ಅಮಿತ ಶಾ ಗಾಗಿ ಕಾಯುತ್ತಿರುವ ಬೆಳ್ಳಿ ಗದೆ ಹಾಗೂ ಕಿರೀಟ

Must Read

ಬೀದರ -ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣ ನಲ್ಲಿ ನಾಳೆ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಲು ಕಲ್ಯಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಸ ಕೈಗೊಂಡಿದ್ದು ಚುನಾವಣಾ ಚಾಣಕ್ಯನಿಗೆ ನೀಡಲು ವಿಶೇಷವಾದ ಬೆಳ್ಳಿಯ ಗದೆ ಹಾಗೂ ಕಿರೀಟ ಸಿದ್ದವಾಗಿದೆ.

5 ಕೆಜಿಯ ಆಕರ್ಷಕ ಬೆಳ್ಳಿಯ ಗದೆ ಮತ್ತು ಬೆಳ್ಳಿಯ ಕಿರೀಟವನ್ನು ಶಾಗೆ ನೀಡಲು ಬಸವಕಲ್ಯಾಣ ಶಾಸಕ ಶರಣು ಸಲಗರ್‌ ರೆಡಿ ಮಾಡಿಸಿದ್ದಾರೆ.

ನಾಳೆ ವಿಜಯ ಸಂಕಲ್ಪ ‌ರಥಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಅಮಿತ್ ಶಾಗೆ ಶಾಸಕ ಶರಣು ಸಲಗರ್ ಈ ವಿಶೇಷ ನೆನಪಿನ ಕಾಣಿಕೆಯಾದ ಬೆಳ್ಳಿ ಕಿರೀಟ ತೊಡಿಸಿ ಬೆಳ್ಳಿ ಗದೆ ನೀಡಲಿದ್ದಾರೆ.

ನಾಳೆ ಬಸವಕಲ್ಯಾಣದಿಂದ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಲಿರುವ ಅಮಿತ್ ಶಾ ಕಲ್ಯಾಣದಿಂದ ಲಿಂಗಾಯತ ಜಪ ಮಾಡಲಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group