- Advertisement -
ಸಾಯುವದಿಲ್ಲ
ಭಾವನೆಗಳು
ಸಾಯುವದಿಲ್ಲ
ಕಾರಣ ಹೃದಯ
ನೆನಪುಗಳ ಎರಕದಲ್ಲಿ
ಕನಸುಗಳಿಗೆ
ಜೀವ ನೀಡುತ್ತವೆ
ಕಥೆ ಕಾವ್ಯಕವನ
ಶಬ್ದಗಳ ಜಾತ್ರೆ
ಪ್ರೀತಿ ಇದ್ದಲ್ಲಿ
ಹೃದಯ ಸೋಲುತ್ತಲೆ
ಇರುತ್ತದೆ.
ಸೋತ ನೋವಿಲ್ಲ
ಗೆದ್ದವರ ಮೊಗದಲ್ಲಿನ
ಮುಗುಳು ನಗೆಯ
ನಿರೀಕ್ಷೆಯ ಸಂತಸ
ಸಂಭ್ರಮ ನಿತ್ಯವೆನಗೆ
ಹುಡುಕಿ ಕೊಳ್ಳುವ
_________________
- Advertisement -
ಒಲುಮೆಗಾಗಿ
ನಾವಿಬ್ಬರೂ ಹೀಗೆ
ಸೋಲುತ್ತಲೆ
ಗೆಲುವು ಕಾಣೋಣ
ನೀನು ನಾನು
ಹುಡುಕಿ ಕೊಳ್ಳುವ
ಕಳೆದು ಹೋದ
ಸ್ನೇಹ ಪ್ರೀತಿಯ
ಒಮ್ಮೆ ಸುಖ
ಒಮ್ಮೆ ದುಃಖ
ಸಮರಸ ಭಾವ
ನಮ್ಮ ಜೀವನ
- Advertisement -
ಸಿಹಿ ಕಹಿ
ಒಗರು ಹುಳಿ
ಬಾನ ನಡುವಿನ
ನಗೆ ಚಂದ್ರಮ
ಕಪ್ಪು ನೆಲದಿ
ಬಯಕೆ ಬೀಜ
ಹೊಸ ಫಸಲಿನ
ಗೊನೆ ತೆನೆ
ಬಾಳ ಬೇಕು
ನೂರು ವರುಷ
ಚೆಲುವು ಗೆಲುವಿನ
ಹೃದಯ ಹರುಷ
_____________________
ಡಾ. ಶಶಿಕಾಂತ ಪಟ್ಟಣ ರಾಮದುರ್ಗ