ಅಪಾರ ಜನಸ್ತೋಮ ಮಧ್ಯೆ ಹಗ್ಗವಿಲ್ಲದೆ ಜರುಗಿದ ಶ್ರೀ ಜಡಿಸಿದ್ಧೇಶ್ವರ ರಥೋತ್ಸವ

Must Read

ಮೂಡಲಗಿ: ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಪ್ರತಿ ವರ್ಷ ದವನದ ಹುಣ್ಣಿಮೆ ಮುಗಿದ ನಾಲ್ಕನೇ ದಿನಕ್ಕೆ ಜರುಗುವ  ಪವಾಡ ಪುರುಷ ಶ್ರೀ ಜಡಿಸಿದ್ಧೇಶ್ವರ ಶ್ರೀಗಳ ರಥೋತ್ಸವ ಹಗ್ಗದ ಸಹಾಯವಿಲ್ಲದೆ ಮುನ್ನಡೆಯಿತು.

ಸೋಮವಾರ ಸಂಜೆ ಶ್ರೀ ಮಠದ ಶ್ರೀ ಶಿವಾನಂದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ  ಸಡಗರ ಸಂಭ್ರಮದಿಂದ ಅಪಾರ ಜನಸ್ತೋಮದ ಜಯಘೋಷಣೆಯಲ್ಲಿ ಜರುಗಿತು.

ಜಾತ್ರಾಮಹೋತ್ಸವ ನಿಮಿತ್ತವಾಗಿ ಶ್ರೀ ಮಠದಲ್ಲಿ ಮುಂಜಾನೆ ರುದ್ರಾಭಿಷೇಕ, 10 ಗಂಟೆಗೆ ಸಕಲ ವಾದ್ಯ ಮೇಳದೊಂದಿಗೆ ಗ್ರಾಮಾಂತರ ಕಳಸ ಮೆರವಣಿಗೆ ಜರುಗಿದವು, ಸಂಜೆ ಹೂ ಪುಷ್ಪಗಳಿಂದ ಶೃಂಗರಿಸಾಲಾಗಿದ್ದ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಶ್ರೀ ಶಿವಾನಂದ ಶ್ರೀಗಳೊಂದಿಗೆ ಅಪಾರ ಭಕ್ತ ಸಮೂಹ ಹರ ಹರ ಮಹಾದೇವ ಎಂಬ ಜಯಘೋಷದೊಂದಿಗೆ ಹಗ್ಗವಿಲ್ಲದೆ ಜರುಗುವ ರಥೋತ್ಸವಕ್ಕೆ ಭಕ್ತಾಧಿಗಳು ಬಾಳೆ ಹಣ್ಣು, ಬೆಂಡು-ಬೆತ್ತಾಸು, ಖಾರಿಕು, ತೆಂಗಿನಕಾಯಿ ಸಮರ್ಪಿಸಿ ತಮ್ಮ ಹರಕೆಯನ್ನು ತೀರಿಸಿ ಪುನೀತರಾದರು. 

ರಥೋತ್ಸವದಲ್ಲಿ ಸುಣಧೋಳಿ ಹಾಗೂ ವಿವಿಧ ಗ್ರಾಮಗಳ ದೇವರುಗಳ ಉತ್ಸವ ಮೂರ್ತಿ, ವಾಲಗ ಮತ್ತು ಪಲ್ಲಕ್ಕಿಗಳು ವಿಶೇಷ ಮೆರಗು ನೀಡಿದವು,  ಜಡಿಸಿದ್ಧೇಶ್ವರ ಜಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಗೋವಾ, ಮಹಾರಾಷ್ಟ್ರ, ಆಂದ್ರಪ್ರದೇಶಗಳಿಂದ ಆಗಮಿಸಿದ್ದ ಭಕ್ತಾಧಿಗಳು ಹಗ್ಗವಿಲ್ಲದೆ ಜಗ್ಗುವ ತೇರನ್ನು ಕಂಡು ಪುನೀತರಾದರು.

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group