ಅರಳಿಮಟ್ಟಿ: ಮಾ.26ರಂದು ಕರಿಸಿದ್ಧೇಶ್ವರ ಮತ್ತು ಲಕ್ಷ್ಮೀದೇವಿ ಜಾತ್ರೆ

0
454

ಮೂಡಲಗಿ: ತಾಲೂಕಿನ ಅರಳಮಟ್ಟಿ ಗ್ರಾಮದಲ್ಲಿ ಶ್ರೀ ಕರಿಸಿದ್ದೇಶ್ವರ ಹಾಗೂ ಶ್ರೀ ಲಕ್ಷ್ಮೀ ದೇವಿ ಜಾತ್ರಾಮಹೋತ್ಸವ ಮಾರ್ಚ 26 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಮಾ.26 ಮುಂಜಾನೆ ಶ್ರೀ ಕರಿಸಿದ್ದೇಶ್ವರ ಹಾಗೂ ಶ್ರೀ ಲಕ್ಷ್ಮೀ ದೇವಿಗೆ ವಿಶೇಷ ಅಭಿಷೇಕ, ಪೂಜೆ ಜರುಗುವವು, ೯ಗಂಟೆಗೆ ದೇವಸ್ಥಾನಕ್ಕೆ ಮನ್ನಾಪೂರ ಬೀರಸಿದ್ಧೇಶ್ವರ ಪಲ್ಲಕ್ಕಿ ಆಗಮಿಸಿದ ನಂತರ ಕರಿಸಿದ್ದೇಶ್ವರ ಮತ್ತು ಬೀರಸಿದ್ದೇಶ್ವರ ಪಲ್ಲಕ್ಕಿಗಳು ಘಟಪ್ರಭಾ ನದಿಗೆ ತೆರಳಿ ಗಂಗಾ ಮಾತೆ ಪೂಜೆ ನೇರವೇರಿಸಿ ನಂತರ ದೇವಸ್ಥಾನದ ಆವರಣದಲ್ಲಿ ೧೨ ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ಅನ್ನಪ್ರಸಾದ ಜರುಗುವುದು.

ಅಂದು ರಾತ್ರಿ ೧೦-೩೦ಕ್ಕೆ  ಜಾತ್ರಾಮಹೋತ್ಸವ ನಿಮಿತ್ತ ಅರಳಿಮಟ್ಟಿ ಶ್ರೀ ಕರಿಸಿದ್ದೇಶ್ವರ ನಾಟ್ಯ ಸಂಘದಿಂದ ತಾಯಿಯ ನುಡಿ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. 

ನಾಟಕದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಮಡಿವಾಳಯ್ಯ ಗುಡದಯ್ಯನಮಠ ಮತ್ತು ಈರಯ್ಯಾ ಹಿರೇಮಠ ಶ್ರೀಗಳು ವಹಿಸುವರು, ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸುವರು, ದುಂಡಪ್ಪ ನಂದೆಪ್ಪನವರ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಗಳಾಗಿ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ, ಢವಳೇಶ್ವರ ಗ್ರಾ.ಪಂ ಅಧ್ಯಕ್ಷ ರಂಗಪ್ಪ ಕಳ್ಳಿಗುದ್ದಿ, ರಾಜೇಂದ್ರ ಸಣ್ಣಕ್ಕಿ, ಈರಣ್ಣಾ ಜಾಲಿಬೇರಿ, ಗೋವಿಂದ ಕೊಪ್ಪದ, ಮಹಾದೇವ ನಾಡಗೌಡ, ಗಿರೀಶ ಹಳ್ಳೂರ, ಎಚ್.ವಾಯ್.ತಾಳಿಕೋಟಿ, ಭೀಮಪ್ಪ ಕಂಬಳಿ, ಬಸನಗೌಡ ನಾಡಗೌಡ, ರಂಗಪ್ಪ ಹೊನಕುಪ್ಪಿ, ರೇಣುಕಾ ಸತ್ತಿಗೇರಿ, ಮಹಾದೇವ ನಂದೆಪ್ಪನವರ, ಕಲಾವತಿ ಸಣ್ಣಕ್ಕಿ ಚಂದ್ರವ್ವಾ ಹರಿಜನ ಹಾಗೂ ಗ್ರಾಮದ ಮುಖಂಡರು ಭಾಗವಹಿಸುವರು ಎಂದು ಸಂಘಟರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.