spot_img
spot_img

ಗೋಕಾಕ ಶ್ರೀ ರೇಣುಕಾ ದೇವಿ ಜಾತ್ರಾ ಮಹೋತ್ಸವ

Must Read

- Advertisement -

ಗೋಕಾಕ: ನಗರದ ಉಪ್ಪಾರ ಓಣಿಯ ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವವು ದಿ. 10 ರಿಂದ 12ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ.

ದಿ. 10 ರಂದು ಸಾಯಂಕಾಲ 4 ಗಂಟೆಗೆ ಸುತ್ತಮುತ್ತಲಿನ ದೇವರ ಪಲ್ಲಕ್ಕಿಗಳನ್ನು ಮಂಗಳವಾದ್ಯ ಮೇಳದೊಂದಿಗೆ ಬರಮಾಡಿಕೊಳ್ಳುವುದು. ರಾತ್ರಿ 9 ಗಂಟೆಗೆ ಶ್ರೀ ಕರಣಿ ಮಲಕಾರಿಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಗೋಕಾಕ ಇವರಿಂದ ಅಮೋಘಸಿದ್ದೇಶ್ವರ ಮಾರ್ಗದಲ್ಲಿ, ಶ್ರೀ ಬೀರಲಿಂಗೇಶ್ವರ ಗಾಯನ ಸಂಘ ಬರಗಿ ಇವರಿಂದ ಶ್ರೀ ಮಾಳಿಂಗೇಶ್ವರ ಮಾರ್ಗದಲ್ಲಿ ಡೊಳ್ಳಿನ ಪದಗಳು ಜರುಗುವವು.

ದಿ. 11 ರಂದು ಬೆಳಿಗ್ಗೆ ಶ್ರೀದೇವಿಗೆ ಅಭಿಷೇಕ, ನಂತರ ಸಕಲ ವಾದ್ಯಮೇಳದೊಂದಿಗೆ ಮುತ್ತೈದೆಯರ ಆರತಿ, ಅಂಬಲಿ-ಕೊಡಗಳೊಂದಿಗೆ ಶ್ರೀದೇವಿ ಪಲ್ಲಕ್ಕಿಯ ಮೆರವಣಿಯು ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ಶ್ರೀದೇವಿ ದೇವಸ್ಥಾನ ತಲುಪುವುದು.

- Advertisement -

ಮಧ್ಯಾಹ್ನ 12 ಗಂಟೆಗೆ ಶ್ರೀದೇವಿಗೆ ಉಡಿ ತುಂಬುವ ಕಾರ್ಯಕ್ರಮ. ನಂತರ ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ಜರುಗಲಿದೆ.

ಸಾಯಂಕಾಲ 6 ಗಂಟೆಗೆ ಚಿಕ್ಕ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ 8 ಗಂಟೆಗೆ ಶ್ರೀಫಲಗಳ ಲಿಲಾವು, 9 ಗಂಟೆಗೆ ಪ್ರತೀಕ್ಷಾ ಮೆಲೋಡಿಸ್ ಇವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ.

ದಿ. 12 ರಂದು ಮುಂಜಾನೆ 9 ಗಂಟೆಗೆ ದೇವರ ಪಲ್ಲಕ್ಕಿಗಳನ್ನು ತಮ್ಮ-ತಮ್ಮ ದೇವಸ್ಥಾನಗಳಿಗೆ ಮರಳಿ ಕಳಿಸುವ ಮೂಲಕ ಸಂಪನ್ನಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳಬೇಕೆಂದು ಜಾತ್ರಾ ಕಮೀಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group