, ಗ್ರಾಮ ಲೆಕ್ಕಾಧಿಕಾರಿ ಮಾರುತಿ ಸಾಳಂಕಿ, ಪೊಲೀಸ್ ಸಿಬ್ಬಂದಿಗಳಾದ ಆರ್.ಐ.ರೊಳ್ಳಿ, ನಿಂಗಣ್ಣ ಪೂಜಾರಿ, ಅನೀಲ್ ಕುಂಬಾರ್, ಗ್ರಾಮ ಸಹಾಯಕ ವಿಶ್ವಾನಾಥ ವಾಲಿಕಾರ ಇದ್ದರು.