spot_img
spot_img

ಪಂಚಮಸಾಲಿಗಳ ರಸ್ತಾ ಬಂದ್ ಹೋರಾಟಕ್ಕೆ ಉಪ್ಪಾರ ಸಮಾಜದ ಬೆಂಬಲ

Must Read

spot_img
- Advertisement -

ಮೂಡಲಗಿ: ಪಂಚಮಸಾಲಿಗಳ 50ನೇ ದಿನದ ಸತ್ಯಾಗ್ರಹ, ಸರ್ಕಾರಕ್ಕೆ ನಮ್ಮ ಆಕ್ರೋಶ, ರಾಷ್ಟ್ರೀಯ ರಾಜ್ಯ ಹೆದ್ದಾರಿ, ಗ್ರಾಮ ರಸ್ತೆ ಬಂದ್ ಮಾಡಿ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಪಂಚಮಸಾಲಿಗಳಿಗೆ ಕರೆ ನೀಡಿದ ಹಿನ್ನೆಲೆ ರಸ್ತೆ ಬಂದ್ ಹೋರಾಟಕ್ಕೆ ಮೂಡಲಗಿ ತಾಲೂಕಾ ಉಪ್ಪಾರ ಸಮಾಜದವರು ಕೂಡಾ ಬೆಂಬಲ ನೀಡುತ್ತೇವೆ ಎಂದು ಮೂಡಲಗಿ  ಮಹರ್ಷಿ ಶ್ರೀ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಶಿವಬಸು ಹಂದಿಗುಂದ ಹೇಳಿದರು.

ಶುಕ್ರವಾರದಂದು ಪಟ್ಟಣದ ಪತ್ರಿಕಾ ಕಾರ್ಯಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡುವಂತೆ ಸಾಕಷ್ಟು ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ ಆದರೂ ಸಹ ಸರ್ಕಾರ ಮೀಸಲಾತಿ ನೀಡುವಲ್ಲಿ ವಿಳಂಬ ಮಾಡುತ್ತಿದೆ. ಕಳೆದ 50 ದಿನಗಳಿಂದ ಪಂಚಮಸಾಲಿ ಶ್ರೀಗಳು ಬೆಂಗಳೂರಿನಲ್ಲಿ ಸತ್ಯಾಗ್ರಹ ನಡೆಸುತ್ತಿದರು ಸರಕಾರ ಸ್ಪಂದಿಸದ ಕಾರಣ ಶ್ರೀಗಳು ಕರೆ ನೀಡಿದಂತೆ ಶನಿವಾರ ಮಾ.4 ರಂದು ಮುಂಜಾನೆ 11 ಗಂಟೆಯಿಂದ ಮೂಡಲಗಿ ತಾಲೂಕಾ ಹಾಗೂ ಗ್ರಾಮಮಟ್ಟದಲ್ಲಿ ಮುಖ್ಯ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುತ್ತಿದ್ದು, ಉಪ್ಪಾರ ಸಮಾಜದ ಬಾಂಧವರು ಪಂಚಮಸಾಲಿಗಳ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗುರುನಾಥ ಗಂಗನ್ನವರ, ಸೋಮಯ್ಯ ಹಿರೇಮಠ, ರವಿ ಮಹಾಲಿಂಗಪೂರ, ಶಂಭುಲಿಂಗ ಮುಕ್ಕನ್ನವರ ಉಪಸ್ಥಿತರಿದ್ದರು.

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group