ಜಾತ್ರಾ ಪದ್ಧತಿಯಿಂದ ಬದುಕು ಸುಲಭವಾಗಿದೆ- ಈರಣ್ಣ ಕಡಾಡಿ

Must Read

ಮೂಡಲಗಿ: ಭಾರತ ದೇಶದಲ್ಲಿ ಜಾತ್ರಾ ಪದ್ದತಿ ಎನ್ನುವಂತಹದ್ದು ನಂಬಿಕೆಗಳ ಆಧಾರದ ಮೇಲೆ ನಿಂತಿದೆ. ಹೀಗಾಗಿ ಶ್ರದ್ದೆ, ಭಕ್ತಿ ನಂಬಿಕೆಯನ್ನು ಉಳಿಸಿಕೊಂಡು ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಸುವ್ಯವಸ್ಥೆಯಿಂದ ನಾವು ಬದುಕು ನಡೆಸಲು ಅನುಕೂಲವಾಗುತ್ತದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಶನಿವಾರ ಮಾ-10 ರಂದು ಕುಲಗೋಡ ಗ್ರಾಮದ ಆರಾಧ್ಯ ದೇವತೆ ಶ್ರೀ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮಕ್ಕೆ ಭೇಟಿ ನೀಡಿ, ದೇವಿಗೆ ಉಡಿ ತುಂಬಿ, ಪೂಜೆ ಸಲ್ಲಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಪ್ರತಿ ಐದು ವರ್ಷಕ್ಕೊಮ್ಮೆ ಜರುಗುವ ಜಾತ್ರಾ ಮಹೋತ್ಸವವನ್ನು ಗಾಮಸ್ಥರು ಅತ್ಯಂತ ವೈಭವ, ವಿಜೃಂಭಣೆ, ಭಕ್ತಿಪೂರ್ವಕವಾಗಿ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಈ ರೀತಿ ಜಾತ್ರಾ ಮಹೋತ್ಸವಗಳನ್ನು ಮೊದಲಿನಿಂದ ಸಡಗರ ಮತ್ತು ಸಂಭ್ರಮದಿಂದ ನಡೆಯುತ್ತಿವೆ ಎಂದರು. 

ಈ ಸಂದರ್ಭದಲ್ಲಿ ತಮ್ಮಣ್ಣ ದೇವರ, ಸುಭಾಸ ವಂಟಗೂಡಿ, ಸತೀಶ ವಂಟಗೂಡಿ, ವಾಸು ಬಡಿಗೇರ, ರಮೇಶ ಕೌಜಲಗಿ, ರಮೇಶ ಬಡಕಲ್, ಬಸನಗೌಡ ಪಾಟೀಲ, ಬಸವರಾಜ ಯಕ್ಸಂಬಿ, ಗೋವಿಂದಗೌಡ ಪಾಟೀಲ ಸೇರಿದಂತೆ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group