ಮತ ಜಾಗೃತಿ ಬೈಕ್ ಜಾಥಾ

0
462

ಚಿಕ್ಕೋಡಿ: ಬಸವೇಶ್ವರ ವೃತ್ತದಲ್ಲಿ ಮತ ಜಾಗೃತಿ ಬೈಕ್ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಬೆಳಗಾವಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ ಇವರು ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಚಿಕ್ಕೋಡಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು.

ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ ವತಿಯಿಂದ ಬುಧವಾರ ಏಪ್ರೀಲ್ 19 ರಂದು ಆಯೋಜಿಸಿದ್ದ ಮತ ಜಾಗೃತಿ, ಬೈಕ್ ಜಾಥಾ, ಬಸವೇಶ್ವರ  ವೃತ್ತದಿಂದ ,ಜಿಂಗಲ್ಸ (ಧ್ವನಿವರ್ದಕ)ಗಳ ಮೂಲಕ ಕಡಿಮೆ ಮತದಾನವಾಗಿರುವ ಸ್ಥಳಗಳಲ್ಲಿ ಸಂಚರಿಸುತ್ತ ಮತದಾನದ ಕುರಿತು ಘೋಷಣೆಗಳನ್ನು ಕೂಗುತ್ತ ಪ್ರಚಾರ ಹಾಗೂ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಎಮ ಎ ಪೋತದಾರ ಸಹಾಯಕ ಇಂಜಿನಿಯರ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ, ದೀಪಕ.ಕೆ. ಜಿಲ್ಲಾ ಯೋಜನಾ ವ್ಯವಸ್ಥಾಪಕರು ಜಿಲ್ಲಾ ಪಂಚಾಯತ್ ಬೆಳಗಾವಿ  ಸೇರಿಂದತೆ  ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.