ಯಶಸ್ವಿಯಾಗಿ ಜರುಗಿದ ಭದ್ರಾವತಿ ತಾಲೂಕು ಹತ್ತನೇ ಸಾಹಿತ್ಯ ಸಮ್ಮೇಳನ

Must Read

ಭದ್ರಾವತಿ – ಭದ್ರಾವತಿ ತಾಲ್ಲೂಕು ಹತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನ ಏಪ್ರಿಲ್ ೧೬ ರಂದು ಭಾನುವಾರ ಶ್ರೀ ರಾಮ ಸಮುದಾಯ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.

ಹೊಸಳ್ಳಿ ದಾಳೇಗೌಡರ ಸರ್ವಾಧ್ಯಕ್ಷತೆಯಲ್ಲಿ ದಿನವಿಡಿ ಸಡಗರ ಸಂಭ್ರಮದಿಂದ ನಡೆಯಿತು. 

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕೋಡ್ಲು ಯಜ್ಞಯ್ಯ, ಕಸಾಸಾಂ ವೇದಿಕೆ ಅಧ್ಯಕ್ಷರಾದ ಸುಧಾಮಣಿ, ಸುಮತಿ ಕಾರಂತ,  ಕಜಾಪ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಮೋಹನ್ ಕುಮಾರ್, ಬಿ. ಎಚ್. ಪ್ರಶಾಂತ ಅನ್ನಪೂರ್ಣ ಸತೀಶ್, ಕಸಾಪ ಕಾರ್ಯದರ್ಶಿಗಳಾದ‌ ಎಚ್. ತಿಮ್ಮಪ್ಪ, ಎಂ. ಇ. ಜಗದೀಶ್, ಕೋಶಾಧ್ಯಕ್ಷರಾದ ಹಿರಿಯೂರು ಪ್ರಸನ್ನ, ನಿಕಟ ಪೂರ್ವ ಅಧ್ಯಕ್ಷರಾದ ಕೋಗಲೂರು ತಿಪ್ಪೇಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾದ ಕಮಲಾಕರ, ನಾಗೋಜಿರಾವ್, ಭದ್ರಾವತಿ ಗುರು, ವೆಂಕಟೇಶ, ಪ್ರಕಾಶ್, ಹಿರಿಯೂರು ಸಿದ್ದೋಜಿರಾವ್, ಮಂಜುನಾಥ, ಬಸವರಾಜ್, ಕೂಡ್ಲಿಗೆರೆ ಅಧ್ಯಕ್ಷರಾದ ಕೆ. ಎಸ್. ರೇವಪ್ಪ, ಹೊಳೆಹೊನ್ನೂರು ಹೋಬಳಿ ಅಧ್ಯಕ್ಷರಾದ ಎಸ್. ಬಿ. ಸಿದ್ದಪ್ಪ, ವೆಂಕಟೇಶ್, ಎಂ. ಉಮರ್ ಕೋಯಾ, ವೈ. ಎನ್. ಶ್ರೀಧರಗೌಡರು, ಜಿ. ಸುರೇಶಯ್ಯ, ಹೇಮಾವತಿ ವಿಶ್ವನಾಥ, ಮಾಯಮ್ಮ, ಆಶಾ ಪುಟ್ಟಸ್ವಾಮಿ, ಗಂಗಾನಾಯ್ಕ, ಶೈಲೇಶ್ ಕೋಠಿ, ಭಾಗ್ಯಮ್ಮ, ಜಂಬುಸ್ವಾಮಿ, ಎಂ. ಅನಿಲ್ ಕುಮಾರ್ ಸೇರಿದಂತೆ ಹಲವಾರು ಮನಸ್ಸುಗಳು ಸಮ್ಮೇಳನ ಯಶಸ್ವಿಯಾಗಲು ಶ್ರಮಿಸಿದ್ದಾರೆ.

ಕಾರ್ಯಕ್ರಮ ನಡೆಯಲು ಸಭಾಂಗಣ ಸೇರಿದಂತೆ ಹಲವು ಸಹಕಾರ ನೀಡಿದ ಮಾನ್ಯ ಪ್ರಭಾಕರ್ ಭೀರಯ್ಯ ಮತ್ತು ಅವರ ಸಮಿತಿಗೆ, ಸಂತೃಪ್ತ ಊಟ, ತಿಂಡಿ ವ್ಯವಸ್ಥೆ ಮಾಡಿದ ಮಾನ್ಯ ಮಹೇಶ್ ಕುಮಾರ್ ಅವರಿಗೆ, ನೆರವಾದ ಎಲ್ಲಾ ಕನ್ನಡ ಮನಸ್ಸುಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದನೆಗಳು ಮತ್ತು ಕೃತಜ್ಞತೆ ಸಲ್ಲಿಸುತ್ತದೆ.


ಡಿ. ಮಂಜುನಾಥ, ಶಿವಮೊಗ್ಗ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group