spot_img
spot_img

ಹೆತ್ತತಾಯಿಯ ಎದುರೇ ಮಗನನ್ನು ಕೊಂದು ಹಾಕಿದ ಪಾಪಿಗಳು

Must Read

spot_img

ಬೀದರ: ತನ್ನ ಹೆತ್ತ ಮಗನನ್ನು ಕೊಲ್ಲಬೇಡಿರೆಂದು ಎಷ್ಟು ಗೋಗರೆದರೂ ಕೇಳದ ಪಾಪಿಗಳು ಆಕೆಯ ಮುಂದೆಯೇ ಬೆಳೆದು ನಿಂತ ಮಗನನ್ನು ಭೀಕರವಾಗಿ ಕೊಲೆ ಮಾಡಿಹೋದ ಕರುಣಾಜನಕ ಘಟನೆ ಬಸವಕಲ್ಯಾಣದಲ್ಲಿ ನಡೆದಿದೆ.

ಜನಜಂಗುಳಿ ಮಧ್ಯೆ ಇದ್ದರೂ ತಾಯಿ ಕಣ್ಣೀರ ಹಾಕುತ್ತ ನನಗೆ ಮಗನಿಗೆ ಹೊಡಿಬೇಡಿರಪ್ಪೋ ಎಂದು ಗೋಗರೆಯುತ್ತಾಳೆ. ನನ್ನ ಕಂದ ನನ್ನ ಕಂದ ಎಂದು ಹಲುಬುತ್ತಾಳೆ,  ಕಣ್ಣೀರ ಹಾಕುತ್ತಾಳೆ ಆದರೆ ಪಾಪಿಗಳು ನಿರ್ಧಾರ ಮಾಡಿಕೊಂಡೇ ಬಂದಿದ್ದು ಹೆತ್ತತಾಯಿ ಗೆ ಏನು ಗೊತ್ತು ತಾಯಿ ಮುಂದೆಯೇ ವಯಸ್ಸಿಗೆ ಬಂದ ಮಗನ ಉಸಿರು ನಿಲ್ಲಿಸಿ ಹೋದರು ಪಾಪಿಗಳು.

ತಾಯ ಆಕ್ರಂದನ ಮುಗಿಲು ಮುಟ್ಟಿತ್ತು ಬೀದರ್ ಜಿಲ್ಲೆಯ ಬಸವಕಲ್ಯಾಣ ತ್ರಿಪುರಾಂತ ಬಳಿ ಈ ಭೀಕರ ಹಾಗೂ ಕರುಣಾಜನಕ ಘಟನೆ ನಡೆದಿದೆ.

ಘಟನೆಯ ಹಿನ್ನೆಲೆ….

ಆನಂದ್ ಪುಲೆ ಮತ್ತು ಉದಯ ಕುಚ್ ಕು ಕುಚ್ ಕು ಗೆಳೆಯರು… ಆತ್ಮೀಯ ಸ್ನೇಹಿತರು.ಒಂದು ವರ್ಷದ ಹಿಂದೆ ಇಬ್ಬರ ನಡುವಿನ ಕ್ಷುಲ್ಲಕ ಜಗಳಕ್ಕಾಗಿ ಪೊಲೀಸ ಠಾಣೆ ಮೆಟ್ಟಿಲು ಹತ್ತಿದ್ದರು.ಇಬ್ಬರು ನಡುವೆ ರಾಜಿ ಸಂಧಾನ ನಡೆಯಿತು.. ಆದರೆ ವೈಮನಸ್ಸು ಮುಂದುವರೆದಿತ್ತು ಎಂದು ಹೇಳಬಹುದು..

ಮಕ್ಕಳ ಜಗಳ ನೋಡಿ ಹೆತ್ತತಾಯಿ ಜಗಳ ಬಿಡಿಸಲು ಎಷ್ಟು ಪ್ರಯತ್ನ ಮಾಡಿದರೂ ಆ ಜಗಳ ಕೊಲೆ ಯಲ್ಲಿ ಅಂತ್ಯ ಆಯಿತು..

ತಾಯಿ ಬಿಡಿಸಲು ಹೋದರೂ ತಾಯಿ ಮೇಲೆ ಹಲ್ಲೆ ಮಾಡಿದ ಪಾಪಿಗಳು..

ಹಳೆ ದ್ವೇಷದ ಹಿನ್ನೆಲೆ ತ್ರಿಪುರಾಂತ ನಿವಾಸಿ 26 ವರ್ಷದ ಆನಂದ ಫುಲೆ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಆನಂದ ಪುಲೆಯನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸೊಲ್ಲಾಪುರದ ಉಮ್ಮರಗಾ ಆಸ್ಪತ್ರೆಗೆ ರವಾನೆ ಮಾಡಲು ಮುಂದಾಗಲಾಗಿತ್ತು. ಆದರೆ ಮಾರ್ಗ ಮಧ್ಯೆ ಆನಂದ ಪುಲೆ ಸಾವಿಗೀಡಾಗಿದ್ದಾರೆ.

ಬಸವಕಲ್ಯಾಣ ನಗರ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಗಳನ್ನು ಬಂಧಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸೈನಿಕರಂತೆ ಸದಾ ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಸ್ತುತ್ಯರ್ಹ- ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು. ರವಿವಾರದಂದು ತಾಲೂಕಿನ ಕುಲಗೋಡ...
- Advertisement -

More Articles Like This

- Advertisement -
close
error: Content is protected !!